ಸಚಿನ್ ಮಗಳಿಗೆ ಗೌರವ ನೀಡಿ.. ಬೀಚ್ ನಲ್ಲಿ ಸಾರಾ ತೆಂಡುಲ್ಕರ್ ಗ್ಲಾಮರ್ ಫೋಟೋ ನೋಡಿ ಫ್ಯಾನ್ಸ್ ಕಮೆಂಟ್

Published : Dec 23, 2024, 11:32 AM ISTUpdated : Dec 23, 2024, 11:36 AM IST
ಸಚಿನ್ ಮಗಳಿಗೆ ಗೌರವ ನೀಡಿ.. ಬೀಚ್ ನಲ್ಲಿ ಸಾರಾ ತೆಂಡುಲ್ಕರ್ ಗ್ಲಾಮರ್ ಫೋಟೋ ನೋಡಿ ಫ್ಯಾನ್ಸ್ ಕಮೆಂಟ್

ಸಾರಾಂಶ

ಆಸ್ಟ್ರೇಲಿಯಾದಲ್ಲಿರುವ ಸಾರಾ ತೆಂಡುಲ್ಕರ್, ತಮ್ಮ ಗ್ಲಾಮರಸ್ ಫೋಟೋಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದಾರೆ. ಹಸಿರು ಉಡುಪಿನಲ್ಲಿ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಅವರ ಫೋಟೋಗಳು ವೈರಲ್ ಆಗಿವೆ. ಕೆಲವು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಟ್ರೋಲ್ ಮಾಡಿದ್ದಾರೆ. ಸಚಿನ್‌ ಮಗಳು ಸಾರಾ, ಬ್ಯಾಡ್‌ ಕಮೆಂಟ್‌ ಮಾಡ್ಬೇಡಿ ಎಂದು ಫ್ಯಾನ್ಸ್‌ ವಿನಂತಿ ಮಾಡಿದ್ದಾರೆ. 

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ (Master Blaster Sachin Tendulkar)  ಮಗಳು ಸಾರಾ ತೆಂಡುಲ್ಕರ್ (Sara Tendulkar) ಯಾವ ಹೀರೋಯಿನ್ ಗೂ ಕಡಿಮೆ ಏನೆಲ್ಲ. ಅತ್ಯಂತ ಸುಂದರವಾಗಿರುವ ಸಾರಾ, ತಮ್ಮ ಸೌಂದರ್ಯದಿಂದಲೇ ಲಕ್ಷಾಂತರ ಫ್ಯಾನ್ಸ್ ಹೊಂದಿದ್ದಾರೆ. ಸಾರಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಆಗಾಗ ತಮ್ಮ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡ್ತಾ, ಫಾಲೋವರ್ಸ್ ಕಣ್ಣು ತಂಪು ಮಾಡ್ತಿರುತ್ತಾರೆ. ಈಗ ಸಾರಾ ಅವರ ಮತ್ತೊಂದಿಷ್ಟು ಫೋಟೋ ಸದ್ದು ಮಾಡಿದೆ. ಸಾರಾ ತೆಂಡುಲ್ಕರ್ ಅವರ ಲೆಟೆಸ್ಟ್ ಫೋಟೋ, ವಿಡಿಯೋಗಳು ವೈರಲ್ ಆಗ್ತಿವೆ. ಗ್ಲಾಮರಸ್ ಲುಕ್ (glamorous look) ನಲ್ಲಿ ಕಾಣಿಸಿಕೊಂಡಿರುವ ಸಾರಾ, ನೆಟ್ಟಿಗರ ಗಮನ ಸೆಳೆದಿದ್ದಾರೆ. ಹಾಗೆಯೇ ಟ್ರೋಲರ್ ಬಾಯಿಗೂ ಆಹಾರವಾಗಿದ್ದಾರೆ.

ಸಾರಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಅವರು ಲಿಜರ್ಡ್ ಐಲ್ಯಾಂಡ್ (Lizard Island) ನಲ್ಲಿ ಫೋಟೋಕ್ಕೆ ಪೋಸ್ ನೀಡಿದ್ದಾರೆ. ಸಾರಾ ತೆಂಡುಲ್ಕರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಒಂದಿಷ್ಟು ಫೋಟೋವನ್ನು ಪೋಸ್ಟ್ ಮಾಡಿ, ಲಿಜರ್ಡ್ ಐಲ್ಯಾಂಡ್ ಎಂದು ಶೀರ್ಷಿಕೆ ಹಾಕಿದ್ದಾರೆ. ಈ ಫೋಟೋದಲ್ಲಿ ಸಾರಾ ತೆಂಡುಲ್ಕರ್, ಗ್ರೀನ್ ಬಣ್ಣದ ಸಿಲ್ಕ್ ಡ್ರೆಸ್ ಧರಿಸಿದ್ದಾರೆ. ಸಮುದ್ರದ ನೀರಿನಲ್ಲಿ ಮಿಂದೇಳುವ ಸಾರಾ, ಸಮುದ್ರದ ಕಿನಾರೆಯಲ್ಲಿ ಒಂದಿಷ್ಟು, ನೀರು, ಮರಳಿನ ಮಧ್ಯೆ ಒಂದಿಷ್ಟು ಫೋಟೋಗಳಿಗೆ ಫೋಸ್ ನೀಡಿದ್ದಾರೆ. ಟೋನ್ಡ್ ಲೆಗ್ ಫೋಟೋ ಜೊತೆ ಚರ್ರಿ ಹಣ್ಣು ತಿನ್ನಲು ಪ್ರಯತ್ನಿಸುತ್ತಿರುವ ವಿಡಿಯೋ ಕೂಡ ಹಾಕಿದ್ದಾರೆ. ಸಾರಾ ಈ ಫೋಟೋಗಳನ್ನು ಫ್ಯಾನ್ಸ್ ಮೆಚ್ಚಿಕೊಂಡ್ರೆ ಕೆಲವರು ಟ್ರೋಲ್ ಮಾಡಿದ್ದಾರೆ. 

ನೀತಾ ಅಂಬಾನಿಯಿಂದ , ರಾಧಿಕಾ ಮರ್ಚಂಟ್’ವರೆಗೂ ಅಂಬಾನಿ ಮನೆ ವಧುಗಳ ಲುಕ್ ಹೇಗಿತ್ತು ನೋಡಿ

ಸ್ಟನ್ನಿಂಗ್, ಸೂಪರ್ ಎಂದಿರುವ ಫ್ಯಾನ್ಸ್, ಶುಭನಮ್ ಗಿಲ್ (Shubnam Gill) ಹಾಗೂ ಸಾರಾ ಮದುವೆ ನೋಡಲು ಕಾತುರರಾಗಿರೋದಾಗಿ ಕಮೆಂಟ್ ಮಾಡಿದ್ದಾರೆ. ಸಾರಾ ಡ್ರೆಸ್, ಲುಕ್ ಇಷ್ಟಪಟ್ಟಿರುವ ಫ್ಯಾನ್ಸ್, ಲಿಜರ್ಡ್ ಮಿಸ್ ಆಗಿದೆ ಎನ್ನುತ್ತಿದ್ದಾರೆ. ಕೆಲವರಿಗೆ ಸಾರಾ ಪೋಸ್ ಇಷ್ಟವಾಗಿಲ್ಲ. ತೆಂಡಲರ್ ಈ ಟೈಂನಲ್ಲಿ ಬ್ರೇಕ್ ಇಲ್ದೆ ಆಡಿ ರೆಕಾರ್ಡ್ ಮಾಡಿದ್ರು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಆದ್ರೆ ತೆಂಡುಲ್ಕರ್ ಫ್ಯಾನ್ಸ್, ಸಾರಾ ಬಗ್ಗೆ ಬ್ಯಾಡ್ ಕಮೆಂಟ್ ಮಾಡೋದನ್ನು ವಿರೋಧಿಸಿದ್ದಾರೆ. ತೆಂಡುಲ್ಕರ್ ಮಗಳು ಸಾರಾ, ದಯವಿಟ್ಟು ಗೌರವ ನೀಡಿ ಎಂದು ತಿರುಗೇಟು ನೀಡಿದ್ದಾರೆ.

ಸಾರಾ ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದು, 6.6 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಮುಂಬೈನ ಧೀರೂಭಾಯಿ ಅಂಬಾನಿ ಇಂಟರ್‌ನ್ಯಾಶನಲ್ ಸ್ಕೂಲ್‌ನಿಂದ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ  ಸಾರಾ ತೆಂಡೂಲ್ಕರ್,  ಯೂನಿವರ್ಸಿಟಿ ಕಾಲೇಜ್ ಲಂಡನ್‌ನಲ್ಲಿ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ವೈದ್ಯಕೀಯ ಶಿಕ್ಷಣ ಮುಗಿಸಿದ್ರು ಸಾರಾ ಆಯ್ದುಕೊಂಡಿದ್ದು ಫ್ಯಾಶನ್ ಲೋಕವನ್ನು. ಗ್ಲಾಮರ್ ಜಗತ್ತಿಗೆ ಪದಾರ್ಪಣೆ ಮಾಡಿರುವ ಸಾರಾ, 26ನೇ ವಯಸ್ಸಿನಲ್ಲಿ  ಕೋಟಿಗಳ ಒಡತಿಯಾಗಿದ್ದಾರೆ. ಪೌಷ್ಟಿಕಾಂಶದ ತರಬೇತುದಾರರಾಗಿ ಮತ್ತು ಮಾಡೆಲ್ ಆಗಿ ಹಣ ಸಂಪಾದನೆ ಮಾಡ್ತಿದ್ದಾರೆ.  

ಬಾಲಿವುಡ್ ತಾರೆಯರ ಸಕ್ಸಸ್‌ಪುಲ್ ಫ್ಯಾಷನ್ ಬ್ರ್ಯಾಂಡ್‌ಗಳು, ಹೃತಿಕ್ ರಿಂದ ಆಲಿಯಾ ಭಟ್‌ವರೆಗೆ

ಮಾಧ್ಯಮ ವರದಿಗಳ ಪ್ರಕಾರ, 2023 ರಲ್ಲಿ ಸಾರಾ ತೆಂಡೂಲ್ಕರ್ ಅವರ ಒಟ್ಟು ನಿವ್ವಳ ಮೌಲ್ಯ  50 ಲಕ್ಷದಿಂದ 1 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.  ಸಾರಾ ತಮ್ಮದೇ ಆದ ಆನ್‌ಲೈನ್ ವ್ಯವಹಾರ ನಡೆಸುತ್ತಿದ್ದಾರೆ. ಈ ವರ್ಷ ಭಾರತದಲ್ಲಿ ಕೊರಿಯನ್ ಬ್ಯೂಟಿ ಬ್ರ್ಯಾಂಡ್ ಲೇನೈಜ್‌ನ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾಗಿದ್ದಾರೆ. ಆರಂಭದಲ್ಲಿ ಸಾರಾ ಕ್ರಿಕೆಟ್ ಆಯ್ದುಕೊಳ್ತಾರೆ ಎನ್ನಲಾಗಿತ್ತು. ಆದ್ರೆ ಸಾರಾ ಸೆಳೆದಿದ್ದು ಫ್ಯಾಷನ್ ಲೋಕ. ಮಗಳ ಕೆಲಸಕ್ಕೆ ತೆಂಡುಲ್ಕರ್ ಹಾಗೂ ಅಂಜಲಿ ತೆಂಡುಲ್ಕರ್ ಸಂಪೂರ್ಣ ಬೆಂಬಲವಿದೆ. ಶುಭನಮ್ ಗಿಲ್ ಜೊತೆ ಸಾರಾ ಹೆಸರು ಸೇರಿಕೊಂಡಿದ್ದು, ಆಗಾಗ ಕ್ಯಾಮರಾ ಕಣ್ಣಿಗೆ ಈ ಜೋಡಿ ಸೆರೆಯಾಗಿ ಸುದ್ದಿ ಮಾಡಿದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಂಗಳೂರಿನ ವಿದ್ಯಾ ಸಂಪತ್ ಕರ್ಕೇರಾಗೆ ಮಿಸಸ್ ಅರ್ಥ್ ಇಂಟರ್‌ನ್ಯಾಷನಲ್ 2025 ಕಿರೀಟ!
ದರ್ಶನ್ 'ದಿ ಡೆವಿಲ್' ನಾಯಕಿ ರಚನಾ ರೈ ಸಾಮಾನ್ಯರಲ್ಲ, ಸ್ಪೆಷಲ್ ಲೇಡಿ!