ಅಂಬಾನಿ ಕಿರಿ ಸೊಸೆ, ಅನಂತ್ ಅಂಬಾನಿ ಮುದ್ದಿನ ಮಡದಿ ರಾಧಿಕಾ ಮರ್ಚೆಂಟ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಕ್ರಿಸ್ಮಸ್ ಲುಕ್ ವೈರಲ್ ಆಗಿದೆ. ಫ್ರೆಂಡ್ ಓರಿ ಜೊತೆ ಪಾರ್ಟಿ ಮಾಡಿರುವ ರಾಧಿಕಾ ಡ್ರೆಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಮುಖೇಶ್ ಅಂಬಾನಿ (Mukesh Ambani) ಹಾಗೂ ನೀತಾ ಅಂಬಾನಿ (Nita Ambani) ಮುದ್ದಿನ ಸೊಸೆ ರಾಧಿಕಾ ಮರ್ಚೆಂಟ್ (Radhika Merchant) ಹೊಸ ಲುಕ್ ವೈರಲ್ ಆಗಿದೆ. ಬೆಸ್ಟ್ ಫ್ರೆಂಡ್ ಓರಿ (Orry) ಜೊತೆ ರಾಧಿಕಾ ಫೋಟೋಕ್ಕೆ ಪೋಸ್ ನೀಡಿದ್ದು, ರಾಧಿಕಾ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಂಬಾನಿ ಫ್ಯಾಮಿಲಿ, ಪ್ರತಿಯೊಂದು ಹಬ್ಬವನ್ನು ಅದ್ಧೂರಿಯಾಗಿ ಆಯೋಜನೆ ಮಾಡುತ್ತದೆ. ಎಲ್ಲ ಧರ್ಮದ ಹಬ್ಬಗಳಿಗೂ ಸಮಾನ ಮಹತ್ವ ನೀಡುವ ಅಂಬಾನಿ ಕುಟುಂಬಸ್ಥರು, ವರ್ಷದ ಕೊನೆ ಹಬ್ಬ ಕ್ರಿಸ್ಮಸ್ (Christmas) ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಈ ಸಮಯದಲ್ಲಿ ರಾಧಿಕಾ ಮರ್ಚೆಂಟ್ ಹಾಗೂ ಒರಿ ಫೋಟೋ ಸೊಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಕ್ರಿಸ್ಮಸ್ ಪಾರ್ಟಿಯಲ್ಲಿ ಜಾನ್ವಿ ಕಪೂರ್, ಖುಷಿ ಕಪೂರ್, ವೇದಂಗ್ ರೈನಾ ಮತ್ತು ಓರಿ ಮುಂತಾದ ಅನೇಕ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ಪಾರ್ಟಿಯಲ್ಲಿ ಅಂಬಾನಿ ಕೊನೆ ಸೊಸೆ ರಾಧಿಕಾ ಲುಕ್ ಎಲ್ಲರ ಗಮನ ಸೆಳೆದಿದೆ. ಗುಜರಾತಿನ ಜಮಾನಗರದಲ್ಲಿ ಕ್ರಿಸ್ ಮಸ್ ಪಾರ್ಟಿ ನಡೆದಿದೆ. ಓರಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 10 – 12 ಫೋಟೋಗಳನ್ನು ಪೋಸ್ಟ್ ಮಾಡಿರುವ ಓರಿ, ಡ್ರೆಸ್ ಕೋಡ್: ಕ್ಯಾಶುಯಲ್, ಆರಾಮದಾಯಕ ಮತ್ತು ಅನುಕೂಲಕರ, ಓರಿ: ನನ್ನ ಪಾನೀಯವನ್ನು ಹಿಡಿಯಿರಿ ಎಂಬ ಶೀರ್ಷಿಕೆಯಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.
undefined
ಈ ಫೋಟೋದಲ್ಲಿ ರಾಧಿಕಾ ರೆಡ್ ಕಲರ್ ಹೈ ನೆಕ್ ಸ್ಟೈಲ್ ಸೆಲಿನ್ ಡ್ರೆಸ್ ಧರಿಸಿದ್ದಾರೆ. ಇದು ಬಲೂನ್ ಸ್ಲಿವ್ ಹೊಂದಿದ್ದು, ಶೈನ್ ಆಗ್ತಿದೆ. ಅದ್ರ ಮೇಲೆ ಬಿಳಿ ಅರ್ಧ ತೋಳಿನ ಫರ್ ಜಾಕೆಟ್ ಧರಿಸಿದ್ದಾರೆ. ಅದ್ರ ಮೇಲಿರುವ ಬಟನ್ ಜಾಕೆಟ್ ಗೆ ವಿಶೇಷ ಲುಕ್ ನೀಡಿದೆ. ಕಪ್ಪು ಬಣ್ಣದ ಶೂ ಅವರ ಸ್ಟೈಲ್ ಹೆಚ್ಚಿಸಿದೆ. ವಜ್ರದ ಕಿವಿಯೋಲೆ, ಉಂಗುರದ ಜೊತೆ ಐಷಾರಾಮಿ ವಾಚ್, ಶೈನಿಂಗ್ ಮೇಕಪ್ ಅವರನ್ನು ಭಿನ್ನವಾಗಿ ಕಾಣುವಂತೆ ಮಾಡಿದೆ. ಅಂಬಾನಿ ಸೊಸೆಯ ಈ ನೋಟವನ್ನು ಫ್ಯಾನ್ಸ್ ಮೆಚ್ಚಿದ್ದಾರೆ. ಮತ್ತಷ್ಟು ಸುಂದರವಾಗಿ ಕಾಣ್ತಿದ್ದೀರಿ, ಈ ಸ್ಟೈಲ್ ಅದ್ಭುತವಾಗಿದೆ ಎಂದೆಲ್ಲ ಕಮೆಂಟ್ ಮಾಡಿದ್ದಾರೆ.
ಇನ್ನು ಓದಿ, ಕಪ್ಪು ಟಿ ಶರ್ಟ್, ಕಪ್ಪು ಡೆನಿಮ್ ಜೀನ್ಸ್ ಧರಿಸಿದ್ದು, ಅದ್ರ ಮೇಲೆ ಫರ್ ಕೋಟ್ ಹಾಕಿದ್ದಾರೆ. ಕಪ್ಪು ಟೋಪಿಯೊಂದಿಗೆ ಕಪ್ಪು ಕನ್ನಡಕದಲ್ಲಿ ಮಿಂಚಿದ್ದಾರೆ. ಶ್ರೀಮಂತಿಕೆ ಪ್ರದರ್ಶಿಸೋದ್ರಲ್ಲಿ ಓರಿ ಯಾರಿಗೇನೂ ಕಡಿಮೆ ಇಲ್ಲ. 45 ಸಾವಿರ ರೂಪಾಯಿ ಮೌಲ್ಯದ ಗ್ಲಾಸ್, 1.20 ಲಕ್ಷ ರೂಪಾಯಿ ಮೌಲ್ಯದ ಬೂಟ್ ಧರಿಸಿರುವ ಓರಿ, ಪಾರ್ಟಿಗೆ ಬಂದ ಸೆಲೆಬ್ರಿಟಿ ಜೊತೆ ಫೋಟೋಕ್ಕೆ ಪೋಸ್ ನೀಡಿದ್ದಾರೆ.
ಈ ಪಾರ್ಟಿಯಲ್ಲಿ ರಾಧಿಕಾ ಮರ್ಚೆಂಟ್ ಮಾತ್ರ ಕಾಣಿಸಿಕೊಂಡಿದ್ದಾರೆ. ಅನಂತ್, ಶ್ಲೋಕಾ, ನೀತಾ, ಆಕಾಶ್, ಮುಖೇಶ್, ಇಶಾ ಸೇರಿದಂತೆ ಯಾವುದೇ ಅಂಬಾನಿ ಕುಟುಂಬದ ಸದಸ್ಯರಿಲ್ಲ. ರಾಧಿಕಾ,ಕುಟುಂಬಸ್ಥರ ಬದಲು ಈ ಬಾರಿ ಸ್ನೇಹಿತರ ಜೊತೆ ಕ್ರಿಸ್ ಮಸ್ ಎಂಜಾಯ್ ಮಾಡಿದ್ದಾರೆ. ಇತ್ತೀಚೆಗಷ್ಟೇ ರಾಧಿಕಾ ಎನ್‌ಎಂಎಸಿಸಿಯ ಆರ್ಟ್ ಕೆಫೆಯ ಬಿಡುಗಡೆ ಸಮಾರಂಭಕ್ಕೆ ಕಪ್ಪು ಬಣ್ಣದ ಡ್ರೆಸ್ ಧರಿಸಿ ಬಂದಿದ್ದರು. ಬ್ಯಾಂಗ್ಸ್‌ನೊಂದಿಗೆ ಹೊಸ ಹೇರ್‌ಕಟ್‌ನಲ್ಲಿ ಅವರ ಸ್ಟೈಲಿಶ್ ಲುಕ್ ಗಮನ ಸೆಳೆದಿತ್ತು. ಈ ಸಮಾರಂಭದಲ್ಲಿ ರಾಧಿಕಾ, ನೀತಾ ಅಂಬಾನಿ, ಶ್ಲೋಕಾ ಅಂಬಾನಿ, ಇಶಾ ಅಂಬಾನಿ ಜೊತೆ ಕಾಣಿಸಿಕೊಂಡಿದ್ದರು.