
ಬಾಲಿವುಡ್‌ನ ಧಕ್-ಧಕ್ ಹುಡುಗಿ ಮಾಧುರಿ ದೀಕ್ಷಿತ್ 59 ನೇ ವಯಸ್ಸಿನಲ್ಲಿಯೂ ಸಹ ತನ್ನ ಸೌಂದರ್ಯದಿಂದ ಜನರನ್ನು ಆಕರ್ಷಿಸುತ್ತಲೇ ಇದ್ದಾರೆ. 50 ವರ್ಷದ ನಂತರ, ಸುಕ್ಕುಗಳು ವೇಗವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗಲೂ, ನಟಿ ಸುಕ್ಕು ರಹಿತ ಚರ್ಮವನ್ನು ಕಾಯ್ದುಕೊಂಡಿದ್ದಾರೆ. ಅವರ ಚರ್ಮವು ಕಾಂತಿಯುತ ಮತ್ತು ದೃಢವಾಗಿದೆ. ಆದರೆ ಇದರ ಹಿಂದಿನ ಕಾರಣ ದುಬಾರಿ ಸೌಂದರ್ಯ ಚಿಕಿತ್ಸೆಗಳಲ್ಲ ಎಂದು ನಿಮಗೆ ತಿಳಿದಿದೆಯೇ? ಸೆಲೆಬ್ರಿಟಿಗಳು ದುಬಾರಿ ಸೌಂದರ್ಯ ಚಿಕಿತ್ಸೆಗಳನ್ನು ಬಳಸುತ್ತಾರೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ, ಆದರೆ ಮಾಧುರಿ ದೀಕ್ಷಿತ್ ಅವರ ನಿಜವಾದ ಸೌಂದರ್ಯವು ದುಬಾರಿ ಉತ್ಪನ್ನಗಳಿಂದಲ್ಲ, ಆದರೆ ನಿಯಮಿತ ಆರೈಕೆ, ಉತ್ತಮ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯಿಂದ ಬಂದಿದೆ ಎನ್ನುವುದನ್ನು ಸ್ವತಃ ನಟಿ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ಬಹಿರಂಗಪಡಿಸಿದ್ದಾರೆ.
ಉತ್ತಮ ಚರ್ಮಕ್ಕಾಗಿ ಸರಿಯಾದ ದೈನಂದಿನ ಆರೈಕೆ ಅತ್ಯಗತ್ಯ ಎಂದು ಮಾಧುರಿ ಹೇಳುತ್ತಾರೆ. ಅವರು ತಮ್ಮ ದಿನವನ್ನು ಸೌಮ್ಯವಾದ ಫೇಸ್ ಕ್ಲೆನ್ಸರ್‌ನೊಂದಿಗೆ ಪ್ರಾರಂಭಿಸುತ್ತಾರೆ, ಇದು ಚರ್ಮದ ಕೊಳಕು ಮತ್ತು ಮೇಕಪ್ ಅನ್ನು ತೆಗೆದುಹಾಕುತ್ತದೆ ಮತ್ತು ಚರ್ಮದ ನೈಸರ್ಗಿಕ ಎಣ್ಣೆಗಳನ್ನು ಸಂರಕ್ಷಿಸುತ್ತದೆ. ನಂತರ ಅವರು ಸಾಕಷ್ಟು ನೀರು ಕುಡಿಯುತ್ತಾರೆ, ಏಕೆಂದರೆ ದೇಹ ಮತ್ತು ಚರ್ಮವನ್ನು ಹೈಡ್ರೇಟ್ ಮಾಡುವುದು ಬಹಳ ಮುಖ್ಯ ಎನ್ನುತ್ತಾರೆ ನಟಿ. ಅವರು ತಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಲೈಟ್ ವೈಟ್ ಮಾಯಿಶ್ಚರೈಸರ್ ಅಥವಾ ಎಣ್ಣೆಯನ್ನು ಹಚ್ಚುತ್ತಾರೆ, ಇದು ಋತುವನ್ನು ಅವಲಂಬಿಸಿ ಬದಲಾಗುತ್ತದೆ. ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಸನ್ ಪ್ರೊಟೆಕ್ಷನ್ ಉತ್ತಮ ಮಾರ್ಗ ಎಂದು ಅವರು ನಂಬುವುದರಿಂದ ಅವರು ಸನ್‌ಸ್ಕ್ರೀನ್ ಹಚ್ಚೋದನ್ನು ಎಂದಿಗೂ ಮರೆಯೋದಿಲ್ಲ.
ಸೌಂದರ್ಯವು ಚರ್ಮದ ಆರೈಕೆ ಉತ್ಪನ್ನಗಳನ್ನು ಮಾತ್ರ ಅವಲಂಬಿತವಾಗಿಲ್ಲ, ಜೀವನಶೈಲಿಯ ಮೇಲೂ ಅವಲಂಬಿತವಾಗಿದೆ ಎನ್ನುತ್ತಾರೆ ಮಾಧುರಿ. ಅವರು ಹಣ್ಣುಗಳು, ತರಕಾರಿಗಳು ಮತ್ತು ಪ್ರೋಟೀನ್‌ಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವನ್ನು ಸೇವಿಸುತ್ತಾರೆ. ನಿದ್ರೆಯ ಸಮಯದಲ್ಲಿ ದೇಹ ಮತ್ತು ಚರ್ಮವು ತನ್ನನ್ನು ತಾನೇ ಸರಿಪಡಿಸಿಕೊಳ್ಳುವುದರಿಂದ ಉತ್ತಮ ನಿದ್ರೆ ಅತ್ಯಗತ್ಯ ಎಂದು ಅವರು ಪರಿಗಣಿಸುತ್ತಾರೆ. ನೃತ್ಯ ಮತ್ತು ವ್ಯಾಯಾಮವು ಅವರ ದೈನಂದಿನ ದಿನಚರಿಯ ಭಾಗವಾಗಿದೆ, ಇದು ದೇಹವನ್ನು ಸಕ್ರಿಯವಾಗಿರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಲು ಅವರು ಧ್ಯಾನ ಮತ್ತು ಸಕಾರಾತ್ಮಕ ಚಿಂತನೆಯನ್ನು ಸಹ ಅಭ್ಯಾಸ ಮಾಡುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.