ಅಶ್ವಗಂಧದ ಸೌಂದರ್ಯ ಲಹರಿ

By Web DeskFirst Published Mar 7, 2019, 3:44 PM IST
Highlights

 ಆಯುರ್ವೇದದಲ್ಲಿ ತುಳಸಿಯಂತೆ ಅಶ್ವಗಂಧಕ್ಕೂ ವಿಶೇಷ ಸ್ಥಾನಮಾನವಿದೆ. ಇದರ ಲಾಭ ಅಷ್ಟಿಷ್ಟಲ್ಲ. ಸೌಂದರ್ಯವನ್ನೂ ಹೆಚ್ಚಿಸುವಲ್ಲಿಯೂ ಇದರ ಪಾತ್ರ ಹಿರೀದು. ಅಷ್ಟಕ್ಕೂ ಇದನ್ನು ಬಳಸುವುದು ಹೇಗೆ?

ಆಯುರ್ವೇದದಲ್ಲಿ ಅಶ್ವಗಂಧದಿಂದ ಹಲವಾರು ಲಾಭಗಳಿವೆ. ಆದರಿದನ್ನು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಬದಲಾಗಿ ಸೌಂದರ್ಯಕ್ಕೂ ಹಲವು ಲಾಭಗಳಿವೆ. ಅಷ್ಟಕ್ಕೂ ಸೌಂದರ್ಯ ಹೆಚ್ಚಿಸಿಕೊಳ್ಳಲು ಅಶ್ವಗಂಧವನ್ನು ಬಳಸುವುದು ಹೇಗೆ..?

ಮುಖದ ಹೊಳಪಿಗೆ ನ್ಯಾಚುರಲ್ ಫೇಸ್‌ವಾಷ್...

  • ಅಶ್ವಗಂಧ‌ದಲ್ಲಿರುವ ಆ್ಯಂಟಿ ಬಯೋಟಿಕ್ಸ್ ತತ್ವ ವಯಸ್ಸಾಗುವಿಕೆ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಫ್ರೀ ರೇಡಿಕಲ್ಸ್‌ನಿಂದ ರಕ್ಷಿಸುತ್ತದೆ. 
  • ಅಶ್ವಗಂಧವನ್ನು ಟೋನರ್ ರೂಪದಲ್ಲಿಯೂ ಬಳಸುತ್ತಾರೆ. ಇದು ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. 
  • ಸ್ಕಾಲ್ಪ್‌ಗೆ ಇದರಿಂದ ಮಸಾಜ್ ಮಾಡಿಕೊಂಡರೆ, ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಇದರಿಂದ ಕೂದಲು ಸೊಂಪಾಗಿ, ಸದೃಢವಾಗಿ ಬೆಳೆಯುತ್ತದೆ. 
  • ತಲೆಹೊಟ್ಟು ಸಮಸ್ಯೆ ನಿವಾರಣೆಗೂ ಇದು ಒಳ್ಳೆ ಮದ್ದು. ಇದರಿಂದ ಕೂದಲು ಉದುರುವ ಸಮಸ್ಯೆ ಇರುವುದಿಲ್ಲ. 
  • ಇತ್ತೀಚಿನ ದಿನಗಳಲ್ಲಿ ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚಿದೆ. ಮೆಲನಿನ್ ಉತ್ಪಾದನೆ ಹೆಚ್ಚಿದ್ದರೆ ಕೂದಲು ಕಪ್ಪಾಗುತ್ತದೆ. ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ಅಶ್ವಗಂಧ ಸಹಾಯ ಮಾಡುತ್ತದೆ. 
click me!