ಮುಖದ ಹೊಳಪಿಗೆ ನ್ಯಾಚುರಲ್ ಫೇಸ್‌ವಾಷ್...

By Web Desk  |  First Published Mar 5, 2019, 9:08 AM IST

ಮುಖಕ್ಕೆ ಸೋಪಿಗಿಂತ ಫೇಸ್‌ವಾಷ್ ಬಳಸುವುದು ತ್ವಚೆಯ ದೃಷ್ಟಿಯಿಂದ ಒಳ್ಳೆಯ ಅಭ್ಯಾಸ. ಅದರಲ್ಲಿಯೂ ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಫೇಸ್‌ವಾಷ್ ಚರ್ಮದ ಆರೋಗ್ಯವನ್ನು ಹೆಚ್ಚು ಚೆನ್ನಾಗಿಡುತ್ತದೆ...


ತ್ವಚೆಗೆ ಯಾವ ಫೇಸ್‌ವಾಷ್ ಹೊಂದುತ್ತದೆ ಎಂದೇ ತಿಳಿಯುವುದಿಲ್ಲ. ಅದಕ್ಕೆ ಮಾರುಕಟ್ಟೆಗೆ ಬರೋದೆನ್ನೆಲ್ಲ ಬಳಸಿ ಮುಖದ ಅಂದವನ್ನು ಕೆಡಿಸಿಕೊಳ್ಳುತ್ತೇವೆ. ಈ ರೀತಿ ಆಗದಂತೆ ಮನೆಯಲ್ಲಿಯೇ ನೀವು ಪ್ರಾಕೃತಿಕ ಫೇಸ್‌ವಾಷ್ ತಯಾರಿಸಿಕೊಳ್ಳಬಹುದು. ಅದರಲ್ಲೂ ಹುಣಸೆ ಹಣ್ಣಿನ ಫೇಸ್ ವಾಶ್ ಮುಖವನ್ನು ಫ್ರೆಶ್ ಆಗಿರುವಂತೆ ಮಾಡಿ, ತ್ವಚೆ ಯನ್ನು ಸುಂದರಗೊಳಿಸುತ್ತೆ.

  • ಹುಣಸೆ ಹಣ್ಣಿನಲ್ಲಿ ಪೊಟ್ಯಾಶಿಯಂ, ಫಾಸ್ಪರಸ್, ಮೆಗ್ನೇಷಿಯಂ, ಕ್ಯಾಲ್ಸಿಯಂ, ಸೋಡಿಯಂ, ಐರನ್, ಪ್ರೊಟೀನ್ ಮತ್ತು ಸತುವಿನ ಅಂಶವಿದೆ. ಇದನ್ನು ಫೇಸ್ ವಾಷ್ ಆಗಿ ಬಳಸುವುದರಿಂದ ತ್ವಚೆಗೆ ಪ್ರಾಕೃತಿಕ ರೂಪದಲ್ಲಿ ಹೊಳಪು ಸಿಗುತ್ತದೆ. 
  • ಇದು ಮುಖದಲ್ಲಿರುವ ಕಲೆ - ಮೊಡವೆಗಳನ್ನು ನಿವಾರಿಸುತ್ತದೆ. ಹುಣಸೆಯಲ್ಲಿರುವ ಅಸಿಡಿಕ್ ಗುಣ ಮುಖಕ್ಕೆ ಪ್ರಾಕೃತಿಕ ಕ್ಲೀನರ್ ಮತ್ತು ಟೋನರ್ ದೊರೆಯುವಂತೆ ಮಾಡುತ್ತದೆ. 
  • ಈ ಫೇಸ್‌ವಾಷ್ ಬಳಸುವುದರಿಂದ ತ್ವಚೆಯ ಬಣ್ಣ ಸುಂದರವಾಗುತ್ತದೆ. ಸುಕ್ಕನ್ನು ನಿವಾರಿಸುತ್ತದೆ. 

Tap to resize

Latest Videos

ಹುಣಸೆ ಫೇಸ್ ವಾಶ್ ಮಾಡುವುದು ಹೇಗೆ? 

ಬೇಕಾಗುವ ಸಾಮಗ್ರಿಗಳು : 2 ಚಮಚ ಹುಣಸೆಹಣ್ಣಿನ ತಿರುಳು, ಒಂದು ಚಮಚ ಜೇನು, ಮೊಸರು, ಒಂದು ಚಮಚ ಜೊಜೊಬಾ ಎಣ್ಣೆ ಅಥವಾ ಬಾದಾಮಿ ಎಣ್ಣೆ, ಒಂದು ಚಮಚ ರೋಸ್ ವಾಟರ್, ಅರ್ಧ ಚಮಚ ವಿಟಾಮಿನ್ ಈ ಪುಡಿ ಅಥವಾ ಕ್ಯಾಪ್ಸುಲ್. 

  1. ಒಂದು ಕಪ್‌ನಲ್ಲಿ ಮೊಸರು ಮತ್ತು ಹುಣಸೆ ಹಣ್ಣಿನ ಪೇಸ್ಟ್ ಮಿಕ್ಸ್ ಮಾಡಿ. ಎರಡು ಚೆನ್ನಾಗಿ ಮಿಕ್ಸ್ ಆಗುವಂತೆ ನೋಡಿಕೊಳ್ಳಿ. 
  2. ಅದರಲ್ಲಿ ವಿಟಮಿನ್ ಇ ಪುಡಿ, ರೋಸ್ ವಾಟರ್, ಮತ್ತಿತರ ಸಾಮಗ್ರಿಗಳನ್ನು ಹಾಕಿ ಸೇರಿಸಿ. 
  3. ಎಲ್ಲಾ ಸಾಮಗ್ರಿಗಳ ಕೊನೆಗೆ ಜೇನು ಮತ್ತು ಜೊಜೊಬಾ ಅಥವಾ ಬಾದಾಮಿ ಎಣ್ಣೆ ಹಾಕಿ ಮಿಕ್ಸ್ ಮಾಡಿದರೆ ಹುಣಸೆ ಫೇಸ್ ವಾಷ್ ರೆಡಿ. ಇದನ್ನು ನೀವು ಗಾಳಿಯಾಡದ ಮುಚ್ಚಳವಿರೋ ಡಬ್ಬದಲ್ಲಿ ಸಂಗ್ರಹಿಸಿಡಬಹುದು. 
click me!