Arunachal Pradesh ‘bamboo airport’ Fact Check: ವಿಮಾನ ನಿಲ್ದಾಣದ ಅತ್ಯಾಕರ್ಷಕ ಒಳಾಂಗಣವನ್ನು ತೋರಿಸುವ ವೀಡಿಯೊವೊಂದು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು (ನ. 11): ಹಚ್ಚಹಸಿರಿನ ವಾತಾವರಣ ಕಲ್ಪನೆಯೊಂದಿಗೆ ನಿರ್ಮಿಸಿರುವ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport) ಎರಡನೇ ಟರ್ಮಿನಲ್‌ನ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದಾರೆ. ಈ ನಡುವೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫೋಟೋ ಹಾಗು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ವಿಮಾನ ನಿಲ್ದಾಣದ ಅತ್ಯಾಕರ್ಷಕ ಒಳಾಂಗಣವನ್ನು ತೋರಿಸುವ ವೀಡಿಯೊವೊಂದು ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಅರುಣಾಚಲ ಪ್ರದೇಶದ ವಿಮಾನ ನಿಲ್ದಾಣ ವಿಡಿಯೋ ಇದಾಗಿದ್ದು, ಸಂಪೂರ್ಣ ಬಿದಿರಿನಿಂದಲೇ ಮಾಡಲ್ಪಟ್ಟಿದೆ ಎಂದು ವೀಡಿಯೋವನ್ನು ಹಂಚಿಕೊಂಡವರು ಹೇಳಿಕೊಂಡಿದ್ದಾರೆ. ಆದರೆ ಈ ವಿಡಿಯೋ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ್ದು ಎಂದು ಫ್ಯಾಕ್ಟ್ ಚೆಕ್‌ನಲ್ಲಿ ಸಾಬೀತಾಗಿದೆ.
Claim: Video of the interior of an airport in Arunachal Pradesh, which has been constructed using bamboo | ಬಿದಿರು ಬಳಸಿ ನಿರ್ಮಿಸಲಾದ ಅರುಣಾಚಲ ಪ್ರದೇಶದ ವಿಮಾನ ನಿಲ್ದಾಣದ ಒಳಭಾಗದ ವಿಡಿಯೋ
Fact Check: ಪ್ರಧಾನಿ ಮೋದಿ ನವೆಂಬರ್ 11 ರಂದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್‌ನ ಮೊದಲ ಹಂತವನ್ನು ಉದ್ಘಾಟಿಸಿದ್ದಾರೆ. ಈ ಕುರಿತು ಸಾಕಷ್ಟು ಮಾಧ್ಯಮ ವರದಿಗಳು ಬಿತ್ತರವಾಗಿವೆ. ಇನ್ನು ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕೂಡ ವರದಿ ಮಾಡಿದೆ. ಈ ಕುರಿತ ವರದಿಗಳನ್ನು ಇಲ್ಲಿ ಹಾಗೂ ಇಲ್ಲಿ ನೋಡಬಹುದು
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಅನ್ನು ನವೆಂಬರ್ 11 ರಂದು ಉದ್ಘಾಟಿಸಲಿದ್ದಾರೆ pic.twitter.com/i193dlPd2W
— Asianet Suvarna News (@AsianetNewsSN)
ಪ್ರಯಾಣಿಕರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ನಿರ್ಮಿಸಿರುವ 2 ಟರ್ಮಿನಲ್ ಸದ್ಯ ಕಾರ್ಯಾಚರಣೆ ನಡೆಸುತ್ತಿರುವ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ನೂತನ ಟರ್ಮಿನಲ್ ಹೆಚ್ಚಿನ ವಿಸ್ತೀರ್ಣ, ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕ ಸ್ನೇಹಿ ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಒಳಾಂಗಣವು ಹಸಿರಿನಿಂದ ಕಂಗೊಳಿಸುತ್ತಿದೆ. ಇನ್ನು ಈ ಬಗ್ಗೆ ಅಕ್ಟೋಬರ್ 18ರಂದು ಆರೋಗ್ಯ ಸಚಿವ ಡಾ. ಸುಧಾಕರ್ ವಿಮಾನ ನಿಲ್ದಾಣ ನೂತನ ಟರ್ಮಿನಲ್‌ನ ವಿಡಿಯೋವನ್ನೂ ಹಂಚಿಕೊಂಡಿದ್ದರು.
Do have a look at the beautiful Terminal-2 of the Kempegowda International Airport set to be inaugurated by PM Sri on 11th November.
Billed as the garden terminal, Terminal-2 has been designed and developed to showcase the ethos of Namma Bengaluru as a garden city. pic.twitter.com/yxWymVAYaf
ಇನ್ನು ಅರುಣಾಚಲ ಪ್ರದೇಶದ ಇಟಾನಗರದ ಮೊದಲ ವಿಮಾನ ನಿಲ್ದಾಣವಾದ ದೋನಿ ಪೋಲೋ ವಿಮಾನ ನಿಲ್ದಾಣವು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ನವೆಂಬರ್ 8ರಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (Airports Authority of India)
ಟ್ವೀಟ್ ಪ್ರಕಾರ, ವಿಮಾನ ನಿಲ್ದಾಣವು ಬಿದಿರಿನಿಂದ ಮಾಡಲ್ಪಟ್ಟ ದೊಡ್ಡ ಪ್ರವೇಶದ್ವಾರವನ್ನು ಹೊಂದಿದೆ ಮತ್ತು ಇದು ರಾಜ್ಯ ಪಕ್ಷಿಯಾದ ಗ್ರೇಟ್ ಹಾರ್ನ್‌ಬಿಲ್‌ನ (Great Hornbill) ಆಕಾರವನ್ನು ಹೊಂದಿದೆ.
The construction work of Donyi Polo Airport, Itanagar is completed and the airport will soon commence flight operations. The huge state-of-the-art entry gate at the airport is built up of bamboo showcasing the shape of the state bird- the Great Hornbill. pic.twitter.com/UTzmBwtudl
— Airports Authority of India (@AAI_Official)
Conclusion: ಸಾಮಾಜಿಕ ಜಾಲತಾಣದಲ್ಲಿ ಅರುಣಾಚಲ ಪ್ರದೇಶದ ವಿಮಾನ ನಿಲ್ದಾಣದ್ದು ಎಂದು ಹಂಚಿಕೊಂಡಿರುವ ವೀಡಿಯೊ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2ರದ್ದು.
ಇದನ್ನೂ ಓದಿ: Fact Check: ವೈರಲ್ ವಿಡಿಯೋ ಕೇರಳದ ದೀಪೋತ್ಸವದ್ದಲ್ಲ, ಚೀನಾದ 'ಗೋಲ್ಡನ್ ಡ್ರ್ಯಾಗನ್' ಪರೇಡಿನದ್ದು
ಇದನ್ನೂ ಓದಿ: Fact Check: ಬಿಸಿ ತೆಂಗಿನ ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ: ವೈರಲ್ ಪೋಸ್ಟ್ ಸುಳ್ಳು