Fact Check: ಬಿಸಿ ತೆಂಗಿನ ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ: ವೈರಲ್ ಪೋಸ್ಟ್ ಸುಳ್ಳು

By Manjunath NayakFirst Published Nov 8, 2022, 1:07 PM IST
Highlights

Drinking Hot Coconut Water Kills Cancer Cells Fact Check: ತೆಂಗಿನ ನೀರನ್ನು ಕಾಯಿಸಿ ಕುಡಿಯುವುದರಿಂದ ಕ್ಯಾನ್ಸರ್ ಕೋಶಗಳು ಸಾಯುತ್ತವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ನವದೆಹಲಿ (ನ. 08): ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಸೇರಿದಂತೆ ವಿಭಿನ್ನ ಚಿಕಿತ್ಸಾ ವಿಧಾನದ ಪೋಸ್ಟಗಳು ವೈರಲ್‌ ಆಗುತ್ತಿರುತ್ತವೆ. ಇಂಥಹ ಹಲವು ಬಾರಿ ಫಾರ್ವಡ್‌ ಆಗಿರುವ ಮೆಸೆಜ್‌ಗಳನ್ನು ಓದಿದಿ ಬಳಿಕ ಕೆಲವರು ವೈದ್ಯರ ಸಲಹೆಯಿಲ್ಲದೆ ಚಿಕಿತ್ಸೆಯನ್ನು ಪ್ರಾರಂಭಿಸುತ್ತಾರೆ. ಅಲ್ಲದೇ ಇತರರಿಗೂ ಇಂಥಹ ಮೆಸೆಜ್‌ಗಳನ್ನು ಫಾರ್ವಡ್‌ ಮಾಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ತೆಂಗಿನ ನೀರನ್ನು ಕಾಯಿಸಿ ಕುಡಿಯುವುದರಿಂದ ಕ್ಯಾನ್ಸರ್ ಕೋಶಗಳು ಸಾಯುತ್ತವೆ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ಸದ್ಯ ಇಂತಹದ್ದೊಂದು ಸಂದೇಶ ಮತ್ತೆ ವೈರಲ್ ಆಗಿದ್ದು ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ.

ಟಾಟಾ ಮೆಮೋರಿಯಲ್ ಆಸ್ಪತ್ರೆಯ ಡಾ. ರಾಜೇಂದ್ರ ಬಡ್ವೆ ( Dr. Rajendra A. Badwe) ಹೆಸರಿನಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ಈ ಸಂದೇಶ ವೈರಲ್ ಆಗಿದೆ. ಆದರೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಫ್ಯಾಕ್ಟ್‌ ಚೆಕ್‌ನಲ್ಲಿ ಈ ಪೋಸ್ಟ್‌ ನಕಲಿ ಎಂದು ಸಾಬೀತಾಗಿದೆ. ಇಂಗ್ಲೀಷ್‌, ಹಿಂದಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಈ ಪೋಸ್ಟ್‌ ವೈರಲ್‌ ಆಗುತ್ತಿರುವುದು ಕಂಡುಬಂದಿದೆ. 

Claim: Drinking Hot Coconut Water Kills Cancer Cells | ಬಿಸಿ ತೆಂಗಿನ ನೀರಿನ ಸೇವನೆ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ

Fact Check: ಈ ವೈರಲ್‌ ಪೋಸ್ಟಿನ ಸತ್ಯಾಸತ್ಯತೆ ಪರೀಶಿಲಿಸಲು  ಪೊಸ್ಟಿನಲ್ಲಿ ಉಲ್ಲೇಖಿಸಿರುವ ವೈದ್ಯರ ಹೆಸರನ್ನು ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ಹಲವು ವರದಿಗಳು ಲಭ್ಯವಾಗಿವೆ. ಹಿಂದೂಸ್ತಾನ್ ಟೈಮ್ಸ್ (Hindustan Times) ಮತ್ತು ಟೈಮ್ಸ್ ಆಫ್ ಇಂಡಿಯಾ (Times of India) ಈ ಸಂಬಂಧ ವರದಿಗಳನ್ನು ಪ್ರಕಟಿಸಿವೆ. ಇನ್ನು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಡಾ. ಪ್ರೊ.ರಾಜೇಂದ್ರ ಬಡ್ವೆ ಅವರು ಈ ಸಂಬಂಧ ಮೇ 19, 2019ರಂದು ಪತ್ರಿಕಾ ಪ್ರಕಟಣೆಯನ್ನೂ ನೀಡಿದ್ದಾರೆ. ಬಿಸಿ ತೆಂಗಿನ ನೀರನ್ನು ಕ್ಯಾನ್ಸರ್‌ಗೆ ಚಿಕಿತ್ಸೆಗೆ ಅನುಮೋದಿಸಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.  ಸುಮಾರು 3 ವರ್ಷಗಳಿಂದ ಈ ವೈರಲ್‌ ಪೋಸ್ಟನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. 

Conclusion: ಟಾಟಾ ಮೆಮೋರಿಯಲ್ ಆಸ್ಪತ್ರೆಯ ಡಾ.ರಾಜೇಂದ್ರ ಬಡ್ವೆ ಬಿಸಿ ತೆಂಗಿನ ನೀರು ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ ಎಂದು ಹೇಲಿಲ್ಲ. ಹೀಗಾಗಿ ವೈರಲ್ ಪೋಸ್ಟ್ ನಕಲಿ ಎಂದು ಫ್ಯಾಕ್ಟ್‌ ಚೆಕ್‌ನಲ್ಲಿ ಸಾಬೀತಾಗಿದೆ. 

ಇದನ್ನೂ ಓದಿ: Fact Check: 'ಕೇರಳ ಹಿಂದೂ ಮಹಿಳೆ ಐಸಿಸ್‌ ಸೇರ್ಪಡೆ' ವೈರಲ್ ವಿಡಿಯೋ The Kerala Story ಚಿತ್ರದ ಟೀಸರ್ನದ್ದು

click me!