Fact Check: ವೈರಲ್‌ ವಿಡಿಯೋ ಕೇರಳದ ದೀಪೋತ್ಸವದ್ದಲ್ಲ, ಚೀನಾದ 'ಗೋಲ್ಡನ್‌ ಡ್ರ್ಯಾಗನ್‌' ಪರೇಡಿನದ್ದು

By Manjunath Nayak  |  First Published Nov 10, 2022, 12:03 PM IST

Kerala Deepotsava Viral Video Fact Check: ನದಿಯಲ್ಲಿ ನಿರ್ದಿಷ್ಟ ಲಯದಲ್ಲಿ ದೀಪಗಳಿಂದ ಅಲಂಕರಿಸಲ್ಪಟ್ಟ ಹಡಗುಗಳು ಚಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 


ನವದೆಹಲಿ (ನ. 10): ನದಿಯಲ್ಲಿ ನಿರ್ದಿಷ್ಟ ಲಯದಲ್ಲಿ ದೀಪಗಳಿಂದ ಅಲಂಕರಿಸಲ್ಪಟ್ಟ ಹಡಗುಗಳು ಚಲಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ವಿಡಿಯೋ ನೋಡಿದರೆ ಡ್ರ್ಯಾಗನ್ (Dragon) ನದಿಯಲ್ಲಿ ನಿಧಾನವಾಗಿ ಚಲಿಸುತ್ತಿರುವಂತೆ ಕಾಣುತ್ತಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಕೆಲವರು ಇದು ಕೇರಳದ (Kerala) ನದಿಯೊಂದರಲ್ಲಿ  240/250 ದೋಣಿಗಳೊಂದಿಗೆ ಆಚರಿಸಿದ ದೀಪೋತ್ಸವ (Deepotsava) ಎಂದು ಹೇಳಿದ್ದಾರೆ. ಆದರೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಫ್ಯಾಕ್ಟ್‌ ಚೆಕ್‌ (Fact Check) ಮಾಡಿದಾಗ ಈ ಹೇಳಿಕೆಯು ತಪ್ಪು ದಾರಿಗೆಳೆಯುತ್ತಿರುವುದು ಸಾಬೀತಾಗಿದೆ. ವೈರಲ್ ಆಗುತ್ತಿರುವ ವೀಡಿಯೋ ಕೇರಳದ್ದಲ್ಲ ಬದಲಾಗಿ ಚೀನಾದ ಯುಲಾಂಗ್ ನದಿಯಲ್ಲಿ ನಡೆದ ಡ್ರ್ಯಾಗನ್ ಉತ್ಸವದ (Golden Dragon) ವೀಡಿಯೊವಾಗಿದೆ ಎಂದು ಫ್ಯಾಕ್ಟ್‌ಚೆಕ್‌ನಲ್ಲಿ (Fact Check) ತಿಳಿದುಬಂದಿದೆ. 

Claim: The video shows ‘Deepotsava’ from Kerala. 240 boats sailing in the river with lamps | ಕೇರಳದಲ್ಲಿ 250 ಹಡಗುಗಳನ್ನು ಬಳಸಿ ನದಿಯಲ್ಲಿ ದಿಪೋತ್ಸವ ಆಚರಿಸುತ್ತಿರುವ ವಿಡಿಯೋ 

Latest Videos

ಸಾಮಾಜಿಕ ಮಾಧ್ಯಮದಲ್ಲಿ ಹಲವರು ಇದೇ ವಿಡಿಯೋವನ್ನು ವಿವಿಧ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ. ಯೂಟ್ಯೂಬ್‌ ಹಾಗೂ ಫೇಸ್‌ಬುಕ್‌ ರೀಲ್ಸ್‌ಗಳಲ್ಲೂ ಕೂಡ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು ಕೇರಳದ ದೀಪೋತ್ಸವ ಎಂದು ವಿವರಿಸಿದ್ದಾರೆ.

Fact Check: ವೈರಲ್‌ ವಿಡಿಯೋದ ಸ್ಕೀನ್‌ಶಾಟ್ಸ್‌ ತೆಗೆದುಕೊಂಡು ಗೂಗಲ್ ಲೆನ್ಸ್ ಸರ್ಚ್‌ (Google Lens) ಮಾಡಿದಾಗ ರೆಡ್ಡಿಟ್‌ನ ಈ ಪೋಸ್ಟ್‌ (Reddit) ಲಭ್ಯವಾಗುತ್ತದೆ. ರೆಡ್ಡಿಟ್‌ ಪೋಸ್ಟಿನಲ್ಲಿ ಇದನ್ನು ಚೀನಾದ ಗೋಲ್ಡನ್‌ ಡ್ರ್ಯಾಗನ್‌ ವಿಡಿಯೋ ಎಂದು ಬರೆಯಲಾಗಿದೆ. ಈ ಕೀವರ್ಡ್‌ಗಳನ್ನು ಬಳಸಿ ಇನ್ನಷ್ಟು ತನಿಖೆ ನಡೆಸಿದಾಗ ಯುಟ್ಯೂಬ್‌ನಲ್ಲಿ ಹಲವು ವಿಡಿಯೋಗಳು ಪತ್ತೆಯಾಗಿವೆ. ಸೋಷಿಯಲ್‌ ಮೀಡಿಯಾದಲ್ಲಿ  ವೈರಲ್ ಆಗುತ್ತಿರುವ ವೀಡಿಯೊಗೆ ಯುಟ್ಯೂಬ್‌ನಲ್ಲಿ ಸಿಕ್ಕ ವಿಡಿಯೋಗಳು ಹೊಂದಿಕೆಯಾಗುತ್ತವೆ. ಜುಲೈ 4 2022ರಂದು ನ್ಯೂ ಚೀನಾ ಟಿವಿ (New China TV) ಯುಟ್ಯೂಬ್‌ನಲ್ಲಿ ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ಈ ವೈರಲ್‌ ವಿಡಿಯೋ ದೃಶ್ಯಗಳನ್ನು ನಾವು ಕಂಡುಕೊಂಡಿದ್ದೇವೆ. 

 

ಇನ್ನು ಚೀನಾ ಡೇಲಿ (China Daily) ವೆರಿಫೈಡ್‌ ಟ್ವೀಟರ್‌ ಖಾತೆಯಲ್ಲೂ ಈ ವಿಡಿಯೋವನ್ನು ಹಂಚಿಕೊಂಡಿದೆ. ನೀಡಿರುವ ಮಾಹಿತಿಯ ಪ್ರಕಾರ, ಈ ವಿಡಿಯೋ ದಕ್ಷಿಣ ಚೀನಾದ ಗುವಾಂಗ್ಸಿಯಲ್ಲಿ (Guangxi) ನಡೆದ ಡ್ರ್ಯಾಗನ್ ಪರೇಡ್‌ನದ್ದು. ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಪ್ರವಾಸಿಗರನ್ನು ಆಕರ್ಷಿಸಲು ಲ್ಯಾಂಟರ್ನ್‌ಗಳಿಂದ ಅಲಂಕರಿಸಲ್ಪಟ್ಟ ದೋಣಿಗಳ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. 

 

A row of bamboo rafts cruise on the Yulong River in Guilin, Guangxi, lighting up the river like a golden dragon. pic.twitter.com/E6naMLQNXO

— China Daily (@ChinaDaily)

 

Conclusion: ದಕ್ಷಿಣ ಚೀನಾದ ಗುವಾಂಗ್ಸಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ನದಿಯಲ್ಲಿ ಡ್ರ್ಯಾಗನ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ  ವೀಡಿಯೊವು ಕೇರಳದಲ್ಲಿ ಆಚರಿಸಿದ ದೀಪೋತ್ಸವ ಎಂಬ ತಪ್ಪುದಾರಿಗೆಳೆಯುವ ಹೇಳೆಯೊಂದಿಗೆ ವೈರಲ್‌ ಆಗಿದೆ. 

ಇದನ್ನೂ ಓದಿ: Fact Check: ಬಿಸಿ ತೆಂಗಿನ ನೀರು ಕ್ಯಾನ್ಸರನ್ನು ಗುಣಪಡಿಸುವುದಿಲ್ಲ: ವೈರಲ್ ಪೋಸ್ಟ್ ಸುಳ್ಳು 

ಇದನ್ನೂ ಓದಿ: Fact Check: 'ಕೇರಳ ಹಿಂದೂ ಮಹಿಳೆ ಐಸಿಸ್‌ ಸೇರ್ಪಡೆ' ವೈರಲ್ ವಿಡಿಯೋ The Kerala Story ಚಿತ್ರದ ಟೀಸರ್ನದ್ದು

click me!