ಏನಪ್ಪಾ! ಆರ್ಯವರ್ಧನ್‌ಗೆ ಅನು ಮಾತ್ರ ಅನ್ಕೊಂಡ್ರೆ ಊರ್‌ ಹುಡ್ಗಿರೆಲ್ಲಾ ಫ್ಯಾನ್ಸ್!

By Web Desk  |  First Published Sep 25, 2019, 1:48 PM IST

ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್‌ನಲ್ಲಿ ಹುಡುಗಿಯರ ನಿದ್ದೆಗೆಡಿಸಿರುವ ಅರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಮೋಡಿಗೆ ಬಿದ್ದ ಹುಡುಗಿಯರು ಒಬ್ಬರಾ ಇಬ್ಬರಾ? 'ಜೊತೆ ಜೊತೆಯಲಿ' ಆರ್ಯವರ್ಧನ್ ಸರ್ ಮಾಡುತ್ತಿರುವ ಕಮಾಲ್ ಇದು!


ವರ್ಧನ್ ಗ್ರೂಪ್ ಆಫ್ ಕಂಪನಿ ಮಾಲಿಕ ಆರ್ಯವರ್ಧನ್ 45 ವರ್ಷದ ಉದ್ಯಮಿ, ವಯಸ್ಸಿಗೆ ತಕ್ಕಂತೆ ಘನತೆ, ಗಾಂಭೀರ್ಯ, ಪ್ರಬುದ್ಧತೆ ಇರುವ ವ್ಯಕ್ತಿ. ಇತ್ತ ಇನ್ನೂ ಕಾಲೇಜು ಓದುತ್ತಿರುವ ಅನು ಇನ್ನೂ ಹುಡುಗಾಟಿಕೆ ಬುದ್ಧಿಯಿರುವ ಮುದ್ಮುದ್ದು ಹುಡುಗಿ. ಇವರಿಬ್ಬರ ನಡುವೆ ಪರಿಚಯ, ಸ್ನೇಹ, ಆತ್ಮೀಯತೆ ರೋಮಾಂಚನ ಹುಟ್ಟಿಸುವಂತಿದೆ.

'ಮಿಥುನ ರಾಶಿ' ವಿಲನ್ ಕೋಳಿ ಹಿಡಿಯುವುದರಲ್ಲಿ ಸೂಪರ್ ಡೂಪರ್!

Tap to resize

Latest Videos

undefined

ಆರ್ಯವರ್ಧನ್ ಸ್ಟೈಲ್, ಮ್ಯಾನರಿಸಂ, ಡೌನ್ ಟು ಅರ್ಥ್ ನೇಚರ್ ಎಲ್ಲಾ ಹುಡುಗಿಯರ ಹಾರ್ಟ್ ಗೆದ್ದಿದೆ. ತಮ್ಮ ಕನಸಿನ ಹುಡುಗನೂ ಆರ್ಯವರ್ಧನ್ ರೀತಿ ಇರಬೇಕೆಂದು ಡೇ ಡ್ರೀಮ್ ಕಾಣುತ್ತಿದ್ದಾರೆ. ಅನಿರುದ್ಧ್ ಆ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ.

ಧಾರಾವಾಹಿ ಮುಗಿದರೂ ‘ಕಿನ್ನರಿ’ ಬೆನ್ನತ್ತಿದ್ದಾರೆ ಅಭಿಮಾನಿಗಳು!

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ರೇಟೆಡ್‌ ಧಾರಾವಾಹಿ 'ಜೊತೆ ಜೊತೆಯಲಿ' ಶುರುವಾಗಿ ಒಂದೇ ವಾರದಲ್ಲಿ ಸೂಪರ್ ಹಿಟ್‌ ಆಗಿದೆ. ಐಶಾರಾಮಿ ಜೀವನ ನಡೆಸುತ್ತಿರುವ 45 ವರ್ಷದ ಆರ್ಯವರ್ಧನ್ ಹಾಗೂ ಮಿಡಲ್ ಕ್ಲಾಸ್‌ ಜೀವನದಲ್ಲೇ ಬಿಂದಾಸ್‌ ಲೈಫ್‌ ನಡೆಸುತ್ತಿರುವ 20 ವರ್ಷದ ಅನು ಕಾಂಬಿನೇಷನ್ ಪ್ರೇಕ್ಷಕರ ಮನಸ್ಸು ಗೆದ್ದಿದೆ.

ಆರ್ಯವರ್ಧನ್ ವರ್ಧನ್‌ ಗ್ರೋಪ್‌ ಆಫ್‌ ಕಂಪನಿಯ ಮಾಲೀಕರಾಗಿದ್ದು ಸಿಂಪಲ್‌ ಲೈಫನ್ನು ಎಂದೂ ಕಂಡವರಲ್ಲ. ಕೋಟಿಗಳಲ್ಲೇ ವ್ಯವಹಾರ ಮಾಡುವ ಇವರಿಗೆ ಒಂದೊಂದು ರೂಪಾಯಿ ಬೆಲೆ ಹೇಳಿಕೊಡುವ ಅನು ವರ್ಧನ್ ಆಫೀಸಿನಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲಿಯೂ ಸ್ಥಾನ ಪಡೆದಿದ್ದಾರೆ.

'ಜೊತೆ ಜೊತೆಯಲಿ' ಆರ್ಯವರ್ಧನ್‌ಗೆ ಜೋಡಿಯಾದ ಅನು; ಯಾರಿವರು?

ಸಾಹಸ ಸಿಂಹ ವಿಷ್ಣುವರ್ಧನ್‌ ಅವರ ಮುದ್ದಿನ ಅಳಿಯ ಅನಿರುದ್ಧ್ ಅವರ ಮೊದಲನೇ ಧಾರಾವಾಹಿ ‘ಜೊತೆಜೊತೆಯಲಿ’ ಗೆ ಸಿಕ್ಕಾಪಟ್ಟೆ ಪಾಸಿಟಿವ್ ರೆಸ್ಪಾನ್‌ ಸಿಗುತ್ತಿದೆ. ಜೀ ಕನ್ನಡ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಸಣ್ಣ ಪುಟ್ಟ ತುಣುಕುಗಳು ಪ್ರೇಕ್ಷಕರ ಕ್ಯೂರಿಯಾಸಿಟಿ ಹೆಚ್ಚಿಸುತ್ತದೆ. ಸೆಪ್ಟೆಂಬರ್ 9 ರಿಂದ ರಾತ್ರಿ 8.30 ಕ್ಕೆ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಟಿಅರ್‌ಪಿಯಲ್ಲಿ ಮೊದಲ ಸ್ಥಾನ ಗಳಿಸಿದೆ.

click me!