ಮಾರ್ಚ್​ 19ಕ್ಕೆ ಬಾಕ್ಸ್ ಆಫೀಸ್ ಉಡೀಸ್! ಧುರಂಧರ್ 60, ಟಾಕ್ಸಿಕ್ 40; ಏನಿದು 60x40 ಲೆಕ್ಕ? ಫಸ್ಟ್ ಡೇ ಕಲೆಕ್ಷನ್ ಯಾರಿಗೆ ಸಿಂಹಪಾಲು?

Published : Feb 13, 2026, 02:25 PM IST
Dhurandhar 2 vs Toxic

ಸಾರಾಂಶ

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಮತ್ತು ರಣವೀರ್ ಸಿಂಗ್ ಅವರ 'ಧುರಂಧರ್-2' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ದೊಡ್ಡ ಬಾಕ್ಸಾಫೀಸ್ ಕ್ಲ್ಯಾಶ್ ಸೃಷ್ಟಿಯಾಗಿದೆ.  ಈ ಆರ್ಟಿಕಲ್ ಎರಡೂ ಸಿನಿಮಾದ ಮೊದಲ ದಿನದ ಗಳಿಕೆಯ ನಿರೀಕ್ಷೆಗಳನ್ನು ವಿವರಿಸುತ್ತದೆ.

ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಮತ್ತು ರಣವೀರ್ ಸಿಂಗ್ ನಟನೆಯ ಧುರಂಧರ್-2 ಸಿನಿಮಾಗಳ ನಡುವಿನ ಕ್ಲ್ಯಾಶ್​ ಸದ್ಯ ಸಿನಿಲೋಕದಲ್ಲಿ ದೊಡ್ಡ ಕುತೂಹಲ ಮೂಡಿಸಿದೆ. ಈ ಎರಡೂ ಬಿಗ್ ಸಿನಿಮಾಗಳ ನಡುವಿನ ಸ್ಕ್ರೀನ್ಸ್ ಶೇರ್ ಅಂಡ್ ವಾರ್ ಬಗ್ಗೆ ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ ಏನು? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ.

ಮಾರ್ಚ್​ 19ಕ್ಕೆ ಸಿನಿಲೋಕದ ಬಿಗ್ಗೆಸ್ಟ್ ಬಾಕ್ಸಾಫೀಸ್ ಕ್ಲ್ಯಾಶ್!

ಯೆಸ್ ಮಾರ್ಚ್ 19 ಸಿನಿದುನಿಯಾದ ಅತಿದೊಡ್ಡ ಬಾಕ್ಸಾಫೀಸ್ ಕ್ಲ್ಯಾಶ್ ನಡೆಯೋದು ಫಿಕ್ಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್, ರಣವೀರ್ ಸಿಂಗ್ ನಟನೆಯ ಧುರಂಧರ್-2 ಮೂವಿಗಳು ಆ ದಿನ ಥಿಯೇಟರ್​​ನಲ್ಲಿ ಮುಖಾಮುಖಿ ಆಗ್ತಾ ಇವೆ. ಎರಡೂ ಕೂಡ ಪ್ಯಾನ್ ಇಂಡಿಯಾದಾದ್ಯಂತ ದೊಡ್ಡ ನಿರೀಕ್ಷೆ ಇರೋ ಸಿನಿಮಾಗಳು. ಸೋ ಎರಡೂ ಚಿತ್ರಗಳ ಕ್ಲ್ಯಾಶ್ ತಪ್ಪಿಸುವಂತೆ ವಿತರಕರ ಒತ್ತಡ ಕೂಡ ಇತ್ತು. ಆದ್ರೂ ಎರಡೂ ಚಿತ್ರತಂಡಗಳು ಅದೇ ಡೇಟ್​ನ ಲಾಕ್ ಮಾಡಿಕೊಂಡಿವೆ. ಈಗೇನಿದ್ರೂ ನೋ ಮಾತುಕತೆ ಓನ್ಲಿ ವಾರ್..!

ಟಾಕ್ಸಿಕ್ Vs ಧುರಂಧರ್ - ಬಾಕ್ಸಾಫೀಸ್ ವಾರ್

ಉತ್ತರ ಭಾರತ ಸ್ಕ್ರೀನ್ಸ್ ಹಂಚಿಕೆ

ಧುರಂಧರ್ - 55-60 %

ಟಾಕ್ಸಿಕ್ - 40-45 %

ಕರ್ನಾಟಕ ಸ್ಕ್ರೀನ್ಸ್ ಹಂಚಿಕೆ

ಧುರಂಧರ್ - 15-20 %

ಟಾಕ್ಸಿಕ್ - 80-85 %

ಆಂಧ್ರ, ತೆಲಂಗಾಣ, ತಮಿಳುನಾಡು ಸ್ಕ್ರೀನ್ಸ್ ಹಂಚಿಕೆ

ಧುರಂಧರ್ - 50 %

ಟಾಕ್ಸಿಕ್ - 50 %

ಸದ್ಯ ವಿತರಕರ ವಲಯದ ಲೆಕ್ಕಾಚಾರದ ಪ್ರಕಾರ ಉತ್ತರ ಭಾರತದಲ್ಲಿ ಧುರಂಧರ್​ಗೆ 55 ರಿಂದ 60 ಪರ್ಸೆಂಟ್ ಸ್ಕ್ರೀನ್ಸ್ ಸಿಕ್ರೆ, ಟಾಕ್ಸಿಕ್‌ಗೆ 40 ರಿಂದ 45 ಪರ್ಸೆಂಟ್ ಸ್ಕ್ರೀನ್ ಸಿಗಲಿವೆ. ಇನ್ನೂ ಕರ್ನಾಟಕದಲ್ಲಿ ಖಂಡಿತ ಯಶ್ ಮೇಲುಗೈ ಇದ್ದೇ ಇರುತ್ತೆ. ಶೇ 80 ಸ್ಕ್ರೀನ್ಸ್ ಟಾಕ್ಸಿಕ್‌ಗೆ ಸಿಕ್ರೆ ಶೇ.20 ಧುರಂಧರ್ ಪಾಲಾಗಲಿವೆ. ಆಂಧ್ರ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಶೇ.50 - 50 ಪಾಲಾಗಲಿವೆ.

ಸದ್ಯದ ಸ್ಕ್ರೀನ್ ಲೆಕ್ಕಾಚಾರದ ಪ್ರಕಾರ ಟಾಕ್ಸಿಕ್ ಮೊದಲ ದಿನ 80 ಕೋಟಿ ಗಳಿಸಿದ್ರೆ, ಧುರಂಧರ್ 60 ಕೋಟಿ ಗಳಿಸೋ ಸಾಧ್ಯತೆ ಇದೆ. ಆದ್ರೆ ಇದೆಲ್ಲಾ ಪ್ರೀ ರಿಲೀಸ್ ಲೆಕ್ಕಾಚಾರ. ಸಿನಿಮಾ ರಿಲೀಸ್ ಆದ ಮೇಲೆ ಅದು ಹೇಗಿರುತ್ತೆ ಅನ್ನೋದರ ಮೇಲೆ ಅಸಲಿ ಬಾಕ್ಸಾಫೀಸ್ ಲೆಕ್ಕಾಚಾರ ನಿರ್ಧಾರ ಆಗಲಿದೆ. ಸೋ ರಾಯ ಮತ್ತು ಧುರಂಧರನ ನಡುವೆ ಯಾರಿಗೆ ಗೆಲುವು ಕಾದುನೋಡಬೇಕು.

- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್ ಬಾಸ್ ಮನೆಯ ಚಿಕ್ಕವ್ವ ದೊಡ್ಡವ್ವ ಜೊತೆ ನಿತ್ಕೊಂಡು ಗಿಲ್ಲಿ ನಟನ ಕಿವಿ ಹಿಂಡಿದ ಒಳ್ಳೆ ಹುಡುಗ ಪ್ರಥಮ್!
ದಾಸನ ಬರ್ತಡೇಗೂ ಮುನ್ನ ಗುಡ್ ನ್ಯೂಸ್ : ಕಾನೂನಿನ ಆ ಅವಕಾಶ ಬಳಸಿಕೊಂಡು ಜೈಲಿನಿಂದ ಹೊರಬರಲು ದಿನಾಂಕ ಫಿಕ್ಸ್?