ದಾಸನ ಬರ್ತಡೇಗೂ ಮುನ್ನ ಗುಡ್ ನ್ಯೂಸ್ : ಕಾನೂನಿನ ಆ ಅವಕಾಶ ಬಳಸಿಕೊಂಡು ಜೈಲಿನಿಂದ ಹೊರಬರಲು ದಿನಾಂಕ ಫಿಕ್ಸ್?

Published : Feb 13, 2026, 01:10 PM IST
Darshan

ಸಾರಾಂಶ

ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು 'ಡಿ ಉತ್ಸವ'ವಾಗಿ ಆಚರಿಸುತ್ತಿದ್ದಾರೆ. ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಮುಗಿದ ನಂತರ, ಈ ವರ್ಷದ ಮಧ್ಯಭಾಗದಲ್ಲಿ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೂ ಮೂರೇ ದಿನ ಬಾಕಿ ಇವೆ. ಅಭಿಮಾನಿಗಳೇನೋ ದರ್ಶನ್ ಇಲ್ಲದೇ ಬರ್ತ್​ಡೇ ಸೆಲೆಬ್ರೇಟ್ ಮಾಡ್ಲಿಕ್ಕೆ ಸಜ್ಜಾಗಿದ್ದಾರೆ. ಆದ್ರೆ ದಾಸ ಹೊರಬರೋದು ಯಾವಾಗ ಅನ್ನೋದು ಅಭಿಮಾನಿಗಳ ಮನದಲ್ಲಿರೋ ಪ್ರಶ್ನೆ. ಈ ಹಿಂದೆ ಸುಪ್ರೀಂ ಕೋರ್ಟ್ ದರ್ಶನ್ ಬೇಲ್ ಮಾಡಿದ್ದು, ಮುಂದೆ ದರ್ಶನ್‌ಗೆ ಬೇಲ್ ಸಿಕ್ಕೋದು ಯಾವಾಗ? ದರ್ಶನ್ ಹೊರಬರೋದು ಯಾವಾಗ? ಆ ಕುರಿತ ಎಕ್ಸ್​ಕ್ಸೂಸಿವ್ ಸ್ಟೋರಿ ಇಲ್ಲಿದೆ ನೋಡಿ.

ಜೈಲಲ್ಲೇ ದರ್ಶನ್ ಹುಟ್ಟುಹಬ್ಬ. ಫ್ಯಾನ್ಸ್ ‘ಡಿ ಉತ್ಸವ’!

ಯೆಸ್ ಇದೇ 16ನೇ ದರ್ಶನ್ ಬರ್ತ್​​ಡೇ. ಈ ಬಾರಿ ದರ್ಶನ್‌ಗೆ ಜೈಲಲ್ಲೇ ಹುಟ್ಟುಹಬ್ಬ ಅನ್ನೋದಂತೂ ಫಿಕ್ಸ್. ಇತ್ತ ಅಭಿಮಾನಿಗಳು ದರ್ಶನ್ ಇಲ್ಲದೇ ಡಿ ಉತ್ಸವ ಮಾಡೋದಕ್ಕೆ ಸಜ್ಜಾಗಿದ್ದಾರೆ. ಆದ್ರೆ ಅಸಲಿ ಉತ್ಸವ ಅಂದ್ರೆ ಅದು ದರ್ಶನ್ ಹೊರಬಂದ ದಿನವೇ ಅನ್ನೋದು ದಾಸನ ಅಭಿಮಾನಿಗಳ ನಂಬಿಕೆ. ಹಾಗಾದ್ರೆ ದರ್ಶನ್ ಹೊರಬರೋದು ಯಾವಾಗ. ಈಗಾಗ್ಲೇ ಸುಪ್ರೀಂ ಕೋರ್ಟ್​ ಒಮ್ಮೆ ಬೇಲ್ ರದ್ದು ಮಾಡಿ ಒಳಗೆ ಕಳಿಸಿರೋದ್ರಿಂದ ಮತ್ತೆ ದರ್ಶನ್‌ಗೆ ಬೇಲ್ ಭಾಗ್ಯ ಸಿಕ್ಕುತ್ತಾ ಪ್ರಶ್ನೆ ಅಭಿಮಾನಿಗಳಲ್ಲಿದೆ. ಆ ಮಿಲಿಯನ್ ಡಾಲರ್ ಪ್ರಶ್ನೆಗೆ ಈಗ ಉತ್ತರ ಸಿಕ್ಕಾಗಿದೆ.

ಜುಲೈ 2026. ದಾಸ ಹೊರಬರಲು ಮುಹೂರ್ತ ಫಿಕ್ಸ್ ?

ಹೌದು ಇದು ಫೆಬ್ರುವರಿ ಇನ್ನೂ ನಾಲ್ಕೇ ತಿಂಗಳು ಅಂದ್ರೆ ಜುಲೈ 2026ಕ್ಕೆ ದರ್ಶನ್ ಹೊರಬರಬಹುದು. ಇದನ್ನ ನಾವ್ ಹೇಳ್ತಿಲ್ಲ ಖುದ್ದು ಕಾನೂನು ಪಂಡಿತರೇ ಹೇಳ್ತಾ ಇದ್ದಾರೆ. ಹೌದು ಸಾಕ್ಷಿಗಳ ವಿಚಾರಣಾ ಪ್ರಕ್ರಿಯೆ ಮುಗೀತಾ ಇದ್ದ ಹಾಗೆ , ಆರೋಪಿಗಳು ಮತ್ತೆ ಕೋರ್ಟ್​ ಮುಂದೆ ಜಾಮೀನು ಕೊಡಿ ಅಂತ ಅರ್ಜಿ ಸಲ್ಲಿಕೆ ಮಾಡಬಹುದು. ಯಾಕಂದ್ರೆ ಆಗಲೇ ಸಾಕ್ಷಿಗಳ ಹೇಳಿಕೆ ಕೋರ್ಟ್ ಎದುರು ಹೇಳಿಯಾಗಿರುತ್ತೆ. ಅದು ದಾಖಲೆಯೂ ಆಗಿರುತ್ತೆ. ಸೋ ಆರೋಪಿ ಹೊರಬಂದು ಅದನ್ನ ಬದಲಾಯಿಸೋದಕ್ಕೆ ಆಗೋದಿಲ್ಲ. ಸೋ ವಿಚಾರಣೆ ಮುಂದುವರೆಸಿ ಆದ್ರೆ ನನಗೆ ಅಲ್ಲಿ ತನಕ ಬೇಲ್ ಕೊಡಿ ಅಂತ ಧಾರಾಳವಾಗಿ ಅರ್ಜಿ ಸಲ್ಲಿಸಬಹುದು.

ಹೌದು ಈ ಹಿಂದೆ ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡ್ಲಿಕ್ಕೆ ಕಾರಣ, ದರ್ಶನ್ ತನಗೆ ಬೆನ್ನು ನೋವು ಇದೆ ಆಪರೇಷನ್ ಮಾಡಿಸಬೇಕು ಅಂತ ಸುಳ್ಳು ವರದಿ ಕೊಡಿಸಿ ಮೆಡಿಕಲ್ ಬೇಲ್ ಗಿಟ್ಟಿಸಿಕೊಂಡಿದ್ರು. ಅಷ್ಟೇ ಅಲ್ಲದೇ ಜೈಲಿನಲ್ಲೇ ರೌಡಿಗಳ ಜೊತೆ ದಂ ಹೊಡೀತಾ ಪಾರ್ಟಿ ಮಾಡಿದ್ರು. ಜೈಲಿನಲ್ಲಿದ್ದುಕೊಂಡೇ ಇಷ್ಟೆಲ್ಲಾ ಮಾಡಿರೋ ದರ್ಶನ್, ಹೊರಗಿದ್ರೆ ಸಾಕ್ಷಿಗಳನ್ನ ನಾಶ ಮಾಡೋದಿಲ್ವಾ ಅನ್ನೋ ಪ್ರಶ್ನೆಯಿಂದಲೇ ಸುಪ್ರೀಂ ಕೋರ್ಟ್ ಬೇಲ್ ರದ್ದು ಮಾಡಿತ್ತು.

ಕಾನೂನಿನಲ್ಲಿದೆ ಆ ಅವಕಾಶ, ದರ್ಶನ್​ ಬಿಡುಗಡೆ ಭವಿಷ್ಯ..!

ಒಂದು ಸಾರಿ ಸಾಕ್ಷಿಗಳ ಹೇಳಿಕೆ ಕೋರ್ಟ್​ನಲ್ಲಿ ದಾಖಲಾದ ಮೇಲೆ ಆರೋಪಿಗಳಿಗೆ ಜಾಮೀನು ನೀಡೋ ಅವಕಾಶ ಕಾನೂನಿನಲ್ಲಿದೆ. ಕೇಸ್ ಮುಂದುವರೆಯುತ್ತೆ. ಆದ್ರೆ ಕೇಸ್ ಕಂಪ್ಲೀಟ್ ಆಗಿ ಜಡ್ಜ್​ಮೆಂಟ್ ಬರೋತನಕ ಆರೋಪಿಗಳು ಶರತ್ತುಬದ್ದ ಜಾಮೀನಿನ ಮೇಲೆ ಹೊರಗೆ ಇರೋದಕ್ಕೆ ಅವಕಾಶ ಇದೆ.

ಹೌದು ಸದ್ಯ ರೇಣುಕಾಸ್ವಾಮಿ ಕೊ*ಲೆ ಕೇಸ್​​ನಲ್ಲಿ ಸಾಕ್ಷಿಗಳ ಹೇಳಿಕೆ ದಾಖಲು ಮತ್ತು ಪಾಟಿ ಸವಾಲು ಪ್ರಕ್ರಿಯೆ ನಡೀತಾ ಇದೆ. ಮುಂದಿನ 4 ತಿಂಗಳಲ್ಲಿ ಈ ಸಾಕ್ಷಿ ದಾಖಲು ಪ್ರಕ್ರಿಯೆ ಮುಗಿಯಲಿದ್ದು ದರ್ಶನ್ ಮತ್ತು ಗ್ಯಾಂಗ್‌ಗೆ ಬೇಲ್​ ಅರ್ಜಿ ಸಲ್ಲಿಸೋ ಅವಕಾಶ ಸಿಗಲಿದೆ. ಸೋ ದಾಸನಿಗೆ ಈ ವರ್ಷ ಮಧ್ಯಭಾಗದಲ್ಲಿ ಬೇಲ್ ಸಿಕ್ಕೋದು ಬಹುತೇಕ ಖಚಿತ.

- ಫಿಲ್ಮ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಿಚ್ಚು ಹಚ್ಚಿದ ಐಶ್ವರ್ಯಾ ಸಿಂಧೋಗಿ ಗ್ಲಾಮರ್ ಲುಕ್! ವೈರಲ್ ಆಯ್ತು ಕನ್ನಡದ 'ಸುಂದರಿ'ಯ ಬೋಲ್ಡ್ ಅವತಾರ!
ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಮದುವೆ: 100 ಕೋಟಿ OTT ರೈಟ್ಸ್? ಆದ್ರೆ 'ಆ' ವಿಚಾರಕ್ಕೆ ಹೆದರಿದ ತಾರಾ ಜೋಡಿ!