
ದಕ್ಷಿಣ ಭಾರತದ ಸೂಪರ್ ಸ್ಟಾರ್ ಯಶ್ ನಾಯಕರಾಗಿ, ಗೀತು ಮೋಹನ್‌ದಾಸ್ ನಿರ್ದೇಶನದಲ್ಲಿ ಮೂಡಿಬಂದಿರುವ ಹೊಚ್ಚ ಹೊಸ ಸಿನಿಮಾ 'ಟಾಕ್ಸಿಕ್' ಆಗಸ್ಟ್ 26 ರಂದು ಚಿತ್ರಮಂದಿರಗಳಿಗೆ ಬಂದಿತ್ತು. ಈ ಸಿನಿಮಾವನ್ನು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನೋಡಬಹುದು. ಯಶ್ ಮತ್ತು ಗೀತು ಮೋಹನ್‌ದಾಸ್ ಜಂಟಿಯಾಗಿ ಚಿತ್ರಕಥೆ ಬರೆದಿದ್ದು, ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡಲಾಗಿತ್ತು. ಸದ್ಯದ ವರದಿಗಳ ಪ್ರಕಾರ, 'ಟಾಕ್ಸಿಕ್' ಈವರೆಗೆ ಒಟ್ಟು 331 ಕೋಟಿ ರೂಪಾಯಿ ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ. ಅಷ್ಟೇ ಅಲ್ಲ, ಹಿಂದಿ ಭಾಷೆಯೊಂದರಲ್ಲೇ ಬರೋಬ್ಬರಿ 174.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅಂತಾನೂ ಈ ವರದಿಯಲ್ಲಿ ಹೇಳಲಾಗಿದೆ.
ಅಧಿಕಾರಕ್ಕಾಗಿ ನಡೆಯುವ ಅಪಾಯಕಾರಿ ಜಗತ್ತಿನ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಸಂಬಂಧಗಳು ಮತ್ತು ಸಂಘರ್ಷಗಳು ಚಿತ್ರದ ಮುಖ್ಯ ವಿಷಯಗಳಾಗಿವೆ. ಅಪರಾಧ, ಆಸೆ, ಕುಟುಂಬ, ನಿಷ್ಠೆ, ವಂಚನೆ ಮತ್ತು ಅಧಿಕಾರ ಎಲ್ಲವೂ ಇಲ್ಲಿ ಒಂದಕ್ಕೊಂದು ಬೆಸೆದುಕೊಂಡಿವೆ. ವೈಯಕ್ತಿಕ ಸಂಬಂಧಗಳು ಮತ್ತು ಅಧಿಕಾರಕ್ಕಾಗಿ ನಡೆಯುವ ದೊಡ್ಡ ಹೋರಾಟಗಳನ್ನು ಬೇರ್ಪಡಿಸಲಾಗದಂತಹ ಒಂದು ಜಗತ್ತನ್ನು 'ಟಾಕ್ಸಿಕ್' ಪರಿಚಯಿಸುತ್ತದೆ. ಈ ಸಿನಿಮಾ, ಮಲಯಾಳಂ ಚಿತ್ರರಂಗದಿಂದ ವಿಶ್ವ ಸಿನಿಮಾ ಕ್ಯಾನ್ವಾಸ್‌ಗೆ ಕಾಲಿಡುತ್ತಿರುವ ಗೀತು ಮೋಹನ್‌ದಾಸ್ ಅವರ ಪಯಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ಈ ಚಿತ್ರದ ಆಕರ್ಷಣೆ ಕೇವಲ ಅದರ ದೊಡ್ಡ ಮಟ್ಟದ ನಿರ್ಮಾಣಕ್ಕೆ ಸೀಮಿತವಾಗಿಲ್ಲ. ಗೀತು ಮೋಹನ್‌ದಾಸ್ ಅವರು ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ಸೃಷ್ಟಿಸಿರುವ ವಿಭಿನ್ನ ಪ್ರಪಂಚವೂ ಚಿತ್ರದ ಪ್ರಮುಖ ವಿಶೇಷತೆಯಾಗಿದೆ. ತಮ್ಮ ಹಿಂದಿನ ಸಿನಿಮಾಗಳಲ್ಲಿ ತೀವ್ರವಾದ ವೈಯಕ್ತಿಕ ಕಥೆಗಳು ಮತ್ತು ವಿಭಿನ್ನ ನಿರೂಪಣಾ ಶೈಲಿಯನ್ನು ಪ್ರಸ್ತುತಪಡಿಸಿದ್ದ ಗೀತು, 'ಟಾಕ್ಸಿಕ್' ಮೂಲಕ ಮತ್ತಷ್ಟು ವಿಶಾಲವಾದ ಕ್ಯಾನ್ವಾಸ್‌ಗೆ ಕಾಲಿಟ್ಟಿದ್ದಾರೆ. ಪಾತ್ರಗಳ ಆಳ ಮತ್ತು ಮಾನವೀಯ ಭಾವನೆಗಳನ್ನು ಉಳಿಸಿಕೊಂಡೇ, ಆ್ಯಕ್ಷನ್, ಕುತೂಹಲ ಮತ್ತು ದೃಶ್ಯ ವೈಭವದಿಂದ ತುಂಬಿದ ಒಂದು ದೊಡ್ಡ ಗ್ಯಾಂಗ್‌ಸ್ಟರ್ ಡ್ರಾಮಾವನ್ನು ಗೀತು ಕಟ್ಟಿಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.