ಯಶ್‌ಗಾಗಿ ಅಪಾಯಕಾರಿ ಸ್ಟಂಟ್ ಮಾಡಿದ ಯುವಕ ಇವರೇ: 'ಟಾಕ್ಸಿಕ್' ಕ್ಲೈಮ್ಯಾಕ್ಸ್‌ ಹಿಂದಿದೆ ಈ ಸೀಕ್ರೆಟ್

Published : Sep 04, 2026, 05:36 PM IST
Yash stunt double

ಸಾರಾಂಶ

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರ ಟಿಕೆಟ್ ಪಾತ್ರದ ಹಲವು ಕಷ್ಟಕರ ಆ್ಯಕ್ಷನ್ ಮತ್ತು ಸ್ಟಂಟ್ ದೃಶ್ಯಗಳಿಗೆ ಶಾಕ್ಯಾ ಶರ್ಮಾ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದಾರೆ. ‘ಗೋಟ್’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು.

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗಿ ಹತ್ತು ದಿನಗಳು ಕಳೆದಿದ್ದು, ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟವನ್ನು ಮುಂದುವರಿಸಿದೆ. ಸಿನಿಮಾದಲ್ಲಿನ ಯಶ್ ಅವರ ದ್ವಿಪಾತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ರಾಯ ಮತ್ತು ಟಿಕೆಟ್ ಪಾತ್ರಗಳು ಸಿನಿಮಾದ ಪ್ರಮುಖ ಹೈಲೈಟ್‌ಗಳಾಗಿವೆ. ಆದರೆ, ತೆರೆಮೇಲೆ ಯಶ್ ಅವರ ಪಾತ್ರಗಳು ಮಾಡಿರುವ ಕೆಲವು ಅಪಾಯಕಾರಿ ಆ್ಯಕ್ಷನ್ ದೃಶ್ಯಗಳ ಹಿಂದೆ ಮತ್ತೊಬ್ಬ ಯುವಕನ ಶ್ರಮವಿದೆ ಎಂಬುದು ನಿಮಗೆ ಗೊತ್ತಾ? ಯಶ್ ಅವರ ಕೆಲವು ಕಷ್ಟಕರ ಸ್ಟಂಟ್‌ಗಳನ್ನು ತೆರೆಮೇಲೆ ಅಚ್ಚುಕಟ್ಟಾಗಿ ನಿಭಾಯಿಸಿರುವ ಆ ಯುವಕನ ಹೆಸರು ಶಾಕ್ಯಾ ಶರ್ಮಾ.

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ರಾಯ ಮತ್ತು ಟಿಕೆಟ್ ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವು ದೃಶ್ಯಗಳಲ್ಲಿ ಈ ಎರಡೂ ಪಾತ್ರಗಳು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವ ಕಾರಣ, ಸ್ಟಂಟ್ ಡಬಲ್‌ಗಳ ಸಹಾಯವನ್ನು ಬಳಸಿಕೊಳ್ಳಲಾಗಿದೆ. ವಿಶೇಷವಾಗಿ ಟಿಕೆಟ್ ಪಾತ್ರದ ಸ್ಟಂಟ್ ಡಬಲ್ ಆಗಿ ಶಾಕ್ಯಾ ಶರ್ಮಾ ಕೆಲಸ ಮಾಡಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ರಾಯ ಮತ್ತು ಟಿಕೆಟ್ ನಡುವೆ ನಡೆಯುವ ಫೈಟ್ ಸೀಕ್ವೆನ್ಸ್‌ನಲ್ಲೂ ಶಾಕ್ಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಟಿಕೆಟ್ ಪಾತ್ರಕ್ಕೆ ಸಂಬಂಧಿಸಿದ ಹಲವು ಕಷ್ಟಕರವಾದ ಆ್ಯಕ್ಷನ್ ದೃಶ್ಯಗಳಲ್ಲಿಯೂ ಅವರೇ ಯಶ್ ಅವರ ಸ್ಟಂಟ್ ಡಬಲ್ ಆಗಿ ಕಾಣಿಸಿಕೊಂಡಿದ್ದಾರೆ.

ಟ್ರೇಲರ್‌ನಲ್ಲೇ ಗಮನ ಸೆಳೆದಿದ್ದ ಬ್ಯಾಕ್‌ಫ್ಲಿಪ್, ಮೆಟ್ಟಿಲುಗಳಿಂದ ಜಂಪ್, ಚೇಸ್ ಸೇರಿದಂತೆ ಹಲವು ಅಪಾಯಕಾರಿ ಸ್ಟಂಟ್‌ಗಳ ಹಿಂದೆ ಶಾಕ್ಯಾ ಶರ್ಮಾ ಅವರ ಪರಿಶ್ರಮವಿದೆ. ಹೀಗಾಗಿ ಸಿನಿಮಾದಲ್ಲಿ ಯಶ್ ಅವರ ಆ್ಯಕ್ಷನ್ ಸೀಕ್ವೆನ್ಸ್‌ಗಳು ಇಷ್ಟು ಪರ್ಫೆಕ್ಟ್ ಆಗಿ ಮೂಡಿಬರಲು ಇವರ ಕೊಡುಗೆಯೂ ಪ್ರಮುಖವಾಗಿದೆ. ಅಂದಹಾಗೆ, ಶಾಕ್ಯಾ ಶರ್ಮಾ ಸಾಮಾನ್ಯ ಸ್ಟಂಟ್ ಕಲಾವಿದರಲ್ಲ. ಅವರು ವೃತ್ತಿಪರ ಸ್ಟಂಟ್ ಡಬಲ್ ಆಗಿದ್ದು, ಹಲವು ಸಮರ ಕಲೆಗಳಲ್ಲಿ ತರಬೇತಿ ಪಡೆದಿರುವ ಅನುಭವಿ ಫೈಟರ್. ‘ಟಾಕ್ಸಿಕ್’ಗೂ ಮುನ್ನವೇ ಹಲವು ಸಿನಿಮಾಗಳಲ್ಲಿ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದಾರೆ.

ಮೆಟ್ರೋ ಫೈಟ್ ಸೀಕ್ವೆನ್ಸ್‌

ಇನ್ನೊಂದು ಕುತೂಹಲಕಾರಿ ವಿಚಾರವೆಂದರೆ, ದಳಪತಿ ವಿಜಯ್ ನಟನೆಯ ‘ಗೋಟ್’ ಸಿನಿಮಾದ ಮೆಟ್ರೋ ಫೈಟ್ ಸೀಕ್ವೆನ್ಸ್‌ನಲ್ಲೂ ಶಾಕ್ಯಾ ಶರ್ಮಾ ಕಾಣಿಸಿಕೊಂಡಿದ್ದಾರೆ. ವಿಜಯ್ ಎದುರು ಸೋಲೋ ಫೈಟ್ ಮಾಡುವ ದೃಶ್ಯದಲ್ಲಿ ಅವರೇ ನಟಿಸಿದ್ದರು ಎನ್ನಲಾಗಿದೆ. ಹೀಗಾಗಿ ‘ಟಾಕ್ಸಿಕ್’ನಲ್ಲಿ ಯಶ್ ಅವರ ಆ್ಯಕ್ಷನ್ ನೋಡಿ ವಾವ್ ಎಂದಿದ್ದರೆ, ಆ ಸಾಹಸ ದೃಶ್ಯಗಳ ಹಿಂದೆ ಶಾಕ್ಯಾ ಶರ್ಮಾ ಅವರಂತಹ ಸ್ಟಂಟ್ ಕಲಾವಿದರ ಪರಿಶ್ರಮವೂ ಇದೆ ಎಂಬುದನ್ನು ಮರೆಯುವಂತಿಲ್ಲ. ತೆರೆಮೇಲೆ ಹೀರೋ ಮಿಂಚಿದರೆ, ಅದರ ಹಿಂದೆ ಇಂತಹ ‘ಅನ್‌ಸಂಗ್ ಹೀರೋ’ಗಳ ಬೆವರೂ ಇರುತ್ತದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕನ್ನಡದ ಹೃತಿಕ್‌ ರೋಷನ್‌' ನಿರಂಜನ್‌: ನಟ ಡಾರ್ಲಿಂಗ್‌ ಕೃಷ್ಣ ಹೇಳಿದ ಮಾತು ವೈರಲ್!
ನ್ಯೂಯಾರ್ಕ್ ಬೀದಿಯಲ್ಲಿ ಓಡಾಡ್ತಿರೋ ನಿವೇದಿತಾ ಗೌಡ.. ವಿಡಿಯೋ ಯಾರ್ ಮಾಡಿದ್ದು ಅಲ್ಲಿ? ಭಾರೀ ಸೀಕ್ರೆಟ್..!?