ಯಶ್ ಟಾಕ್ಸಿಕ್‌ನಿಂದ ಬಾಲಿವುಡ್‌ನಲ್ಲಿ ಕೋಲಾಹಲ, ಅವರಾಪನ್ 2, ಬಟ್ವಾರ್ 1947 ಸಿನಿಮಾ ಗಳಿಕೆ ಖತಂ

Published : Aug 27, 2026, 11:01 AM IST
Toxic Boosts Yash Box Office Power

ಸಾರಾಂಶ

ಯಶ್ ಟಾಕ್ಸಿಕ್ ಸಿನಿಮಾ ಮೊದಲ ದಿನವೇ ದಾಖಲೆ ಗಳಿಕೆ ಕಂಡಿದೆ. ಇದರ ನಡುವೆ ಬಾಲಿವುಡ್ ಇಂಡಸ್ಟ್ರಿ ನಡುಗಿದೆ. ಉತ್ತಮ ಕಲೆಕ್ಷನ್ ಮೂಲಕ ಸಾಗುತ್ತಿದ್ದ ಅವರಾಪನ್ 2 ಹಾಗೂ ಬಟ್ವಾರ್ 1947 ಸಿನಿಮಾ ಆದಾಯ ದಿಢೀರ್ ಕುಸಿದಿದೆ.

ಮುಂಬೈ (ಆ.27) ಟಾಕ್ಸಿಕ್ ಸಿನಿಮಾ ದೇಶ ವಿದೇಶಗಳಲ್ಲಿ ಅಬ್ಬರಿಸುತ್ತಿದೆ. ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಹೊಸ ಅಲೆ ಸೃಷ್ಟಿಸಿದೆ. ಮೊದಲ ದಿನವೇ 100 ಕೋಟಿ ರೂಪಾಯಿ ಗಡಿ ದಾಟಿದೆ. ಈ ಮೂಲಕ ದಾಖಲೆ ಬರೆದಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಳೆಯಾಳಂ ಭಾಷೆಗಳಲ್ಲಿ ಟಾಕ್ಸಿಕ್ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಯಶ್ ಟಾಕ್ಸಿಕ್‌ನಿಂದ ಬಾಲಿವುಡ್‌ನ ಎರಡು ಪ್ರಮುಖ ಸಿನಿಮಾ ಗಳಿಕೆಗೆ ತೀವ್ರ ಹೊಡೆತ ಬಿದ್ದಿದೆ. ಅವರಾಪನ್ 2 ಹಾಗೂ ಬಟ್ವಾ್ 1947 ಎರಡೂ ಸಿನಿಮಾ ಉತ್ತಮ ಕಲೆಕ್ಷನ್ ಮೂಲಕ ಸಾಗುತ್ತಿತ್ತು. ಆದರೆ ಟಾಕ್ಸಿಕ್ ರಿಲೀಸ್‌ನಿಂದ ಈ ಎರಡು ಸಿನಿಮಾದ ಗಳಿಕೆ ಪಾತಾಳಕ್ಕೆ ಕುಸಿದಿದೆ.

ಬಾಲಿವುಡ್‌ನಲ್ಲಿ ಕೋಲಾಹಲ ಸೃಷ್ಟಿಸಿದ ಟಾಕ್ಸಿಕ್

ಕನ್ನಡದ ಸಿನಿಮಾ ಟಾಕ್ಸಿಕ್ ಗ್ಲೋಬಲ್ ಮಟ್ಟದಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿದೆ. ಬಾಲಿವುಡ್‌ನಲ್ಲಿ ಟಾಕ್ಸಿಕ್ ಸಿನಿಮಾ ಅವರಾಪನ್ 2 ಹಾಗೂ ಬಟ್ವಾರ್ 1947 ಸಿನಿಮಾ ಕತೆ ಮುಗಿಸಿದೆ. ಟಾಕ್ಸಿಕ್ ಬಿಡುಗಡೆಗೂ ಮುನ್ನ ಅವರಾಪನ 2 ಸಿನಿಮಾ ಶೇಕಡಾ 200ರಷ್ಟು ಗಳಿಕೆ ಮಾಡುತ್ತಾ ಸಾಗಿತ್ತು. 45 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ 143.65 ಕೋಟಿ ರೂಪಾಯಿ ಗಳಿಕೆ ಕಾಣುವ ಮೂಲಕ ದಾಖಲೆ ಬರೆದಿತ್ತು. ಮೊದಲ ವಾರದಲ್ಲಿ 113 ಕೋಟಿ ರೂಪಾಯಿ ಗಳಿಕೆ ಕಂಡಿದ್ದ ಅವರಾಪನ್ 2 ಸಿನಿಮಾ ಟಾಕ್ಸಿಕ್ ಬಿಡುಗಡೆಯಾದ ಬಳಿಕ ಗಳಿಕೆಯಲ್ಲಿ ಶೇಕಡಾ 76ರಷ್ಟು ಕುಸಿತ ಕಂಡಿದೆ. ಇದೀಗ 90 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಟಾಕ್ಸಿಕ್ ಸಿನಿಮಾದ ಹೊಡೆತಕ್ಕೆ ಅವರಾಪನ್ 2 ಸಿನಿಮಾ ಕಂಗಾಲಾಗಿದೆ. ಅವರಾಪನ್ 2 ಸಿನಿಮಾ ಭಾರತ ಹಾಗೂ ವಿದೇಶಗಳಲ್ಲಿ ಸೇರಿ ಒಟ್ಟು 202.75 ಕೋಟಿ ರೂಪಾಯಿ ಗಳಿಕೆ ಕಂಡಿದೆ.

ಬಟ್ವಾರ 1947 ಸಿನಿಮಾಗೂ ಹೊಡೆತ

ಬಟ್ವಾರ 1947 ಸಿನಿಮಾಗೆ ಬಾಲಿವುಡ್‌ನ ಅವರಾಪನ್ 2 ಸಿನಿಮಾ ಮೊದಲು ಹೊಡೆತ ನೀಡಿತ್ತು. ಆದರೂ ನಿಧಾನವಾಗಿ ಗಳಿಕೆ ಮಾಡಲು ಆರಂಭಿಸಿತ್ತು. ಭಾರತದಲ್ಲಿ 37 ಕೋಟಿ ರೂಪಾಯಿ ಗಳಿಕೆ ಮಾಡಿ ಬಟ್ವಾರ್ 1947 ಮುನ್ನುಗ್ಗುತ್ತಿದ್ದ ಬೆನ್ನಲ್ಲೇ ಟಾಕ್ಸಿಕ್ ರಿಲೀಸ್ ಆಗಿದೆ. ಇದೀಗ ಬಟ್ವಾರ್ 1947 ಸಿನಿಮಾ ಗಳಿಕೆ ಬಹುತೇಕ ಬಂದ್ ಆಗಿದೆ. ಇಷ್ಟೇ ಅಲ್ಲ ಹಲವು ಚಿತ್ರಮಂದಿರಗಳಲ್ಲಿ ಬಟ್ವಾರ್ 1947 ಸಿನಿಮಾ ಬದಲು ಟಾಕ್ಸಿಕ್ ಪ್ರದರ್ಶನಗೊಳ್ಳುತ್ತಿದೆ. ಬಟ್ವಾರ್ 1947 ಸಿನಿಮಾ ಭಾರತ ಹಾಗೂ ವಿದೇಶಗಳಲ್ಲಿ ಒಟ್ಟು 101 ಕೋಟಿ ರೂಪಾಯಿ ಗಳಿಕೆ ಕಂಡಿದೆ.

ಬಾಲಿವುಡ್‌ನಲ್ಲಿ ಗರಿಷ್ಠ ಗಳಿಕೆ ಕಂಡ ಟಾಕ್ಸಿಕ್

ಟಾಕ್ಸಿಕ್ ಸಿನಿಮಾ 6 ಭಾಷೆಗಳಲ್ಲಿ ಬಿಡುಗಡೆಯಾಗಿದೆ. ವಿಶೇಷ ಅಂದರೆ ರಾಕಿ ಬಾಯ್ ಟಾಕ್ಸಿಕ್ ಸಿನಿಮಾ ಮೊದಲ ಹಿಂದಿನ ಬಾಲಿವುಡ್‌ನಲ್ಲಿ ಗರಿಷ್ಠ ಗಳಿಕೆ ದಾಖಲೆ ಹೊಂದಿದೆ. ಮೊದಲ ದಿನ ಹಿಂದಿಯಲ್ಲಿ 55 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಕನ್ನಡದಲ್ಲಿ 23.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ತೆಲುಗಿನಲ್ಲಿ 16 ಕೋಟಿ ರೂಪಾಯಿ, ತಮಿಳಿನಲ್ಲಿ 5.50 ಕೋಟಿ ರೂಪಾಯಿ ಹಾಗೂ ಮಳೆಯಾಳಂ ಭಾಷೆಯಲ್ಲಿ 1.30 ಕೋಟಿ ರೂಪಾಯಿ ಗಳಿಕೆ ಕಂಡಿದೆ.

ಭಾರತದಲ್ಲಿ ಟಾಕ್ಸಿಕ್ ಒಟ್ಟು (ಗ್ರಾಸ್ ಕಲೆಕ್ಷನ್) 120.75 ಕೋಟಿ ರೂಪಾಯಿ, ದೇಶ ವಿದೇಶಗಳಲ್ಲಿ ಒಟ್ಟು 140.75 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಯಶ್ ಟಾಕ್ಸಿಕ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂಪರ್ ಸ್ಟಾರ್ ರಜನಿಕಾಂತ್ 'ಬೆಂಚ್‌ಮೇಟ್', ಸೀನಿಯರ್ ನಟ, ನಿರ್ಮಾಪಕ ಇನ್ನಿಲ್ಲ
ವಿವಾದಕ್ಕೆ ಸಿಲುಕಿದ ರವಿತೇಜ ನಟನೆಯ ಇರುಮುಡಿ ಸಿನಿಮಾ; ಶಿಕ್ಷಕರಿಂದ ತೀವ್ರ ಆಕ್ಷೇಪ