Ramayana: ರಾವಣನಾಗಿ ಅಬ್ಬರಿಸಲಿರುವ ಯಶ್ ಎದುರು ಕಿರಿಯ ರಾವಣನ ಎಂಟ್ರಿ; ಯಾರು ಈ ರಾಘವ್!

Published : Nov 02, 2026, 06:36 PM IST
Ramayana

ಸಾರಾಂಶ

4 ಸಾವಿರ ಕೋಟಿ ವೆಚ್ಚದ 'ರಾಮಾಯಣ' ಸಿನಿಮಾದಲ್ಲಿ ಯಶ್ ರಾವಣನಾಗಿ ನಟಿಸುತ್ತಿದ್ದು, ನಮಿತ್ ಮಲ್ಹೋತ್ರಾ ಪುತ್ರ ರಾಘವ್ ಯುವ ರಾವಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ಅವರಂತೆಯೇ ಮೈಕಟ್ಟು ಹೊಂದಿರುವ ರಾಘವ್ ಅವರನ್ನು ಬಾಡಿ ಡಬಲ್ ಎನ್ನಲಾಗುತ್ತಿದೆ. ಈ ಬೃಹತ್ ಚಿತ್ರವು ೨೦೨೬ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ನಿರೀಕ್ಷಿತ ಬೃಹತ್ ಬಜೆಟ್‌ನ **'ರಾಮಾಯಣ'** ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಸುಮಾರು **₹೪,೦೦೦ ಕೋಟಿ ವೆಚ್ಚದಲ್ಲಿ** ನಿರ್ಮಾಣವಾಗುತ್ತಿರುವ ಈ ಪೌರಾಣಿಕ ದೃಶ್ಯಕಾವ್ಯದಲ್ಲಿ ಕನ್ನಡದ ಕನ್ನಡಿಗ, ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ **ಯಶ್** ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಯಶ್ ಅವರ ಹೊರತಾಗಿ ಯುವ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಮತ್ತೋರ್ವ ನಟ ಯಾರು ಗೊತ್ತೇ? ಅವರು ಮತ್ಯಾರೂ ಅಲ್ಲ, ಈ ಚಿತ್ರದ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ ಅವರ ಪುತ್ರ **ರಾಘವ್ ಮಲ್ಹೋತ್ರಾ**!

ಯಶ್ ಬಾಡಿ ಡಬಲ್ ಹಾಗೂ ಯುವ ರಾವಣನಾಗಿ ರಾಘವ್ ಮಲ್ಹೋತ್ರಾ!

ಎನ್‌ಡಿಟಿವಿ (NDTV) ವರದಿಯ ಪ್ರಕಾರ, ರಾಘವ್ ಮಲ್ಹೋತ್ರಾ ಅವರ ದೈಹಿಕ ಮೈಕಟ್ಟು ಸಂಪೂರ್ಣವಾಗಿ ನಟ ಯಶ್ ಅವರಂತೆಯೇ ಇರುವುದರಿಂದ, ನಿರ್ಮಾಪಕರು ಅವರನ್ನು 'ಯುವ ರಾವಣನ' ಪ್ರಮುಖ ದೃಶ್ಯಗಳಿಗೆ ಆಯ್ಕೆ ಮಾಡಿದ್ದಾರೆ. ರಾಘವ್ ಅವರ ಕಟ್ಟುಮಸ್ತಾದ ದೇಹದಾರ್ಢ್ಯತೆಯನ್ನು ಕಂಡು ಸಿನಿಪ್ರೇಮಿಗಳು ಅವರನ್ನು ಕನ್ನಡ ತಾರೆಯ (ಯಶ್) ‘ಬಾಡಿ ಡಬಲ್’ ಎಂದೂ ಕರೆಯುತ್ತಿದ್ದಾರೆ. ರಣಬೀರ್ ಅಭಿನಯದ ರಾಮಾಯಣದಲ್ಲಿ ರಾಘವ್ ಅತ್ಯಂತ ಪ್ರಭಾವಶಾಲಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಗ್ಯಾರೇಜ್‌ನಿಂದ ₹೧೬,೦೦೦ ಕೋಟಿ ಸಾಮ್ರಾಜ್ಯ ಕಟ್ಯ ನಮಿತ್ ಮಲ್ಹೋತ್ರಾ ಪಯಣ!

ಈ ಬಹುಕೋಟಿ ವೆಚ್ಚದ ಸಿನಿಮಾವನ್ನು ನಿರ್ಮಿಸುತ್ತಿರುವ ನಮಿತ್ ಮಲ್ಹೋತ್ರಾ ಅವರ ಕುಟುಂಬದ ಒಟ್ಟು ನಿವ್ವಳ ಆಸ್ತಿ ಮೌಲ್ಯ ಬರೋಬ್ಬರಿ 16,000 ಕೋಟಿ ಎಂದು ಅಂದಾಜಿಸಲಾಗಿದೆ. ಪ್ರಮುಖ ನಟರ ಆಸ್ತಿಗಿಂತಲೂ ಹೆಚ್ಚಿನ ಸಾಮ್ರಾಜ್ಯ ಹೊಂದಿರುವ ನಮಿತ್, ತಮ್ಮ ವೃತ್ತಿಜೀವನವನ್ನು ಅತ್ಯಂತ ಕಷ್ಟದಿಂದ ಆರಂಭಿಸಿದ್ದರು. ಮುಂಬೈನ ಸಣ್ಣ ಗ್ಯಾರೇಜ್ ಒಂದರಲ್ಲಿ ಲ್ಯಾಪ್ಟಾಪ್ ಬಳಸಿ ಕೆಲಸ ಪ್ರಾರಂಭಿಸಿದ್ದ ನಮಿತ್, ನಂತರ 'ಪ್ರೈಮ್ ಫೋಕಸ್' ಎಂಬ ಸ್ವಂತ ಸಂಸ್ಥೆಯನ್ನು ಸ್ಥಾಪಿಸಿದರು. ೨೦೦೮ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಶೇಕಡಾ ೯೦ ರಷ್ಟು ಆದಾಯವನ್ನು ಕಳೆದುಕೊಂಡರೂ ಅವರು ಹಾರೊಪ್ಪಿಕೊಳ್ಳಲಿಲ್ಲ. ೨೦೧೪ರಲ್ಲಿ ಲಂಡನ್ ಮೂಲದ ಪ್ರಸಿದ್ಧ ವಿಶ್ಯುವಲ್ ಎಫೆಕ್ಟ್ಸ್ ಸಂಸ್ಥೆ 'ಡಬಲ್ ನೆಗೆಟಿವ್' ಜೊತೆ ತಮ್ಮ ಕಂಪನಿಯನ್ನು ವಿಲೀನಗೊಳಿಸಿ ‘DNEG’ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಬೆಳೆಸಿದರು.

ರಾವಣನ ಪಾತ್ರವನ್ನೇ ಆಯ್ಕೆ ಮಾಡಿದ್ದೇಕೆ ಯಶ್? 

ಯಶ್ ಅವರ 'ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್' ಸಂಸ್ಥೆಯು ನಮಿತ್ ಮಲ್ಹೋತ್ರಾ ಅವರೊಂದಿಗೆ ಕೈಜೋಡಿಸಿ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸುತ್ತಿದೆ. ತಾವು ರಾಮನ ಬದಲು ರಾವಣನ ಪಾತ್ರವನ್ನೇ ಏತಕ್ಕಾಗಿ ಆಯ್ಕೆ ಮಾಡಿಕೊಂಡೆ ಎಂಬುದಕ್ಕೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದ ಯಶ್,"ರಾಮನ ಒಳ್ಳೆಯತನ ಮತ್ತು ಶ್ರೇಷ್ಠತೆಯನ್ನು ತೋರಿಸಲು ನಮಗೆ ರಾವಣನ ದುಷ್ಟತನ ಹಾಗೂ ಬಲವೂ ಬೇಕು. ಆ ಕೆಟ್ಟದ್ದನ್ನು (ದುಷ್ಟತನವನ್ನು) ನನಗಿಂತ ಉತ್ತಮವಾಗಿ ಯಾರೂ ಅಭಿನಯಿಸಲು ಸಾಧ್ಯವಿಲ್ಲ," ಎಂದು ಖಡಕ್ಕಾಗಿ ಹೇಳಿದ್ದರು.

2026ರ ದೀಪಾವಳಿಗೆ ಬಿಡುಗಡೆ; ತಾರಾಗಣದ ಧಮಾಕಾ!

ಎರಡು ಭಾಗಗಳಲ್ಲಿ ನಿರ್ಮಾಣವಾಗುತ್ತಿರುವ ಈ ಮಹಾಕಾವ್ಯದ ಮೊದಲ ಭಾಗವು **೨೦೨೬ರ ನವೆಂಬರ್ ೫ ರಂದು ದೀಪಾವಳಿ ಹಬ್ಬದ ಶುಭಸಂದರ್ಭದಲ್ಲಿ ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಣಬೀರ್ ಕಪೂರ್ (ರಾಮ), ಸಾಯಿ ಪಲ್ಲವಿ (ಸೀತೆ), ಯಶ್ (ರಾವಣ), ಸನ್ನಿ ಡಿಯೋಲ್, ವಿವೇಕ್ ಒಬೆರಾಯ್, ರಾಕುಲ್ ಪ್ರೀತ್ ಸಿಂಗ್, ರವಿ ದುಬೆ ಮತ್ತು ಲಾರಾ ದತ್ತ ಸೇರಿದಂತೆ ಭಾರತೀಯ ಚಿತ್ರರಂಗದ ದಂಡೇ ಅಭಿನಯಿಸುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

₹450 ಕೋಟಿ ಭರ್ಜರಿ ಗಳಿಕೆಯ ಬೆನ್ನಲ್ಲೇ ಹನುಮಾನ್ ಅಂಶ್‌ ತಂಡದಲ್ಲಿ ಬಿರುಕು: ಸಿನಿಮಾ ಹಕ್ಕುಗಳಿಗಾಗಿ ಶುರುವಾಯ್ತು ಯುದ್ಧ!
ನೀತಾ ಅಂಬಾನಿ ಕಾರ್ಯಕ್ರಮದ ಸ್ಪೆಷಲ್ ಅಟ್ರಾಕ್ಷನ್ ಈ ಸುಂದರಿ: ಈಕೆ ಸ್ಟಾರ್ ಕ್ರಿಕೆಟರ್ ಮಾಜಿ ಪತ್ನಿ!