'ರಾಮಾಯಣ' ಟ್ರೇಲರ್‌ಗೂ ಮುನ್ನ ಯಶ್ ಜೊತೆ ಕಾಣಿಸಿಕೊಂಡ ರಿಷಬ್: ಅಯೋಧ್ಯೆ ವಿಶೇಷ ವಾಚ್ ವೈರಲ್

Published : Jul 18, 2026, 07:06 PM IST
Rishab Sharma

ಸಾರಾಂಶ

ಭಾರತದ ದಿಗ್ಗಜ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರ ಶಿಷ್ಯರಾಗಿರುವ ರಿಷಬ್ ಶರ್ಮಾ, ನಟ ರಣಬೀರ್ ಕಪೂರ್, ಯಶ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜುಲೈ 24ರಂದು ಬಿಡುಗಡೆಯಾಗಲಿರುವ ಚಿತ್ರದ ಟ್ರೇಲರ್‌ಗೆ ಮುನ್ನ, ಜುಲೈ 18ರಂದು ದೆಹಲಿಯಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಡುವೆ ಖ್ಯಾತ ಸಿತಾರ್ ವಿದ್ವಾಂಸ ರಿಷಬ್ ರಿಖಿರಾಮ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕೆಲವು ಚಿತ್ರಗಳು ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿವೆ.

ಭಾರತದ ದಿಗ್ಗಜ ಸಿತಾರ್ ವಾದಕ ಪಂಡಿತ್ ರವಿ ಶಂಕರ್ ಅವರ ಶಿಷ್ಯರಾಗಿರುವ ರಿಷಬ್ ಶರ್ಮಾ, ನಟ ರಣಬೀರ್ ಕಪೂರ್, ಯಶ್, ನಿರ್ದೇಶಕ ನಿತೇಶ್ ತಿವಾರಿ ಹಾಗೂ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 'ರಾಮಾಯಣ' ತಂಡದ ದೆಹಲಿ ಕಾರ್ಯಕ್ರಮದ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ರಿಷಬ್ ಹಂಚಿಕೊಂಡ ಮತ್ತೊಂದು ಚಿತ್ರದಲ್ಲಿ ಅವರು ಧರಿಸಿದ್ದ ವಿಶೇಷ ಕೈಗಡಿಯಾರ ಗಮನ ಸೆಳೆದಿದೆ. ಕಿತ್ತಳೆ ಬಣ್ಣದ ಆ ಗಡಿಯಾರದ ಡಯಲ್‌ನಲ್ಲಿ ಅಯೋಧ್ಯೆ ಶ್ರೀರಾಮ ಮಂದಿರದ ಚಿತ್ರವಿದ್ದು, ಅದರ ಸುತ್ತಲೂ ಶ್ರೀರಾಮ ಮತ್ತು ಹನುಮಂತರ ಕೆತ್ತನೆಗಳಿರುವ ವಿನ್ಯಾಸ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನೊಂದು ಚಿತ್ರದಲ್ಲಿ ರಿಷಬ್ ತಮ್ಮ ಸಿತಾರ್ ವಾದನದಲ್ಲಿ ತಲ್ಲೀನರಾಗಿರುವ ದೃಶ್ಯವೂ ಕಾಣಿಸಿಕೊಂಡಿದೆ.

ಜುಲೈ 24ಕ್ಕೆ 'ರಾಮಾಯಣ' ಟ್ರೇಲರ್

ಕೆಲವೇ ದಿನಗಳ ಹಿಂದೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಚಿತ್ರತಂಡ 'ರಾಮಾಯಣ' ಟ್ರೇಲರ್ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿತ್ತು. "ಭಾರತದಿಂದ ವಿಶ್ವದತ್ತ... ಸಾವಿರಾರು ವರ್ಷಗಳಿಂದ ಧರ್ಮ, ಮರ್ಯಾದೆ, ಧೈರ್ಯ ಮತ್ತು ಕರುಣೆಯ ಆದರ್ಶಗಳನ್ನು ಸಾರುತ್ತಾ ಬಂದಿರುವ 'ರಾಮಾಯಣ' ಈಗ ಹೊಸ ಪಯಣ ಆರಂಭಿಸುತ್ತಿದೆ. ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ಕಾಣದ ಅದ್ದೂರಿ ಮಟ್ಟದಲ್ಲಿ ವಿಶ್ವದ ಮುಂದೆ ಈ ಮಹಾಕಾವ್ಯವನ್ನು ತರುತ್ತಿದ್ದೇವೆ. 'ರಾಮಾಯಣ' ಟ್ರೇಲರ್ ಜುಲೈ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ," ಎಂದು ಚಿತ್ರತಂಡ ಪ್ರಕಟಿಸಿತ್ತು.

ಅದ್ದೂರಿ ತಾರಾಗಣ

ನಿತೇಶ್ ತಿವಾರಿ ನಿರ್ದೇಶನದ ಈ ಪೌರಾಣಿಕ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದರೆ, ಸಾಯಿ ಪಲ್ಲವಿ ಅವರು ಸೀತೆಯಾಗಿ ಅಭಿನಯಿಸಿದ್ದಾರೆ. ರವಿ ದುಬೆ ಅವರು ಲಕ್ಷ್ಮಣ, ಕನ್ನಡದ ನಟ ಯಶ್ ಅವರು ರಾವಣ, ಸನ್ನಿ ಡಿಯೋಲ್ ಅವರು ಹನುಮಂತ, ರಕುಲ್ ಪ್ರೀತ್ ಸಿಂಗ್ ಅವರು ಶೂರ್ಪಣಖೆ, ಲಾರಾ ದತ್ತಾ ಅವರು ಕೈಕೇಯಿ ಹಾಗೂ ಕಾಜಲ್ ಅಗರ್ವಾಲ್ ಅವರು ಮಂಡೋದರಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಎರಡು ಭಾಗಗಳಲ್ಲಿ ಬಿಡುಗಡೆ

ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್, ವಿಶ್ವಪ್ರಸಿದ್ಧ ವಿಎಫ್‌ಎಕ್ಸ್ ಸಂಸ್ಥೆ DNEG ಹಾಗೂ ಯಶ್ ಅವರ ಮಾಂಸ್ಟರ್ ಮೈಂಡ್ ಕ್ರಿಯೇಷನ್ಸ್ ಸಂಸ್ಥೆಗಳ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ 'ರಾಮಾಯಣ' ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾದರೆ, ಎರಡನೇ ಭಾಗ 2027ರ ದೀಪಾವಳಿಗೆ ವಿಶ್ವದಾದ್ಯಂತ ತೆರೆಗೆ ಬರಲಿದೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ ತಂದೆ ಜೊತೆ ಕಾಂಟ್ಯಾಕ್ಟ್‌ ಇಲ್ಲ; ಹಣವೂ ಕೊಟ್ಟಿಲ್ಲ: ಓಂ ಪ್ರಕಾಶ್‌ ರಾವ್‌ ಮಗಳು ಸಾತ್ವಿಕಾ
'ಇಂತಹ ನಟಿಯನ್ನು ನಾನು ನೋಡಿಲ್ಲ': ರಶ್ಮಿಕಾ ಕಠಿಣ ಪರಿಶ್ರಮಕ್ಕೆ ಫಿದಾ ಆದ ಬೃಂದಾ ಮಾಸ್ಟರ್