ರಾಮಾಯಣದಲ್ಲಿ ರಾವಣನಾಗಲು ಕುಟುಂಬವೇ ವಿರುದ್ಧವಿತ್ತು, ಪಾತ್ರ ಒಪ್ಪಿಕೊಂಡ ಘಟನೆ ಬಿಚ್ಚಿಟ್ಟ ಯಶ್

Published : Nov 06, 2026, 07:14 PM IST
Yash as Ravana

ಸಾರಾಂಶ

ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದ ಅವಕಾಶ ಬಂದಾಗ ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವರು ವಿರೋಧಿಸಿದ್ದರು. ಈ ಪಾತ್ರ ಬೇಡ ಎಂದು ಸಲಹೆ ನೀಡಿದ್ದರು. ಆದರೆ ಎಲ್ಲರ ವಿರೋಧದ ನಡುವೆ ಯಶ್ ಪಾತ್ರ ಒಪ್ಪಿಕೊಂಡಿದ್ದು ಹೇಗೆ?

ಬೆಂಗಳೂರು (ನ.06) ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಒಳಗೊಂಡ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಮೊದಲ ದಿನವೇ 155 ಕೋಟಿ ಕಲೆಕ್ಷನ್ ಮಾಡಿದೆ. ರಾಮಾಯಣ ಮೊದಲ ಭಾಗದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರವೇ ಹೆಚ್ಚಿದೆ. ರಾವಣನ ಪಾತ್ರಕ್ಕೆ ಜೀವ ತುಂಬಿರುವ ಯಶ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಆದರೆ ಯಶ್ ರಾವಣನ ಪಾತ್ರದ ಅವಕಾಶ ಬಂದಾಗ ಕುಟುಂಬಸ್ಥರು, ಆಪ್ತರು ಸೇರಿದಂತೆ ಹಲವರ ವಿರೋಧವಿತ್ತು ಎಂದು ಸ್ವತಃ ಯಶ್ ಬಹಿರಂಗಪಡಿಸಿದ್ದಾರೆ.

ರಾವಣ ಪಾತ್ರ ಒಪ್ಪಿಕೊಳ್ಳುವುದು ಸುಲಭವಾಗಿರಲಿಲ್ಲ

ರಾಮಾಯಣ , ರಾವಣನ ಪಾತ್ರ ಕುರಿತು ಇತ್ತೀಚೆಗೆ ಯಶ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದ ಅವಕಾಶ ಬಂದಾಗ ನಾನು ಮಾಡಲು ನಿರ್ಧರಿಸಿದ್ದೆ. ಆದರೆ ರಾಮಾಯಣದಲ್ಲಿ ರಾವಣನ ದುಷ್ಠನಾಗಿದ್ದಾನೆ, ಸೀತೆಯ ಅಪಹರಣ, ರಾಮನ ಜೊತೆಗೆ ಯುದ್ಧ, ರಾವಣನ ಸಂಹಾರದಿಂದ ಎಲ್ಲರು ರಾವಣನ ದ್ವೇಷಿಸುತ್ತಾರೆ. ಹೀಗಾಗಿ ಕುಟುಂಬಸ್ಥರು, ಆಪ್ತರು ರಾವಣನ ಪಾತ್ರ ವಿರೋಧಿಸಿದ್ದರು ಎಂದು ಯಶ್ ಹೇಳಿದ್ದಾರೆ.

ಪಾತ್ರ ಒಪ್ಪಿಕೊಂಡಿದ್ದು ಹೇಗೆ?

ಕೆಜಿಎಫ್ ಮೂಲಕ ಯಶ್ ದೇಶ ವಿದೇಶಗಲ್ಲಿ ರಾಕಿಂಗ್ ಸ್ಟಾರ್ ಆಗಿ, ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ದಿಢೀರ್ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್‌ನಲ್ಲಿ ನೆಗಟೀವ್ ರೋಲ್‌ನಲ್ಲಿ ಕಾಣಿಸಿಕೊಳ್ಳುವುದು ಯಾರಿಗೂ ಇಷ್ಟವಿರಲಿಲ್ಲ. ಈ ಪಾತ್ರ ಯಾಕೆ ಎಂದು ಹಲವರು ಪ್ರಶ್ನಿಸಿದ್ದರು. ಆದರೆ ನನ್ನ ವೈಯುಕ್ತಿಕ, ಸಿನಿಮಾ ಇಮೇಜ್, ಹೀರೋ ಇಮೇಜ್‌ಗಿಂತ ರಾಮಾಯಾಣ ಮಹಾಕಾವ್ಯ ದೊಡ್ಡದು. ಶ್ರೀರಾಮಯಣದಲ್ಲಿ ನಾನು ಭಾಗವಾಗಿದ್ದೇನೆ ಅನ್ನೋದು ಅತೀ ದೊಡ್ಡ ಅವಕಾಶ. ಹೀಗಾಗಿ ಪಾತ್ರ ಒಪ್ಪಿಕೊಂಡೆ ಎಂದು ಯಶ್ ಹೇಳಿದ್ದಾರೆ.

ರಾವಣನನ್ನು ಕೇವಲ ಒಂದು ಆಯಾಮದಲ್ಲಿ ನೋಡಬಾರದು. ರಾವಣ ಪರಮ ಶಿವಭಕ್ತ. ನಾವು ನೆಗಟೀವ್ ಆಯಾಮದಲ್ಲಿ ನೋಡಿದ್ದೇವೆ. ಹೌದು ರಾವಣನ ದಾರಿ ಬದಲು ಶ್ರೀರಾಮನ ದಾರಿಯಲ್ಲಿ ನಾವು ನಡೆಯಬೇಕು. ಶ್ರೀರಾಮ ಹಾದಿಯನ್ನೇ ನಾವು ಅನುಸರಿಸಬೇಕು ಎಂದು ಯಶ್ ಹೇಳಿದ್ದಾರೆ.

ರಾಮಾಯಣ ಸಿನಿಮಾ ಎರಡು ಭಾಗವಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಮೊದಲ ಭಾಗ ಬಿಡುಗಡೆಯಾಗಿದೆ. ಮೊದಲ ಭಾಗದಲ್ಲಿ ರಾವಣನ ಶಕ್ತಿ ಸಾಮರ್ಥ್ಯ, ಸೀತಾಪಹರಣ ಸೇರಿದಂತೆ ಪ್ರಮುಖ ಪುರಾಣಗಳಿವೆ. ಜಟಾಯು ಜೊತೆಗಿನ ಯುದ್ಧವೂ ಮೊದಲ ಭಾಗದಲ್ಲಿದೆ. ಈ ರಾಮಯಾಣ ಸಿನಿಮಾದಲ್ಲಿ ಜಟಾಯು ಜೊತೆ ರಾವಣನ ಯುದ್ಧವೇ ಪ್ರಮುಖವಾಗಿದೆ. ಮೈನವಿರೇಳಿಸುವ ದೃಶ್ಯಗಳು ಈ ಸನ್ನಿವೇಶದಲ್ಲಿದೆ. ಬರೋಬ್ಬರಿ 4000 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ನಮಿತ್ ಮಲ್ಹೋತ್ರ ಈ ಸಿನಿಮಾ ನಿರ್ಮಾಣ ಮಾಡಿದ್ದರೆ, ಯಶ್ ಅವರ ಮಾನ್ಸ್‌ಸ್ಟರ್ ಮೈಂಡ್ ಕ್ರಿಯೇಶನ್ ಸಹ ನಿರ್ಮಾಣ ಜವಾಬ್ದಾರಿ ಹೊತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ ಬಾಸ್‌ಗೆ ಬಂದ ಅವಕಾಶವನ್ನು ಮೂರು ಬಾರಿ ತಿರಸ್ಕರಿಸಿದ್ದೆ: ಕೊನೆಗೂ ಕಾರಣ ತಿಳಿಸಿದ ಜ್ಯೋತಿ ರೈ!
VIRAL: 'ರಾಮಾಯಣ' ಬಿಡುಗಡೆ ಬಳಿಕ ಜಗತ್ತು ಹೇಳ್ತಿರೋದೇನು? ರಣಬೀರ್-ಯಶ್-ಸಾಯಿ ಪಲ್ಲವಿ ಬಗ್ಗೆ ಶಾಕಿಂಗ್ 'ಮೌತ್ ಟಾಕ್'