ದಾಖಲೆ ಧೂಳಿಪಟ, ಕೆಜಿಎಫ್‌ಗೆ ಸೆಲೆಬ್ರಿಟಿಗಳ ಉಘೆ ಉಘೆ

Published : Nov 09, 2018, 09:43 PM ISTUpdated : Nov 09, 2018, 10:34 PM IST
ದಾಖಲೆ ಧೂಳಿಪಟ, ಕೆಜಿಎಫ್‌ಗೆ ಸೆಲೆಬ್ರಿಟಿಗಳ ಉಘೆ ಉಘೆ

ಸಾರಾಂಶ

ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ  ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್ 10 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.

ಕೆಜಿಎಫ್ ಚಿತ್ರದ ಟ್ರೈಲರ್ ಗೆ ರಾಮ್ ಗೋಪಾಲ್ ವರ್ಮಾ, ಕಿಚ್ಚ ಸುದೀಪ್, ನಟ ರಾಣಾ ದಗ್ಗೂಬಾಟಿ ಸೇರಿದಂತೆ ಹಲವು ತಾರೆಯರು ಮೆಚ್ಚುಗೆ ಸೂಚಿಸಿದ್ದಾರೆ. ಮುನ್ನುಗ್ಗುತ್ತಿರುವ ಪರಿಗೆ ಯಶ್ ಸಹ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್​ ಕೂಡಾ ಕೆಜಿಎಫ್​ ಚಿತ್ರದ ಟ್ರೈಲರ್​ನ ಹಾಡಿ ಹೊಗಳಿದ್ದಾರೆ. ಹೌದು, ಲಾವಾರಸ ಎದ್ದು ಬರುವಂತಿದೆ ಎಂದು ಸುದೀಪ್ ನಿರ್ದೇಶಕ ಪ್ರಶಾಂತ್​ ಮತ್ತು ಹೊಂಬಾಳೆ ಸಂಸ್ಥೆಗೆ ಗುಡ್ ಲಕ್ ಹೇಳಿದ್ದಾರೆ.

 ಯಶ್ ಗೆ ದಮ್ಮಯ್ಯ ಅಂದಿದ್ದ ರೆಬಲ್ ಸ್ಟಾರ್ ಅಂಬರೀಶ್ 

ನಿರ್ದೇಶಕ ರಾಮಗೋಪಾಲ ವರ್ಮಾ ಟ್ವೀಟ್ ಮಾಡಿದ್ದಾರೆ. ಕೆಜಿಎಫ್ ನೋಡಲೇಬೇಕಾದ ಸಿನಿಮಾ. ಚಿತ್ರದ ಟ್ರೈಲರ್ ಅಮೇಜಿಂಗ್ ಆಗಿದ್ದು, ರೋಮಾಂಚನವನ್ನ ಹೆಚ್ಚಿಸುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದ ಸಿನಿಮಾಗಳಿಗಿಂತ ಹೆಚ್ಚು ಎತ್ತರಕ್ಕೆ ಏರುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಟ ಪ್ರಭಾಸ್ ಅವರದ್ದು ಅಂಬಾನಿಗಿಂತಲೂ ಶ್ರೀಮಂತ ಕುಟುಂಬ; ರಾಜಮನೆತದ ಲಕ್ಷ ಎಕರೆ ಭೂಮಿಯನ್ನ ದಾನ ಮಾಡಿದ್ದೇ ಹೆಚ್ಚು!
Bhagyalakshmi Serial: ಭಾಗ್ಯ ಯಾರ ಜೊತೆ ಸಂಸಾರ ಮಾಡ್ಬೇಕು? ಜ್ಯೋತಿಷಿ ಮಾತು ಕೇಳಿ ಕುಸುಮಾಗೆ ದಿಗ್ಭ್ರಮೆ!