
ಯಶ್ ಬೆನ್ನೆಲುಬಾಗಿ ಎಲ್ಲಾ ಭಾಷೆಯವರು ನಿಂತಿದ್ದಾರೆ. ಕನ್ನಡ ಮಾರ್ಕೆಟ್ ಅಂದ್ರೆ ಚಿಕ್ಕ ಮಾರುಕಟ್ಟೆ. ಆದ್ರೆ ಕೆಜಿಎಫ್ ಹೊಸ ಭರವಸೆ ಮೂಡಿಸಿದೆ. ಈಗಲೂ ಕನ್ನಡ ಚಿತ್ರರಂಗ ಹೋರಾಟ ನಡೆಸುತ್ತಿದೆ ಎಂಬ ಅಭಿಪ್ರಾಯವೂ ರೆಬಲ್ ಬಾಯಲ್ಲಿ ಬಂತು.
ಕೆಜಿಎಫ್ ಬರೀ ಕರ್ನಾಟಕಕ್ಕೆ ಮಾತ್ರವಲ್ಲ. ಇಡೀ ಪ್ರಪಂಚ ಈ ಸಿನಿಮಾವನ್ನ ಗುರುತಿಸುತ್ತದೆ. ಸಿನಿಮಾ ಮಾಡುವಾಗ ಟೈಟಲ್ ಗಳಿಗೆ ಅರ್ಥ ಇರುತ್ತಿತ್ತು. ಈಗ ಅದು ಬದಲಾಗಿದೆ.ಕೆಜಿಎಫ್ ಅಂದ್ರೆ ಗೋಲ್ಡ್ ಅಂತ ಮನಸಿಗೆ ಬರುತ್ತೆ.ಆದ್ರೆ ಟ್ರೇಲರ್ ನೋಡಿದ ಮೇಲೆ ನನಗೆ ಅರ್ಥ ಆಗಿದೆ. ಕುತೂಹಲ ಹುಟ್ಟಿಸಿವಂತ ಸಿನಿಮಾ ಇದಾಗಿದ್ದು ಯಶ್ ಶ್ರಮ ಮೆಚ್ಚಬೇಕು ಎಂದು ಹೇಳಿದರು.
ಹೊರಬಂತು ಬಹುನಿರೀಕ್ಷಿತ ಕೆಜಿಎಫ್ ಟ್ರೈಲರ್
ಯಶ್ ಗಡ್ಡ 2 ವರ್ಷ ಬಿಟ್ಟಿದ್ದರು. ಹನಿಮೂನ್ ಹೋಗುವಾಗಲೂ ,ಮನೆಯಲ್ಲಿ ಮಲಗುವಾಗಲೂ ಅವರು ಗಡ್ಡ ತೆಗೆಯಲಿಲ್ಲ. ನಾನು ಗಡ್ಡ ತೆಗಿ ಎಂದು ದಮ್ಮಯ್ಯ ಎಂದಿದ್ದೆ. ಇಂತ ದೊಡ್ಡ ಸಿನಿಮಾವನ್ನ ಪರದೆ ಮೇಲೆ ನೋಡಲು ಕನ್ನಡಿಗನಾಗಿ ಹೆಮ್ಮೆ ಆಗ್ತಿದೆ. ಎಲ್ಲಾ ಕಡೆ ತಮಿಳು ತೆಲುಗು ಇದೆ. ಈಗಲು ನಾವು ಕನ್ನಡ ಸಿನಿಮಾಗಳಿಗಾಗಿ ಫೈಟ್ ಮಾಡುತ್ತಿದ್ದೇವೆ ಎಂದು ವಾಸ್ತವಿಕತೆ ತೆರೆದಿಟ್ಟರು.
ಶಿವಣ್ಣ ವಿಶ್: ವೀಡಿಯೊ ಬೈಟ್ ಮೂಲಕ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೆಜಿಎಫ್ ಗೆ ವಿಶ್ ಮಾಡಿದರು. ನಾನು ಆಸ್ಟ್ರೇಲಿಯಾದಲ್ಲಿ ಇದ್ದೇನೆ. ಬರಲು ಸಾಧ್ಯವಾಗಲಿಲ್ಲ. ಈ ಸಿನಿಮಾ ದೇಶಾದ್ಯಂತ ಯಶಸ್ಸು ಕಾಣಬೇಕು ಎಂದು ಶಿವರಾಜ್ ಕುಮಾರ್ ಹಾರೈಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.