ಅಂದು 'ಅಣ್ತಮ್ಮ' ಅಂತಿದ್ದ ಯಶ್ ಇಂದು 'ಪ್ಯಾನ್ ಇಂಡಿಯಾ' ಸ್ಟಾರ್ ಆಗಿದ್ದು ಹೇಗೆ? ಕಾಣದ ಕೈ ಇದ್ಯಾ?

Published : Aug 24, 2025, 04:34 PM IST
Rocking Star Yash

ಸಾರಾಂಶ

'ಮೊಗ್ಗಿನ ಮನಸ್ಸು' ಎಂಬ 2008ರಲ್ಲಿ ತೆರೆಗೆ ಬಂದ ಸಿನಿಮಾ ಮೂಲಕ ಸಕ್ಸಸ್‌ಫುಲ್ ನಟರಾಗಿ ಚಿತ್ರೋದ್ಯಮದಲ್ಲಿ ಮಿಂಚಿದ ನಟ ಯಶ್ ಅದೇ ಸಿನಿಮಾದ ನಾಯಕಿ ನಟಿ ರಾಧಿಕಾ ಪಂಡಿತ್‌ ಅವರನ್ನು ಮದುವೆ ಆಗಿದ್ದಾರೆ. ಅವರಿಬ್ಬರೂ ವೈಯಕ್ತಿಕವಾಗಿ ಹಾಗೂ ವೃತ್ತಿಜೀವನದಲ್ಲಿ ಒಬ್ಬರಿಗೊಬ್ಬರು..

ಕನ್ನಡ ನಟ ಯಶ್ (Rocking Star Yash) ಇಂದು ಪ್ಯಾನ್ ಇಂಡಿಯಾ ಸ್ಟಾರ್, ಪ್ರಪಂಚವೇ ಗುರುತಿಸುವ ಫೇಮಸ್ ಪುರುಷ. ಜೀರೋದಿಂದ ಹೀರೋ ಆಗಿ ನಟ ಯಶ್ ಬೆಳೆದ ಕಥೆಯೇ ರೋಚಕ. ಅಂದು ಯಾವ ಗಾಡ್‌ ಫಾದರ್ ನೆರವಿಲ್ಲದೇ ಕನ್ನಡ ಚಿತ್ರೋದ್ಯಮಕ್ಕೆ ಬಂದವರು ಡ್ರೈವರ್ ಮಗ ನವೀನ್ ಗೌಡ. ಆದರೆ, ಆ ಬಳಿಕ ಸೀರಿಯಲ್, ಸಿನಿಮಾಗಳಲ್ಲಿ ಒಂದೊಂದೇ ಹೆಜ್ಜೆ ಇಟ್ಟು, ಪೋಷಕ ನಟರಾಗಿ, ಹೀರೋ ಆಗಿ ಬಳಿಕ ಸ್ಟಾರ್ ಆಗಿ ಬೆಳದವರು ಈ ನಟ. ನವೀನ್ ಗೌಡ ಹೆಸರನ್ನು ಅಧೀಕೃತವಾಗಿ ಯಶ್ ಎಂದು ಬದಲಾಯಿಸಿಕೊಂಡು, ಇಂದು ಜಗತ್ತೇ ಗುರುತಿಸುವ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್.

ಹಾಸನದಲ್ಲಿ ಹುಟ್ಟಿ ಮಂಡ್ಯ-ಮೈಸೂರಿನ ವಾತಾವರಣದಲ್ಲಿ ಬೆಳೆದ ನಟ ಯಶ್ ಇಂದು ಅದೆಷ್ಟೋ ಕೋಟಿಗೆ ಬೆಲೆಬಾಳುವ ನಟ. ಆದರೆ ಅವರು ನಡೆದುಬಂದ ದಾರಿ ಹೂವಿನ ಹಾಸಿಗೆಯೇನೂ ಅಲ್ಲ. ಕಲ್ಲುಮುಳ್ಳುಗಳ ದಾರಿಯಲ್ಲಿ ಸರಿಯಾದ ಚಪ್ಪಲಿಗೂ ಆಸೆ ಪಡದೇ ಮುಂದೊಂದು ದಿನ ದೊಡ್ಡ ಸಾಧನೆ ಮಾಡುವ ಕನಸು ಹೊತ್ತು ಬಣ್ಣದ ಬದುಕಿಗೆ ಬಂದವರು ಯಶ್. ಸಿಕ್ಕ ಅವಕಾಶಗಳನ್ನೇ ಬಳಸಿಕೊಂಡು ಬೆಳೆದವರು, ಬದುಕಿನಲ್ಲಿ ಬಂದಿದ್ದನ್ನೆಲ್ಲಾ ಎದುರಿಸಿ ಇಂದು ಸ್ಟಾರ್ ನಟರಾದವರು. ಇಂದು ನಿರ್ಮಾಪಕರಾಗಿಯೂ ಬೆಳೆದು 'ಇದ್ದರೆ ಹೀಗಿರಬೇಕು' ಎಂಬಂತೆ ಬದುಕುತ್ತಿರುವವರು.

ಹಾಗಿದ್ದರೆ ನಟ ಯಶ್ ಈ ಪರಿ ಬೆಳೆಯಲು ಕಾರಣರು ಯಾರು? ಅವರ ಹಿಂದೆ ಯಾವ ಕಾಣದ ಕೈ ಕೆಲಸ ಮಾಡಿದೆ? ಅದಕ್ಕೆ ಉತ್ತರ ಸ್ಪಷ್ಟವಾಗಿದೆ. ಯಶ್ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬೆಳಕಿಗೆ ಬಂದು ಬೆಳದ ನಟ. ಅವರಿಗೆ ಈ ದಾರಿಯಲ್ಲಿ ಸಾಕಷ್ಟು ಜನರು ಸಹಾಯ ಮಾಡಿರಬಹುದು, ಹಲವರಿಂದ ಯಶ್ ಸಹಾಯವನ್ನೂ ಪಡೆದಿರಬಹುದು. ಆದರೆ, ಲೈಫ್‌ ಲಾಂಗ್ ಅವರ ಹಿಂದೆ ಬಂಡೆಯಂತೆ ಗಟ್ಟಿಯಾಗಿ ನಿಂತು ಸಹಾಯ ಮಾಡಿದವರು ಯಾರೂ ಇಲ್ಲ ಎನ್ನಬಹುದು. ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿ ಹಲವರು ಅವರಿಗೆ ಸಹಾಯ ಮಾಡಿರಬಹುದು.ಆದರೆ ಅಂಥ ಕಾಣದ ಕೈ ಅಂತ ಯಾವುದೂ ಇಲ್ಲ.

'ಮೊಗ್ಗಿನ ಮನಸ್ಸು' ಎಂಬ 2008ರಲ್ಲಿ ತೆರೆಗೆ ಬಂದ ಸಿನಿಮಾ ಮೂಲಕ ಸಕ್ಸಸ್‌ಫುಲ್ ನಟರಾಗಿ ಚಿತ್ರೋದ್ಯಮದಲ್ಲಿ ಮಿಂಚಿದ ನಟ ಯಶ್ ಅದೇ ಸಿನಿಮಾದ ನಾಯಕಿ ನಟಿ ರಾಧಿಕಾ ಪಂಡಿತ್‌ ಅವರನ್ನು ಮದುವೆ ಆಗಿದ್ದಾರೆ. ಅವರಿಬ್ಬರೂ ವೈಯಕ್ತಿಕವಾಗಿ ಹಾಗೂ ವೃತ್ತಿಜೀವನದಲ್ಲಿ ಒಬ್ಬರಿಗೊಬ್ಬರು ಆಸರೆಯಾಗಿ, ಪ್ರೇರಣೆಯಾಗಿದ್ದರು ಎಂಬ ಮಾತಿದೆ. ಜೊತೆಗೆ, ಯಶ್ ಫ್ಯಾಮಿಲಿಯ ಪೋಷಣೆ ಹಾಗೂ ಹಾರೈಕೆ ಕೂಡ ಇದೆ. ಆದರೆ ಎಲ್ಲಕ್ಕಿಂತ ಹೆಚ್ಚು ಕೆಲಸ ಮಾಡಿದ್ದು ಯಾವುದು ಗೊತ್ತಾ?

ಅದು ಇನ್ಯಾರೂ ಅಲ್ಲ, ಸ್ವತಃ ಯಶ್ ಅವರಲ್ಲಿರುವ ಸಾಧನೆಯ ತುಡಿತ. ಹೌದು, ಯಶ್ ಅವರೊಳಗೆ ತಾವು ಏನೋ ದೊಡ್ಡ ಸಾಧನೆ ಮಾಡೋದಕ್ಕಾಗಿಯೇ ಹುಟ್ಟಿದ್ದು ಎಂಬ ಬಲವಾದ ನಂಬಿಕೆ ಇತ್ತು. ಅದು ನಟರಾಗಿ ಬಂದು ಶುರುವಿನಿಂದಲೇ ಅವರಲ್ಲಿ ಗೋಚರಿಸುತ್ತಿತ್ತು. ಚಿಕ್ಕ ಪಾತ್ರವನ್ನು ಮಾಡುತ್ತಿರುವಾಗಲೂ ಯಶ್ ಅವರಲ್ಲಿ ಅಪಾರವಾದ ಶ್ರದ್ಧೆ ಹಾಗು ಭರವಸೆ ಗೋಚರಿಸುತ್ತಿತ್ತು. ಆದರೆ, ಅವೆಲ್ಲಾ ಕೇವಲ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುವವರಿಗೆ ಮಾತ್ರ ಅರ್ಥವಾಗುತ್ತಿತ್ತು. ಈ ಮಾತು ಅವರನ್ನು ಹತ್ತಿರದಿಂದ ಬಲ್ಲವರಿಗೆ ಗೊತ್ತು.

ಯಶ್ ಸಿನಿಮಾ ಕಲಿಕೆ, ನಟನೆ ಹಾಗೂ ಸಿನಿಮಾ ಪ್ರಪಂಚ ಬಿಟ್ಟು ಬೇರೆ ಯಾವುದಕ್ಕೂ ಮೊದಲ ಆದ್ಯತೆ ನೀಡಿದವರಲ್ಲ. ಸಹಜವಾಗಿ ಜೀವನದ ಬೇರೆ ಆಯಾಮಗಳು ಅಂದರೆ, ಲವ್, ಮದುವೆ ಮಕ್ಕಳು ಎಲ್ಲವುಗಳಿಗೂ ಸೂಕ್ತ ಸಮಯದಲ್ಲಿ ಎಷ್ಟು ಅಗತ್ಯವೋ ಅಷ್ಟು ಪ್ರಿಯಾರಿಟಿ ನೀಡಿ, ಎಲ್ಲವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ಎಲ್ಲಕ್ಕಿಂತ ಮಿಗಿಲಾಗಿ ಸಿನಿಮಾವನ್ನೇ ಉಸಿರಾಡಿದ್ದು ಅವರಿಗೆ ಅದರಿಂದ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗಿದ್ದಕ್ಕೆ ಕಾರಣ.

ಆದರೆ, ಅಷ್ಟೊಂದು ನಿಖರವಾಗಿ ಸಿನಿಮಾ ಆಯ್ಕೆ, ಲೈಫ್ ಪಾರ್ಟ್ನರ್ ಆಯ್ಕೆ ಹಾಗೂ ಬೇರೆ ಆಯಮಗಳಲ್ಲಿ ಸಿಕ್ಕ ಯಶಸ್ಸಿಗೆ ಅವರ ಲಕ್ ಕೂಡ ಕಾರಣ ಆಗಿರಬಹುದು. ಆದರೆ, 'ಲಕ್ ಅನ್ನೋದು ಲಕ್‌ಗೆ ಸಿಗಲ್ಲ'. ಸೋ, ಆ ಬಗ್ಗೆ ಯಾರೂ ಯಾರ ಬಗ್ಗೆಯೂ 'ದಟ್ಸ್‌ ಇಟ್' ಅಂತ ಹೇಳೋದು ಕಷ್ಟ. ಆದರೆ, ಯಶ್ ಬೆಳೆದುಬಂದ ದಾರಿಯ ಬಗ್ಗೆ ಹಲವರಿಗೆ ಅರಿವಿಲ್ಲದಿರಬಹುದು, ಆದರೆ ಇಂದು ತಲುಪಿರುವ ಎತ್ತರ ಮಾತ್ರ ಅಚ್ಚರಿಗೆ ಕಾರಣ ಆಗುವಂಥದ್ದು. ಯಾವುದೇ ಗಾಡ್ ಫಾದರ್ ಇಲ್ಲದೇ ಗ್ಲೋಬಲ್ ಲೆವೆಲ್‌ನಲ್ಲಿ ಮಿಂಚೋದು ಸುಲಭದ ಮಾತಲ್ಲ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!
2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ