
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಫಾರಿನ್ ಟ್ರಿಪ್‌ಗೆ ಹೋಗೋದು ಭೂಮಿಕಾಗೆ ಇಷ್ಟವೇ ಇರಲಿಲ್ಲ. ಗಂಡ ಹೋಗುವಾಗಲೂ ಸಿಕ್ಕಾಪಟ್ಟೆ ಕಷ್ಟಪಟ್ಟು ಕಳಿಸಿಕೊಟ್ಟಿದ್ದಳು. ಈಗ ಗೌತಮ್ ದಿವಾನ್ ಕಾರ್‌ವೊಳಗಡೆ ಕೂತು ಪಾಸ್‌ಪೋರ್ಟ್ ಹುಡುಕಿದ್ದಾನೆ, ಅಲ್ಲಿ ಏನೂ ಸಿಕ್ಕಿಲ್ಲ. ಭೂಮಿಕಾಳೇ ಬ್ಯಾಗ್ ಪ್ಯಾಕ್ ಮಾಡಿದ್ದು, ಅವಳೇ ಬೇಕು ಅಂತ ಹೀಗೆ ಮಾಡಿದ್ದಾಳೆ ಎಂದು ಸಿಟ್ಟಾಗಿದ್ದಾನೆ.
ನಾನು ವಿದೇಶಕ್ಕೆ ಹೋಗೋದು ನಿಮಗೆ ಇಷ್ಟ ಇರಲಿಲ್ಲ. ಹೀಗಾಗಿ ನೀವು ಪಾಸ್‌ಪೋರ್ಟ್ ಎತ್ತಿಟ್ಟಿದ್ದೀರಿ? ನಿಮಗೆ ಹುಚ್ಚು ಹಿಡಿದಿದೆ. ಯಾಕೆ ಹೀಗೆ ಮಾಡಿದ್ರಿ ಎಂದು ಅವನು ಪತ್ನಿಗೆ ಬೈದಿದ್ದಾನೆ. ಆಗ ಭೂಮಿಕಾ, “ನಾನು ಬ್ಯಾಕ್ ಪ್ಯಾಕ್ ಮಾಡಿದ್ದೀನಿ, ಬ್ಯಾಗ್‌ವೊಳಗಡೆ ಪಾಸ್‌ಪೋರ್ಟ್ ಇಟ್ಟಿದ್ದೇನೆ. ನಾನು ಹುಚ್ಚಿಯೇ, ನಾನು ಪಾಸ್‌ಪೋರ್ಟ್ ಇಟ್ಟಿದ್ದು ಸತ್ಯ. ಇದನ್ನು ನಂಬೋದಿದ್ರೆ ನಂಬಿ, ನಂಬಿಲ್ಲ ಅಂದ್ರೆ ಬಿಡಿ” ಎಂದು ಹೇಳಿದ್ದಾಳೆ. ಒಟ್ಟಿನಲ್ಲಿ ಗಂಡ-ಹೆಂಡತಿ ಜಗಳ ಶುರು ಮಾಡಿದ್ದಾರೆ.
ಭೂಮಿಕಾಗೆ ಮಗನನ್ನು ಕಂಡರೆ ತುಂಬ ಇಷ್ಟ. ಅವನಿಗೆ ಸ್ವಲ್ಪ ಏನಾದರೂ ಆದರೆ ಅವಳು ಸಹಿಸೋದಿಲ್ಲ. ಇನ್ನೊಂದು ಕಡೆ ವೈದ್ಯರು ಕೂಡ ಗೌತಮ್‌ಗೆ “ಭೂಮಿಕಾ ತುಂಬ ಸೂಕ್ಷ್ಮ ಮನಸ್ಥಿತಿ ಹೊಂದಿದ್ದಾರೆ, ಅವರಿಗೆ ಶಾಕಿಂಗ್ ವಿಷಯ ಹೇಳಬೇಡಿ, ಇದರಿಂದ ಅವರ ಪ್ರಾಣಕ್ಕೆ ಅಪಾಯ ಆಗುವುದು” ಎಂದು ಎಚ್ಚರಿಕೆ ಕೊಟ್ಟಿದ್ದರಿ. ಈ ಮಾತನ್ನು ತಲೆಯಲ್ಲಿಟ್ಟುಕೊಂಡೋ ಏನೋ ಈಗ ಪತ್ನಿಗೆ ತಲೆ ಸರಿ ಇಲ್ಲ ಎಂದು ಗೌತಮ್ ನಂಬಿಕೊಂಡು ಬರಬಹುದು. ಶಕುಂತಲಾಳೇ ಪಾಸ್‌ಪೋರ್ಟ್ ಕದಿಯೋ ಕೆಲಸ ಮಾಡಿರೋದು, ಗಂಡ-ಹೆಂಡತಿ ಮಧ್ಯೆ ದೊಡ್ಡ ಬೆಂಕಿ ಬಿದ್ದಿದೆ. ಇದರಲ್ಲಿ ಚಳಿ ಕಾಯಿಸಿಕೊಳ್ತೀನಿ ಎಂದು ಅವಳು ಹೇಳಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.