ಆಮೀರ್‌ ಖಾನ್‌ ಮದುವೆ ದಿನವನ್ನು ಹಾಳು ಮಾಡಿದ ಜಾವೇದ್‌ ಮಿಯಾಂದಾದ್!

Published : Jul 03, 2025, 07:28 PM IST
Pakistani Cricketer Miandad Ruined Aamir Khan Reena Dutta Wedding

ಸಾರಾಂಶ

ಆಮೀರ್‌ ಖಾನ್‌ ಮತ್ತು ರೀನಾ ದತ್ತಾ ರಹಸ್ಯ ವಿವಾಹದ ದಿನಕ್ಕೂ ಪಾಕಿಸ್ತಾನದ ಕ್ರಿಕೆಟ್‌ ಆಟಗಾರ ಜಾವೇದ್‌ ಮಿಯಾಂದಾದ್‌ ಅವರಿಗೂ ಒಂದು ಸಂಬಂಧ ಇದೆ. ಅದೇನು ಅಂತ ಆಮೀರ್‌ ಮಾತಿನಲ್ಲೇ ಕೇಳಿ. 

ಆಮೀರ್‌ ಖಾನ್‌ ಮೊದಲ ಮದುವೆ ದಿನವನ್ನು ಹಾಳು ಮಾಡಿದ್ದೇ ಮಿಯಾಂದಾದ್! ಅದು ಹೇಗೆ ಅಂತ ಕೇಳಿ.

ಬಾಲಿವುಡ್‌ ನಟ ಆಮಿರ್ ಖಾನ್ ಮೊದಲು ಮದುವೆಯಾದದ್ದು ರೀನಾ ದತ್ತಾ ಅವರನ್ನು. ಆಗ ಇಬ್ಬರಿಗೂ ಬಹಳ ಸಣ್ಣ ಪ್ರಾಯ. ಆಮಿರ್‌ಗೆ ಆಗಷ್ಟೇ 21 ವರ್ಷ ತುಂಬಿತ್ತು. ಮೊತ್ತಮೊದಲ ಭೇಟಿಯಾಗಲು ಕಾರಣ ಇಬ್ಬರೂ ನೆರೆಹೊರೆಯವರಾಗಿದ್ದುದು. ನಂತರ ಇಬ್ಬರೂ ಪ್ರೀತಿಯಲ್ಲಿ ಸಿಲುಕಿದರು. ಸಹಜವಾಗಿಯೇ ಿಬ್ಬರೂ ಬೇರೆ ಬೇರೆ ಮತದವರು ಆದುದರಿಂದ ಇಬ್ಬರ ಪೋಷಕರೂ ಪರಸ್ಪರ ವಿರೋಧಿಸುತ್ತಿದ್ದರು. ಆಮೀರ್‌ನನ್ನು ಭೇಟಿ ಮಾಡುವುದಿಲ್ಲ ಎಂದು ರೀನಾಳ ಬಳಿ ಆಕೆಯ ತಾಯಿ ಪ್ರಾಮಿಸ್‌ ಕೂಡ ಮಾಡಿಸಿಕೊಂಡಿದ್ದರು. ಆದರೆ ಇಬ್ಬರೂ ಒಂದು ದಿನ ರಹಸ್ಯವಾಗಿ ಹೋಗಿ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್‌ ವಿವಾಹವಾದರು. ಇದು ಆಮೀರ್ ಅವರ ಚೊಚ್ಚಲ ಚಿತ್ರ 'ಖಯಾಮತ್ ಸೆ ಖಯಾಮತ್ ತಕ್' ಬಿಡುಗಡೆಯಾಗುವ ಮೊದಲೇ ಆಗಿತ್ತು.

ಇತ್ತೀಚಿನ ಸಂದರ್ಶನವೊಂದರಲ್ಲಿ ಆಮೀರ್ ತಮ್ಮ ಆ ವಿವಾಹದ ತಮಾಷೆ ವಿವರಗಳನ್ನು ಹಂಚಿಕೊಂಡರು. ರೊಮ್ಯಾಂಟಿಕ್‌ ಆಗಿರಬೇಕಿದ್ದ ಆ ದಿನವನ್ನು ಪಾಕಿಸ್ತಾನಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಹೇಗೆ ʼಹಾಳು ಮಾಡಿದರುʼ ಎಂಬುದನ್ನೂ ಅವರು ಹಂಚಿಕೊಂಡರು. ಆಮೀರ್ ಮತ್ತು ರೀನಾ ಆ ದಿನ ಸದ್ದಿಲ್ಲದೆ ಹೋಗಿ ಮದುವೆಯಾಗಿ, ಏನೂ ಆಗಿಲ್ಲ ಎಂಬಂತೆ ಇಬ್ಬರೂ ಅವರವರ ಮನೆಗೆ ಮರಳಿದರಂತೆ. ಆಗ ಇಬ್ಬರೂ ಅವರ ಕುಟುಂಬದವರು ಯಾಕಿಷ್ಟು ತಡವಾಗಿ ಬಂದಿರಿ ಎಂದು ನಮ್ಮನ್ನು ಪ್ರಶ್ನಿಸುತ್ತಾರೆಂದು ನಾವು ಭಾವಿಸಿದ್ದೆವು. ಆದರೆ ಅದೃಷ್ಟವಶಾತ್, ಆ ದಿನ ಭಾರತ- ಪಾಕಿಸ್ತಾನ ಕ್ರಿಕೆಟ್‌ ಪಂದ್ಯ ನಡೆಯುತ್ತಿತ್ತು. ಎಲ್ಲರೂ ಅದರಲ್ಲಿ ಮುಳುಗಿದ್ದರು. ಹೀಗಾಗಿ ಇವರಿಬ್ಬರು ಮನೆಯಲ್ಲಿಲ್ಲ ಎಂದು ಯಾರೂ ಗಮನಿಸಲಿಲ್ಲ.

ಆದರೆ ಆ ಪಂದ್ಯವೇ ಆಮಿರ್ ಖಾನ್ ಅವರನ್ನು ಖಿನ್ನತೆಗೂ ಒಳಪಡಿಸಿತು. ಅದು ಭಾರತದ ತಂಡದ ವಿರುದ್ಧ ಪಾಕಿಸ್ತಾನ ತಂಡದ ಜಾವೇದ್ ಮಿಯಾಂದಾದ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮ್ಮ ತಂಡವನ್ನು ಗೆಲ್ಲಿಸಿಕೊಂಡ ಆ ಐತಿಹಾಸಿಕ ಪಂದ್ಯವಾಗಿತ್ತು. "ನಾವು ಆ ಪಂದ್ಯವನ್ನು ಗೆಲ್ಲುತ್ತಿದ್ದೆವು. ನಾನು ಕೂಡ ಮನೆಯವರೊಂದಿಗೆ ಸೇರಿಕೊಂಡು ಕ್ರಿಕೆಟ್ ನೋಡುತ್ತಿದ್ದೆ. ಆದರೆ ಜಾವೇದ್ ಅವರ ಸಿಕ್ಸರ್ ಎಲ್ಲವನ್ನೂ ಹಾಳುಮಾಡಿತು. ಒಮ್ಮೆ ನಾನು ಅವರನ್ನು ವಿಮಾನದಲ್ಲಿ ಭೇಟಿಯಾದಾಗ, 'ಜಾವೇದ್ ಭಾಯ್ ನೀವು ನನ್ನ ಮದುವೆ ದಿನವನ್ನು ಹಾಳುಮಾಡಿದ್ದೀರಿʼ ಎಂದೆ. ಅವರು ʼಹೇಗೆ’ ಎಂದು ಕೇಳಿದರು. ನಾನು ಹೇಳಿದೆ, ‘ಆ ದಿನ ನನ್ನ ಮದುವೆ ದಿನ. ನಾನು ಖುಷಿಯಾಗಿದ್ದೆ. ನೀವು ಸಿಕ್ಸ್‌ ಬಾರಿಸಿ ನನ್ನನ್ನು ಖಿನ್ನತೆಗೆ ನೂಕಿದಿರಿʼ ಎಂದೆ."

ಈ ಸಿನಿಮಾದಲ್ಲಿ ದೀಪಿಕಾ-ಸೂರ್ಯ ಜೋಡಿ ಆಗ್ಬೇಕಿತ್ತು; ಈ ನಿರ್ದೇಶಕರಿಂದ ಶಾಕಿಂಗ್ ಸತ್ಯ ಬಹಿರಂಗ!

ನಂತರ ರೀನಾ ದತ್ತ ಅವರ ಪೋಷಕರು ಇವರ ರಹಸ್ಯ ವಿವಾಹದ ಬಗ್ಗೆ ತಿಳಿದು ಇಬ್ಬರ ಮೇಲೆ ತುಂಬಾ ಅಸಮಾಧಾನಗೊಂಡರು. ಆಕೆಯ ತಂದೆಗೂ ಹೃದಯಾಘಾತವಾಯಿತು. ಆದರೆ ಅಂತಿಮವಾಗಿ ಎರಡೂ ಕುಟುಂಬಗಳೂ ಹತ್ತಿರ ಬಂದವು. ರೀನಾಳ ಕುಟುಂಬ ಆಕೆಯ ಮದುವೆಯನ್ನು ಒಪ್ಪಿಕೊಂಡಿತು. ನಂತರ ರೀನಾಳ ಸಹೋದರನೂ ಆಮೀರ್ ಖಾನ್‌ ಸಹೋದರಿ ಫರ್ಹತ್ ಅವರನ್ನು ವಿವಾಹವಾದರು. ಇಬ್ಬರ ಕುಟುಂಬಗಳೂ ಇಂದಿಗೂ ಹತ್ತಿರವಾಗಿವೆ. ಆದರೆ ಆಮೀರ್ ಮತ್ತು ರೀನಾ 2002ರಲ್ಲಿ ವಿಚ್ಛೇದನ ಪಡೆದರು.

ಆಮೀರ್ ಖಾನ್ ಅವರ 'ಸೀತಾರೆ ಜಮೀನ್ ಪರ್' ಇತ್ತೀಚೆಗೆ ಬಿಡುಗಡೆ ಆಗಿದೆ. ಆರ್.ಎಸ್. ಪ್ರಸನ್ನ ನಿರ್ದೇಶನದ ಇದು ಸ್ಪೋರ್ಟ್ಸ್‌ ಕಾಮಿಡಿ ಡ್ರಾಮಾ. ಆಮೀರ್‌ ಖಾನ್ ಅವರ 2007ರ ಕ್ಲಾಸಿಕ್ ಫಿಲಂ 'ತಾರೆ ಜಮೀನ್ ಪರ್'ನ ಮುಂದುವರಿದ ಭಾಗದಂತಿದೆ. ಈ ಚಿತ್ರದಲ್ಲಿ ಜೆನೆಲಿಯಾ ದೇಶ್ಮುಖ್ ಮತ್ತು 10 ಹೊಸ ನಟನಟಿಯರು ನಟಿಸಿದ್ದಾರೆ.

200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ, ಜಾಕ್ವೆಲಿನ್‌ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?