
ರಶ್ಮಿಕಾ ಮಂದಣ್ಣ (Rashmika Mandanna) ಅವರನ್ನು ಮೊನ್ನೆ ಮೊನ್ನೆ 'ಕುಬೇರ' ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಸರತಿ ಸಾಲಲ್ಲಿ ನಿಂತು ಸ್ಟಾರ್ ನಟರೆಲ್ಲ ಹೊಗಳಿದ್ದೇ ಹೊಗಳಿದ್ದು. ನಾಗಾರ್ಜುನರಿಂದ ಧನುಷ್‌ವರೆಗೆ ಎಲ್ಲರಿಂದ ಈ ಬ್ಯೂಟಿ ಶಭಾಷ್ ಅನಿಸಿಕೊಂಡರು. ಅದರ ಜೊತೆಗೆ 'ಕುಬೇರ' ಕೂಡ ತೀರ ಅಲ್ಲದಿದ್ದರೂ ಲಾಸ್ ಆಗಿಲ್ಲ ಅನ್ನೋವಷ್ಟು ದುಡ್ಡು ಮಾಡಿತ್ತು. ಅದಕ್ಕೂ ಹೆಚ್ಚಾಗಿ ಇದರಲ್ಲಿ ರಶ್ಮಿಕಾ ನಟನೆ ಗಮನ ಸೆಳೆಯಿತು. ಏಕೆಂದರೆ ಹತ್ತಿರತ್ತಿರ ೮೦೦ ಕೋಟಿಗೂ ಅಧಿಕ ಗಳಿಕೆ ಮಾಡಿದ ಛಾವಾ ಸಿನಿಮಾದಲ್ಲಿ ವಿಕ್ಕಿ ಕೌಶಲ್ ಅಭಿನಯಕ್ಕೆ ಸಿಕ್ಕಿದ ಮೆಚ್ಚುಗೆ ರಶ್ಮಿಕಾಗೆ ಸಿಕ್ಕಿರಲಿಲ್ಲ. ಹೆಚ್ಚಿನವರು ಆಕೆಯ ನಟನೆಯ ಬಗ್ಗೆ ಟೀಕೆ ಮಾಡಿದ್ದರು. ಅಂಥವರಿಗೆ ರಶ್ಮಿಕಾ 'ಕುಬೇರ'ದಲ್ಲಿ ಉತ್ತರ ಸಿಕ್ಕಿದೆ.
ಹಾಗೆ ನೋಡಿದರೆ ನಟಿ ರಶ್ಮಿಕಾ ಮಂದಣ್ಣ ಕೀರ್ತಿ ಈಗ ಜಗದಗಲ ವ್ಯಾಪಿಸಿದೆ. ಸ್ಟಾರ್ ನಟರ ಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸುವುದರ ಮೂಲಕ ಬಿಗ್‌ಬಜೆಟ್ ಚಿತ್ರಗಳ ನಾಯಕಿ ಎಂಬ ಹೆಗ್ಗಳಿಕೆ ಪಡೆದಿರೋ ರಶ್ಮಿಕಾ ಮಂದಣ್ಣ ಭಾರತೀಯ ಸಿನಿಮಾ ಇಂಡಸ್ಟ್ರಿಯ ನಟಿಯರ ಲಿಸ್ಟ್‌ನಲ್ಲಿ ಮುಂಚೂಣಿ ಸ್ಥಾನದಲ್ಲಿದ್ದಾರೆ. ಕಳೆದ ವಾರ ಈ ನಟಿಯ ಹೇಳಿಕೆಯೊಂದು ವೈರಲ್ ಆಗಿತ್ತು. ಲಂಡನ್‌ಲ್ಲಿ ನಡೆದ 'ವಿ ದ ವಿಮನ್' ಕಾರ್ಯಕ್ರಮದಲ್ಲಿ ಮಾಡಿರುವ ಪ್ರತಿಜ್ಞೆ ರಶ್ಮಿಕಾ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿತ್ತು. ಸಿನಿಮಾದಲ್ಲೂ ನಿಜಜೀವನದಲ್ಲೂ ರಶ್ಮಿಕಾ ಧೂಮಪಾನವನ್ನ ಪೋಷಿಸದಿರಲು ನಿರ್ಧರಿಸಿದ್ದಾರೆ ಅಂತ ಅವತ್ತು ಘೋಷಿಸಿದರು. 'ಸಿನಿಮಾದಲ್ಲಿ ಅದು ಪಾತ್ರವಾಗಿದ್ದರೂ ಧೂಮಪಾನ ಮಾಡೋದಿಲ್ಲ. ಅಂಥಹ ಕೃತ್ಯವನ್ನ ತೆರೆಮೇಲೆ ವಿಜೃಂಭಿಸಲು ಇಷ್ಟ ಪಡೋದಿಲ್ಲ. ಮಾಡುವ ಅನಿವಾರ್ಯತೆ ಬಂದರೆ ಅದು ಎಂಥದ್ದೇ ಚಿತ್ರವಾದರೂ ಆ ಪಾತ್ರವನ್ನ ನಾನು ತಿರಸ್ಕರಿಸಲು ಸಿದ್ಧ. ಮಾಡುವುದು ತಪ್ಪು ಸರಿ ಅನ್ನೋದನ್ನ ನಾನು ವಿಶ್ಲೇಷಿಸೋದಿಲ್ಲ. ಧೂಮಪಾನ ಮಾಡದಿರುವುದು ನನ್ನ ವೈಯಕ್ತಿಕ ಅಭಿಪ್ರಾಯ' ಅಂತ ಈ ಕಿರಿಕ್ ಬೆಡಗಿ ಹೇಳಿದ್ರು. ಈ ನಡುವೆ ಆಕ್ಟಿಂಗ್‌ನಲ್ಲೂ ಸೂಪರ್, ರಿಯಲ್ ಲೈಫಲ್ಲೂ ಗುಣವಂತೆ, ಸೋ ಸ್ವೀಟ್ ಆಫ್ ಯು ಅನ್ನುತ್ತ ಅಭಿಮಾನಿ ಸಡನ್ನಾಗಿ ಬಂದು ರಶ್ಮಿಕಾಗೆ ಕಿಸ್ ಮಾಡಿದ್ದೂ ನಡೆದಿದೆ.
ಇದಾದದ್ದು ಏರ್‌ಪೋರ್ಟ್‌ನಲ್ಲಿ. ಕಿರಿಕ್ ಬೆಡಗಿಗೆ ಕಿಸ್ ಮಾಡಿದ್ದು ಯಾರು ಅನ್ನೋದಕ್ಕಿಂತಲೂ ಕಿಸ್ ಮಾಡಿದ್ದಕ್ಕೆ ನಟಿಯ ರಿಯಾಕ್ಷನ್ ಹೇಗಿತ್ತು ಅಂತ ಹೇಳಿದ್ರೆ ನಿಮಗೆ ಆಶ್ಚರ್ಯ ಆಗಬಹುದು. ಯೆಸ್, ನಟಿ ತನ್ನ ಕೆನ್ನೆಗೆ ಅಭಿಮಾನಿ ಕಿಸ್ ಮಾಡಿದಾಗ ನಾಚಿಕೆಯಲ್ಲಿ ಮುಖ ಮುಚ್ಚಿಕೊಂಡಿದ್ದಾರೆ. ಹಾಗಿದ್ದರೆ ಆ ಅಭಿಮಾನಿ ವಿಜಯ ದೇವರಕೊಂಡನ ಅಂತ ನೀವು ಕೇಳಬಹುದು. ಅಲ್ವೇ ಅಲ್ಲ.
ರಿಷಬ್ ಶೆಟ್ಟಿ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಗುಡ್ ನ್ಯೂಸ್, ಹುಟ್ಟುಹಬ್ಬಕ್ಕೆ ಸರ್ಪ್ರೈಸ್
ಹೀಗೆ ರಶ್ಮಿಕಾಗೆ ಕಿಸ್ ಮಾಡಿದ್ದು ಒಬ್ಬ ಪುಟ್ಟ ಹುಡುಗಿ. ಏರ್‌ಪೋರ್ಟ್‌ನಲ್ಲಿ ರಶ್ಮಿಕಾ ಕೆನ್ನೆಯನ್ನು ಮುಟ್ಟಿ ಮುಟ್ಟಿ ಸಂಭ್ರಮಿಸಿದ ಹುಡುಗಿ ಆಕೆಯ ಕೆನ್ನೆಗೆ ಮುತ್ತುಕೊಟ್ಟಿದ್ದಾಳೆ. ಅದಕ್ಕೆ ಮುಖಮುಚ್ಚಿ ನಾಚಿದ ಹಾಗೆ ರಶ್ಮಿಕಾ ಪೋಸ್ ನೀಡಿದ್ದಾರೆ. ರಶ್ಮಿಕಾ ಅವರ ಈ ಬಿಹೇವಿಯರ್ ಅನ್ನು ಸೋಷಲ್ ಮೀಡಿಯಾದಲ್ಲಿರುವ ಅವರ ಕೋಟ್ಯಂತರ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ.
ಆರು ನಟಿಯರ ಜೊತೆ ರಿತೇಶ್ ತಿವಾರಿ ಸರ್ಕಸ್... ಸಾಯಿ ಪಲ್ಲವಿ ಸೇರಿ ಯಾರೆಲ್ಲಾ ಅದ್ರಲ್ಲಿ ಇರೋದು..?
'ಮೈಸಾ', 'ದಿ ಗರ್ಲ್‌ಫ್ರೆಂಡ್' ಸೇರಿ ಸದ್ಯ ರಶ್ಮಿಕಾ ಕೈ ತುಂಬ ಸಿನಿಮಾಗಳನ್ನು ಬಾಚಿಕೊಳ್ಳುತ್ತಿದ್ದಾರೆ. ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಲಕ್ಕಿ ಚಾರ್ಮ್ ಅಂತಲೇ ಫೇಮಸ್ ಆಗಿರುವ ರಶ್ಮಿಕಾಗೆ 'ಸಾವಿರ ಕೋಟಿಗಳ ನಟಿ' ಅನ್ನೋ ಹೆಗ್ಗಳಿಕೆಯೂ ಇದೆ. ರಶ್ಮಿಕಾ ಡೆಡಿಕೇಶನ್ ಬಗ್ಗೆ ಸಲ್ಮಾನ್ ಖಾನ್‌ರಿಂದ ಧನುಷ್ ತನಕ ಹಲವು ಸ್ಟಾರ್‌ಗಳು ಕೊಂಡಾಡಿದ್ದಾರೆ. ಇಷ್ಟೆಲ್ಲ ಬೆಳೆದಿರುವ ರಶ್ಮಿಕಾ ಬಗ್ಗೆ ಕನ್ನಡಿಗರ ಸಿಟ್ಟೂ ಕಡಿಮೆಯಾದಂತಿದೆ. ಜನ ಆಕೆಯ ಬಗ್ಗೆ ಕೊಂಚ ಸಿಟ್ಟಿನಿಂದಲೂ ಕೊಂಚ ಅಭಿಮಾನದಿಂದಲೂ ನೋಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.