ಹೆಸರಿಗೆ ಬ್ರಹ್ಮಗಂಟು ಆದ್ರೆ, ಅಣ್ಣ-ತಂಗಿ ಸಂಬಂಧಕ್ಕೆ ಬೆಲೆನೇ ಇಲ್ವೇ! ಚಿರು-ಸಂಜನಾ ರೊಮ್ಯಾನ್ಸ್‌ಗೆ ಆಕ್ರೋಶ

Published : Jul 02, 2025, 06:46 PM IST
Brahmagantu Serial Twist

ಸಾರಾಂಶ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಚಿರು ಮತ್ತು ಸಂಜನಾ ನಡುವಿನ ರೊಮ್ಯಾನ್ಸ್ ದೃಶ್ಯಗಳು ವಿವಾದಕ್ಕೆ ಕಾರಣವಾಗಿವೆ. ವರಸೆಯಲ್ಲಿ ಅಣ್ಣ-ತಂಗಿ ಆಗಿದ್ದರೂ ಕೆಲ ದೃಶ್ಯಗಳು ಸಂಪ್ರದಾಯ ಗಡಿ ಮೀರಿವೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಚಿರು ಮತ್ತು ಸಂಜನಾ ರೊಮ್ಯಾನ್ಸ್ ದೃಶ್ಯ ಸಂಪ್ರದಾಯಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಬ್ರಹ್ಮಗಂಟು ಧಾರಾವಾಹಿಯಲ್ಲಿ ಇದೀಗ ತಂಗಿ ದೀಪಾಳ ಸಂಸಾರವನ್ನು ಕಾಪಾಡಲು ಹೋಗಿ ಚಿರು ಮದುವೆಯಾಗಲು ಹಸೆಮಣೆಯಲ್ಲಿ ಕುಳಿತಿದ್ದ ಸಂಜನಾಗೆ ತಾಳಿ ಕಟ್ಟಿದ್ದಾನೆ. ಆದರೆ, ಮದುವೆಯಾಗಿ ನರಸಿಂಹನ ಮನೆಗೆ ಬಂದಿರುವ ಸಂಜನಾ, ನರಸಿಂಹನಿಗೆ ಬುದ್ದಿ ಕಲಿಸುವ ಜೊತೆಗೆ ಮನೆಯನ್ನು ನಾಶ ಮಾಡಲು ಪಣತೊಟ್ಟಿದ್ದಾಳೆ. ಒಂದು ಕೌಟುಂಬಿಕ ಧಾರಾವಾಹಿಯಲ್ಲಿ ಇದೆಲ್ಲವೂ ಸರಿಯಾಗಿದೆ, ಆದರೆ ಭಾರತೀಯ ಸಂಪ್ರದಾಯದಂತೆ ಚಿರು ಮತ್ತು ಸಂಜನಾ ಇದೀಗ ವರಸೆಯಂತೆ ಅಣ್ಣ-ತಂಗಿ ಸಂಬಂಧ ಆಗಬೇಕು. ನಿರ್ದೇಶಕರು ಮಾತ್ರ ಚಿರು ಜೊತೆಗೆ ಸಂಜನಾಗೆ ರೊಮ್ಯಾನ್ಸ್ ಮಾಡುವ ಪಾತ್ರಗಳನ್ನು ಕೊಟ್ಟು ಸಂಬಂಧಗಳಿಗೆ ಬೆಲೆ ಇಲ್ಲದಂತೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.

ನರಸಿಂಹ ಮತ್ತು ಸಂಜನಾ ನಡುವೆ ಪ್ರೀತಿ, ಹೊಂದಾಣಿಕೆಯನ್ನು ಏರ್ಪಡುವಂತೆ ಮಾಡಲು ಚಿರು-ದೀಪಾ ಮತ್ತು ಮಕ್ಕಳು ಸೇರಿಕೊಂಡು ಫೋಟೋ ಶೂಟ್ ಮಾಡುವ ಉಪಾಯ ಮಾಡಿದ್ದಾರೆ. ಈ ವೇಳೆ ಸಂಜನಾಗೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಬಂದಾಗ ನರಸಿಂಹ ಇನ್ನೂ ರೆಡಿಯಾಗುತ್ತಿರುತ್ತಾನೆ.  ಆಗ ಫ್ಯಾಷನ್ ಡಿಸೈನರ್ ಆಗಿರುವ ಚಿರುಗೆ ಒಂದಷ್ಟು ಫೋಟೋ ಪೋಸ್‌ಗಳಿಗೆ ಸಂಜನಾ ಸಲಹೆ ಕೇಳುತ್ತಾಳೆ. ಆಗ ನರಸಿಂಹ ಮತ್ತು ದೀಪಾಳಿಗೆ ನೋವು ಕೊಡಬೇಕೆಂದು ಚಿರು ಕೈಯನ್ನು ಹಿಡಿದುಕೊಂಡು ತನ್ನ ಸೊಂಟದ ಮೇಲಿಟ್ಟುಕೊಂಡು ರೊಮ್ಯಾನ್ಸ್ ಮಾಡುವ ರೀತಿಯಲ್ಲಿ ಪೋಸ್ ಕೊಡಲು ಮುಂದಾಗುತ್ತಾಳೆ. ಜೊತೆಗೆ, ಕಿಸ್ ಪೋಸ್‌ಗಳನ್ನು ಹೇಗೆ ಕೊಡಬೇಕೆಂದು ಕೇಳುತ್ತಿರುವಾಗ ನರಸಿಂಹ ಮಧ್ಯ ಪ್ರವೇಶಿಸಿ ಸಂಜನಾ ಜೊತೆಗೆ ಫೋಟೋ ಪೋಸ್ ಕೊಡುತ್ತಾನೆ.

 

ಭಾರತೀಯ ಕುಟುಂಬಗಳ ಸಂಬಂಧಗಳಲ್ಲಿ ಒಮ್ಮೆ ವರಸೆಯಲ್ಲಿ ಅಣ್ಣ-ತಂಗಿ ಎಂದು ತಿಳಿದಲ್ಲಿ ಅವರ ನಡುವೆ ಯಾವುದೇ ಮೋಹಕ್ಕೆ ಅವಕಾಶವೇ ಇರುವುದಿಲ್ಲ. ಇನ್ನು ಯಾರೇ ಆಗಲೀ ಇದನ್ನು ತುಂಬಾ ಕಟ್ಟುನಿಟ್ಟಿನಿಂದ ಪಾಲನೆ ಮಾಡುತ್ತಾರೆ. ಆದರೆ, ಧಾರಾವಾಹಿಯಲ್ಲಿ ಚಿರು ಅತ್ತಿಗೆ ಸಂದರ್ಯಾ, ದೀಪಾಳಿಗೆ ಚಿರುನಿಂದ ಡಿವೋರ್ಸ್ ಕೊಡಿಸಿ ಪೊಲೀಸ್ ಅಧಿಕಾರಿಯ ಮಗಳು ಸಂಜನಾ ಜೊತೆಗೆ ಮದುವೆ ಮಾಡಲು ಮುಂದಾಗುತ್ತಾಳೆ. ಈ ವೇಳೆ ನರಸಿಂಹ ಬಂದು ಸಂಜನಾಗೆ ತಾಳಿ ಕಟ್ಟುತ್ತಾನೆ. ದೀಪಾಳ ಅಣ್ಣ ನರಸಿಂಹ ಮತ್ತು ಸಂಜನಾಗೆ ಮದುವೆಯಾದ ನಂತರ ದೀಪಾ ಗಂಡ ಚಿರುಗೆ ಸಂಜನಾ ಸಹೋದರಿ ಸಮಾನ ಆಗುತ್ತಾಳೆ. ಚಿರು ಮತ್ತು ಸಂಜನಾ ನಡುವೆ ವರಸೆ ಪ್ರಕಾರ ಅಣ್ಣ-ತಂಗಿ ಸಂಬಂಧ ಆಗುತ್ತದೆ.

ಒಂದೇ ಕುಟುಂಬದಲ್ಲಿ ಅಣ್ಣ-ತಂಗಿ ಸಂಬಂಧ ಇದ್ದರೂ ಅವರಿಬ್ಬರ ನಡುವೆ ಸಂಪ್ರದಾಯಗಳನ್ನು ಮೀರಿ ಸಂಜನಾ-ನರಸಿಂಹಗೆ ಏರ್ಪಡಿಸಿದ್ದ ಫೋಟೋ ಶೂಟ್ ವೇಳೆ ಚಿರು-ಸಂಜನಾ ರೊಮ್ಯಾನ್ಸ್ ಮಾಡಿಸಲು ಹೊರಟಿದ್ದು ಎಷ್ಟು ಸರಿ ಎಂದು ಸಂಪ್ರದಾಯಸ್ಥರು ಮೂಗು ಮುರಿಯುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಸಂಬಂಧಗಳಿಗೆ ಬೆಲೆಯನ್ನೇ ಕೊಡುತ್ತಿಲ್ಲ. ಒಬ್ಬರ ಮೇಲೆ ದ್ವೇಷ ಸಾಧಿಸುವುದಕ್ಕಾಗಿ ಅನಾದಿ ಕಾಲದಿಂದ ಬಂದ ಸಂಬಂಧಗಳನ್ನು ಹಾಳು ಮಾಡಬಾರದು ಎಂದು ಹಿರಿತಲೆಗಳು ಜಗುಲಿಕಟ್ಟೆ ಮೇಲೆ ಕುಳಿತು ಮಾತನಾಡುವುದು ಕೂಡ ಕೇಳಿಬಂದಿದೆ.

ನರಸಿಂಹ-ಸಂಜನಾ ಮದುವೆಯಾದ ನಂತರ ಅವರೊಬ್ಬರೂ ಖುಷಿಯಾಗಿದ್ದಾರೆ ಎಂದು ನಂಬಿಕೊಂಡು ಸೀರೆ ಕೊಟ್ಟು ಶುಭಾಶಯ ಕೋರಲು ಬಂದಿದ್ದ ದೀಪಾಗೆ ಅವರ ಸಂಸಾರ ಚೆನ್ನಾಗಿಲ್ಲವೆಂದು ತಿಳಿದು ಬೇಸರಗೊಂಡಿದ್ದಾಳೆ. ಇದನ್ನು ಇಷ್ಟಕ್ಕೆ ಬಿಡದೇ ಅವರಲ್ಲಿ ಹೊಂದಾಣಿಕೆ ತರುವ ದೃಷ್ಟಿಯಿಂದ ಹಲವು ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ. ನರಸಿಂಹನ ಮನೆಯಲ್ಲಿ ಮದುವೆಯಾದ ಜೋಡಿಗೆ ಶುಭವಾಗಲೆಂದು ಪೂಜೆಯನ್ನೂ ಏರ್ಪಾಡು ಮಾಡಲಾಗಿದೆ. ಈ ಪೂಜೆಗೆ ಅನುಕೂಲ ಆಗುವಂತೆ ಮನೆ ಕೆಲಸ ಮಾಡಲು ಸ್ವತಃ ದೀಪಾಳ ಅಕ್ಕ ರೂಪ ಕೂಡ ಕೆಲಸದಾಕೆಯಾಗಿ ಮನೆ ಸೇರಿಕೊಂಡಿದ್ದಾಳೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬರಿಗೈಯಲ್ಲಿ ಟಾಯ್ಲೆಟ್​ ತೊಳೆದ Bigg Boss ಡಾಗ್​ ಸತೀಶ್​​: ನಿಮ್ಮ ಮನೆಗೂ ಬೇಕಾದ್ರೆ ಬರ್ತಾರಂತೆ!
Karna: ಎಲ್ಲವೂ ಸರಿ ಹೋಗತ್ತೆ ಅಂದುಕೊಂಡಾಗ್ಲೇ ನಿಧಿಯ ಈ ನಿರ್ಧಾರ ಸರಿನಾ? ನಿತ್ಯಾ ಮುಂದೆ ಆಗಿದ್ದೇನು?