ಬಾಯ್‌ಫ್ರೆಂಡ್ ರಾಣಾ ಮದ್ವೆ ಫಿಕ್ಸ್ ಆದ ಬೆನ್ನಲ್ಲೇ ಕಾಂಟ್ರವರ್ಶಿಯಲ್ ಹೀರೋ ಜೊತೆ ತೃಷಾ ಮದುವೆ..!

Suvarna News   | Asianet News
Published : Jul 19, 2020, 11:32 AM ISTUpdated : Jul 19, 2020, 12:02 PM IST
ಬಾಯ್‌ಫ್ರೆಂಡ್ ರಾಣಾ ಮದ್ವೆ ಫಿಕ್ಸ್ ಆದ ಬೆನ್ನಲ್ಲೇ ಕಾಂಟ್ರವರ್ಶಿಯಲ್ ಹೀರೋ ಜೊತೆ ತೃಷಾ ಮದುವೆ..!

ಸಾರಾಂಶ

ಸುಮಾರು 20 ವರ್ಷಗಳಿಂದ ತಮಿಳು ಸಿನಿಮಾದಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಪಡೆದಿರೋ ಟಾಪ್ ನಟಿ ತೃಷಾ ಕೃಷ್ಣ ಮದ್ವೆಯಾಗುತ್ತಿದ್ದಾರೆ. ಅದೂ ಬರೀ ಕಾಂಟ್ರವರ್ಸಿಯಿಂದನೇ ಸುದ್ದಿಯಲ್ಲಿರೋ ನಟನನ್ನು.

ಸುಮಾರು 20 ವರ್ಷಗಳಿಂದ ತಮಿಳು ಸಿನಿಮಾದಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಪಡೆದಿರೋ ಟಾಪ್ ನಟಿ ತೃಷಾ ಕೃಷ್ಣ ಮದ್ವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 1999ರಲ್ಲಿ ಜೋಡಿ ಸಿನಿಮಾ ಮೂಲಕ ಸಿನಿಲೋಕಕ್ಕೆ ಎಂಟ್ರಿ ಕೊಟ್ಟ ನಟಿ ನಂತರ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ.

ಸಿನಿಮಾ ಇಂಡಸ್ಟ್ರಿಯಲ್ಲಿ 4-5 ವರ್ಷಕ್ಕಿಂತ ಹೆಚ್ಚು ಹಿರೋಯಿನ್ ಆಗಿ ಉಳಿಯೋದೇ ಕಷ್ಟ ಎನ್ನುವ ಮಾತನ್ನು ತೃಷಾ ಸುಳ್ಳು ಮಾಡಿದ್ದಾರೆ. ಬರೋಬ್ಬರಿ 20 ವರ್ಷದಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯಾಗಿದ್ದು, ಈಗಲೂ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಜುಲೈ 26ಕ್ಕೆ ನಟ ನಿತಿನ್ ಮತ್ತು ಶಾಲಿನಿ ಮದುವೆ ಫಿಕ್ಸ್‌!

2015ರಲ್ಲಿ ತೃಷಾ ತಮ್ಮ ಬಾಯ್‌ಫ್ರೆಂಡ್ ವರುಣ್ ಮನಿಯನ್ ಜೊತೆ ಎಂಗೇಜ್‌ಮೆಂಟ್ ಮಾಡ್ಕೊಂಡಿದ್ರು. ಖಾಸಗಿ ಕಾರ್ಯಕ್ರಮವಾಗಿತ್ತದು. ಆದರೆ ನಂತರದಲ್ಲಿ ಕೆಲವೊಂದು ಕಾರಣಗಳಿಂದ ವಿವಾಹ ಕ್ಯಾನ್ಸಲ್ ಆಯ್ತು.

ಆರಂಭದಲ್ಲಿ ರಾಣಾ ದಾಗುಬಟಿ ಜೊತೆ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ರಾಣಾ ಗೆಳತಿ ಮಿಹಿಕಾ ಬಜಾಜ್ ಅವರನ್ನು ಮುಂದಿನ ಅಗಸ್ಟ್‌ನಲ್ಲಿ ವರಿಸಲಿದ್ದಾರೆ. ಈ ಬೆನ್ನಲ್ಲೇ ಕಾಂಟ್ರವರ್ಸಿ ಹಿರೋ ಸಿಂಬು ಅವ್ರನ್ನು ತೃಷಾ ವರಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ.

ಯಶಸ್ಸಿನ ಜೊತೆ ಮೊದಲ ಪ್ರೀತಿಯನ್ನೇ ಮರೆತ ಪ್ರಿಯಾಂಕಾ ಚೋಪ್ರಾ

ಹಿಂದೆ ಫ್ಯಾನ್ ಒಬ್ಬರು ತೃಷಾ ರಿಲೇಷನ್‌ಶಿಪ್ ಬಗ್ಗೆ ಕೇಳಿದ್ದಾಗ ಉತ್ತರಿಸಿದ ನಟಿ, ನಾನು ಸಿಂಗಲ್, ಆದ್ರೆ ಟೇಕನ್ ಎಂದಿದ್ದರು. ಲಾಕ್‌ಡೌನ್ ನಂತರ ಸಿಂಬು ತೃಷಾ ವರನ್ನು ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.

ತೃಷಾ ಮತ್ತು ಸಿಂಬು ಯೇ ಮಾಯಾ ಚೇಸಾವೆ ತೆಲುಗು ಸಿನಿಮಾದ ತಮಿಳು ವರ್ಷನ್‌ನಲ್ಲಿ ನಟಿಸಿದ್ದರು. ಇದೀಗ ಮತ್ತೆ ಗೌತಮ್ ಮೆನೊನ್ ಸಿನಿಮಾದ ಮೂಲಕ ಒಂದಾಗಲಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾವು ಊಟಕ್ಕಾಗೇ ಮದುವೆಗೆ ಹೋಗ್ತೇವೆ, ಕರಣ್ ಜೋಹರ್ ಮದುವೆಗೆ ಹೋದ್ರೂ ಊಟ ಮಾಡಲ್ಲ, ಕಾರಣ ?!
ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!