ಜುಲೈ 26ಕ್ಕೆ ನಟ ನಿತಿನ್ ಮತ್ತು ಶಾಲಿನಿ ಮದುವೆ ಫಿಕ್ಸ್‌!

Suvarna News   | Asianet News
Published : Jul 19, 2020, 10:58 AM IST
ಜುಲೈ 26ಕ್ಕೆ ನಟ ನಿತಿನ್ ಮತ್ತು ಶಾಲಿನಿ ಮದುವೆ ಫಿಕ್ಸ್‌!

ಸಾರಾಂಶ

ಲಾಕ್‌ಡೌನ್‌ನಿಂದ ಮದುವೆ ಮುಂದೂಡಿದ್ದ ಟಾಲಿವುಡ್ ನ ಈ ಪ್ರಸಿದ್ಧ  ನಟ ಕೊನೆಗೂ ಜುಲೈನಲ್ಲಿ ದಿನಾಂಕವನ್ನು ನಿಗಧಿ ಮಾಡಿದ್ದಾರೆ....

ತೆಲುಗು ಚಿತ್ರರಂಗದ ಯಂಗ್ ನಟ ನಿತಿನ್‌ ಮತ್ತು ಬಹು ದಿನಗಳ ಗೆಳತಿ ಶಾಲಿನಿ ಫೆಬ್ರವರಿಯಲ್ಲಿ ಅದ್ಧೂರಿಯಾಗಿ ನಿಶ್ಛಿತಾರ್ಥ ಮಾಡಿಕೊಂಡಿದ್ದರು. ಇವರಿಬ್ಬರ ಮದುವೆ ಏಪ್ರಿಲ್‌ನಲ್ಲಿ ನಿಗಧಿ ಮಾಡಲಾಗಿತ್ತು ಆದರೆ ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಮುಂದೂಡಿದ್ದರು ಆದರೀಗ ದಿನಾಂಕ ಫಿಕ್ಸ್ ಮಾಡಿದ್ದಾರೆ ಎನ್ನಲಾಗಿದೆ.

ಯಶಸ್ಸಿನ ಜೊತೆ ಮೊದಲ ಪ್ರೀತಿಯನ್ನೇ ಮರೆತ ಪ್ರಿಯಾಂಕಾ ಚೋಪ್ರಾ

ಮದುವೆ ಪ್ಲಾನ್:

ಮದುವೆಯನ್ನು ಅದ್ಧೂರಿಯಾಗಿ ಪ್ಲಾನ್ ಮಾಡಿದ 'ಭೀಷ್ಮ' ಚಿತ್ರದ ನಟ ಲಾಕ್‌ಡೌನ್‌ ನಿಯಮಗಳಿಂದ ಸರಳವಾಗಿ ಹಸೆಮಣೆ ಏರಬೇಕಿದೆ. ಡೆಸ್ಟಿನೇಷನ್‌ ವೆಡಿಂಗ್ ಎಂದು ದುಬೈನಲ್ಲಿ ಆಪ್ತ ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆಯಾಗಬೇಕೆಂದು ಇಚ್ಛಿಸಿದ್ದರು ಆದರೆ  ಈಗ ಎಲ್ಲೂ ಪ್ರಯಾಣ ಮಾಡಲಾಗದ ಕಾರಣ ತಮ್ಮ ಫಾರ್ಮ್‌ಹೌಸ್‌ಲ್ಲಿ ಮದುವೆ ಕಾರ್ಯಕ್ರಮಗಳನ್ನು ನಡೆಸುವುದಾಗಿ ತೀರ್ಮಾನ ಮಾಡಿದ್ದಾರಂತೆ.

ಆಷಾಢ ಮಾಸ ಮುಗಿದ ನಂತರ ಹೈದರಾಬಾದ್  ಫಾರ್ಮ್ಹೌಸ್ನಲ್ಲಿ ನಡೆಯುವ ಮದುವೆಯಲ್ಲಿ ಎರಡೂ ಕುಟುಂಬಕ್ಕೂ ಆಪ್ತರಾಗಿರುವವರನ್ನು ಮಾತ್ರ ಕರೆಯುವ ಯೋಚನೆಯಲ್ಲಿದೆ ನಿತಿನ್ ಕುಟುಂಬ ಇದರ ಜೊತೆಗೆ ಸಾಮಾಜಿಕ ಅಂತರ, ಮಾಸ್ಕ್ ಮತ್ತು ಸ್ಯಾನಿಟೈಸರ್ನನ್ನು ಬಳಸಲಾಗುತ್ತದೆ.

ಶಾರುಖ್ ಖಾನ್ ಕೊನೆ ಮಗ ಅಬ್ರಾಮ್‌ನ ಬಾಡಿಗೆ ತಾಯಿ ಒಬ್ಬ ಹಿಂದು

ರಶ್ಮಿಕಾ ಮಂದಣ್ಣ ಜೊತೆ ಭೀಷ್ಮ ಚಿತ್ರದಲ್ಲಿ ಅಭಿನಯಿಸಿದ ನಂತರ ನಿತಿನ್ 'ರಂಗ್ ದೇ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕರೀಷ್ಮಾ ಮದುವೆಯಲ್ಲಿ ನಟಿ ಕೈಗೆ ಮುತ್ತಿಟ್ಟಿದ್ದ ಅಕ್ಷಯ್ ಖನ್ನಾ, ವರ್ಷ 50 ಆದ್ರೂ ಸಿಂಗಲ್
ಅಂಗವೈಕಲ್ಯ ಮೆಟ್ಟಿ ನಿಂತು ಚಿತ್ರರಂಗದಲ್ಲಿ ಸ್ಟಾರ್ ಆಗಿ ಮೆರೆದ ನಟ-ನಟಿಯರು