
ತಮಿಳು ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ತಲಾ ಅಜಿತ್ ಮನೆಯಲ್ಲಿ ಬಾಂಬ್ ಇರುವುದಾಗಿ ರಾತ್ರೋ ರಾತ್ರಿ ಬೆದರಿಕೆ ಕರೆ ಬಂದಿದೆ. ನಿಜಕ್ಕೂ ಇದೆಲ್ಲಾ ಮಾಡುತ್ತಿರುವುದು ಯಾರು? ಇದರ ಹಿಂದಿರುವ ಉದ್ದೇಶವಾದರೂ ಏನು ?
ಲಾಕ್‌ಡೌನ್ ಇರುವ ಕಾರಣ ಕುಟುಂಬಸ್ಥರ ಜೊತೆ ಮನೆಯಲ್ಲಿ ಸಮಯ ಕಳೆಯುತ್ತಿರುವ ಅಜಿತ್‌ಗೆ ತಮ್ಮ ಇಂಜಮ್‌ಬಕ್ಕಮ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದೆ. ಈ ವಿಚಾರದ ಬಗ್ಗೆ ತಕ್ಷಣವೇ ಪೊಲೀಸರಿಗೆ ಅಜಿತ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳಗಳು ಕೆಲವೇ ನಿಮಿಷಗಳಲ್ಲಿ ಅಜಿತ್ ನಿವಾಸ ತಲುಪಿದ್ದು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಬಾಂಬ್ ಪತ್ತೆಯಾಗದ ಕಾರಣ ಹುಸಿಕರೆ ಮಾಡಿದವರು ಯಾರೆಂದು ಪತ್ತೆ ಮಾಡುತ್ತಿದ್ದಾರೆ.
ಅಜಿತ್ ಮನೆಯಲ್ಲಿ ಬಾಂಬ್ ಇಡುವುದಾಗಿ ಹೆದರಿಸಿರುವುದು ಇದೇ ಮೊದಲೇನಲ್ಲ ಈ ಹಿಂದೆ 2014ರಲ್ಲಿ ಮತ್ತು 2017ರಲ್ಲಿ ಇದೇ ರೀತಿಯ ಸುಳ್ಳು ಕರೆ ಬಂದಿತ್ತು. ರಿಸ್ಕ್ ತೆಗೆದುಕೊಳ್ಳಬಾರದು ಎಂಬ ಕಾರಣಕ್ಕೆ ಅಜಿತ್ ಪೊಲೀಸರಿಗೆ ತಿಳಿಸಿದ್ದರು.
ವಿಜಯ್ ದಳಪತಿ - ರಜನಿಕಾಂತ್:
ಇದೇ ವರ್ಷ ಇನ್ನಿಬ್ಬರು ಕಾಲಿವುಡ್ ಸ್ಟಾರ್‌ಗಳಾದ ವಿಜಯ್ ದಳಪತಿ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ನಿವಾಸಕ್ಕೆ ಬಾಂಬ್ ಕರೆ ಬಂದಿದೆ. ವಿಜಯ್ ದಳಪತಿ ಮತ್ತು ರಜನಿಕಾಂತ್ ನಿವಾಸಕ್ಕೆ ಬಾಂಬ್ ಇಟ್ಟಿರುವದಾಗಿ ಕರೆ ಬಂದಿತ್ತು ಆದರೆ ಅದೊಂದು ಹುಸಿಕರೆ ಎಂದು ಪೊಲೀಸರ ವಿಚಾರಣೆಯ ನಂತರ ತಿಳಿಯಿತು. ಈ ರೀತಿಯ ಘಟನೆಗಳು ಪದೇ ಪದೇ ಮರುಕಳಿಸುತ್ತಿರುವುದರಿಂದ ತಮಿಳು ಚಿತ್ರರಂಗದ ನಟರು ಬೇಸತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.