
ಯಶ್, ಕಿಯಾರಾ ಅಡ್ವಾಣಿ ಮುಖ್ಯಪಾತ್ರದಲ್ಲಿರುವ ‘ಟಾಕ್ಸಿಕ್’ ಸಿನಿಮಾ ಜೂ.4ರಂದು ಬಿಡುಗಡೆಯಾಗುತ್ತಿದೆ. ಈ ಬಿಗ್ ಬಜೆಟ್ ವರ್ಲ್ಡ್ ಕ್ಲಾಸ್ ಸಿನಿಮಾಕ್ಕೆ ನಾಯಕಿಯಾಗಿ ಕಿಯಾರಾ ಆಯ್ಕೆಯಾಗಿದ್ದು ಹೇಗೆ ಎಂದು ಮೂರು ಕಾರಣದೊಂದಿಗೆ ನಿರ್ದೇಶಕಿ ಗೀತು ಮೋಹನ್ ದಾಸ್ ವಿವರಿಸಿದ್ದಾರೆ.
1. ನಾಡಿಯಾ ಪಾತ್ರಕ್ಕೆ ಮೃದುತ್ವವೂ ಆವೇಶವೂ ಇದೆ. ಕಿಯಾರಾ ನಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ನನಗೆ ಈ ಪಾತ್ರಕ್ಕೆ ಅವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಅನಿಸಿತ್ತು. ಸಿನಿಮಾದಲ್ಲಿ ತರ್ಕ ವರ್ಕೌಟ್ ಆಗುವುದಿಲ್ಲ. ಇಲ್ಲಿ ಎಮೋಶನ್ ಅಥವಾ ಭಾವನೆಯೇ ಪ್ರಬಲ ಮಾಧ್ಯಮ. ತರ್ಕಕ್ಕೂ ಮೀರಿ ಭಾವನಾತ್ಮಕವಾಗಿ ಕಿಯಾರಾ ಅವರನ್ನು ಆಯ್ಕೆ ಮಾಡಿದೆ.
2. ಕಿಯಾರಾ ಪಾತ್ರವನ್ನು ಜೀವಿಸುವ ಬಗೆ ಅದ್ಭುತ. ಆಕೆ ತೆರೆ ಮೇಲಿದ್ದರೆ ನಟಿಸುತ್ತಿದ್ದಾಳೆ ಅನಿಸಲ್ಲ, ಪಾತ್ರವೇ ನಮ್ಮೆದುರು ನಿಂತಂತೆ ಭಾಸವಾಗುತ್ತದೆ. ಅಬ್ಬರಕ್ಕಿಂತ ಗಾಢವಾಗಿ ತಟ್ಟುವ ಹುಡುಗಿಯವಳು. ಮೌನವಾಗಿರುತ್ತಾಳೆ, ಮನಸ್ಸಲ್ಲೇ ಪಾತ್ರದ ಬಗ್ಗೆ ಆಲೋಚಿಸುತ್ತಿರುತ್ತಾಳೆ. ಕೆಲವೊಮ್ಮೆ ಪಾತ್ರದ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಾಳೆ. ನಿರ್ದೇಶಕರ ಚಿಂತನೆಯನ್ನು ಗ್ರಹಿಸಿ ಪಾತ್ರಕ್ಕಿಳಿಸುವ ಕಲೆ ಈಕೆಗಿದೆ.
3. ಈ ಹುಡುಗಿಯ ಶಿಸ್ತು, ಪ್ರಾಮಾಣಿಕತೆ, ತಾನಾಯ್ತು ತನ್ನ ಕೆಲಸ ಆಯ್ತು ಎಂಬ ಪ್ರವೃತ್ತಿ ನನಗೆ ಇಷ್ಟವಾದ ಮತ್ತೊಂದು ಅಂಶ.
ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ‘ತಬಾಹಿ’ ಎಂಬ ಹಾಡು ಮಾರ್ಚ್ 2ರಂದು ಕೆವಿಎನ್ ಪ್ರೊಡಕ್ಷನ್ಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು. ಸಿನಿಮಾದ ನಾಡಿಯಾ ಪಾತ್ರಧಾರಿ ಕಿಯಾರಾ ಅಡ್ವಾಣಿ ಅವರನ್ನು ಶರ್ಟ್‌ಲೆಸ್ ಆಗಿ, ಕೈಯಲ್ಲಿ ಸಿಗಾರ್ ಹಿಡಿದ ಯಶ್ ಎದೆಗಪ್ಪಿ ಎತ್ತಿಕೊಂಡು ಸಮುದ್ರ ದಂಡೆಯಲ್ಲಿ ನಡೆಯುವ ರೊಮ್ಯಾಂಟಿಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸಿದೆ. ಇದು ‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡು. ‘ಟಾಕ್ಸಿಕ್ ಜಗತ್ತು, ಸುರಕ್ಷಿತ ಅಪ್ಪುಗೆ’ ಎಂಬ ಟ್ಯಾಗ್‌ಲೈನ್ ಈ ಹಾಡಿನ ಪೋಸ್ಟರ್‌ನೊಂದಿಗಿದೆ. ವಿಶಾಲ್ ಮಿಶ್ರ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿ ಧ್ವನಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.