ರಣರಂಗವಾದ ಹನಿ ಸಿಂಗ್ ಮ್ಯೂಸಿಕ್‌ ಕನ್ಸರ್ಟ್ : ಗೇಟ್ ಏರಲು ಯತ್ನಿಸಿದ ಮಹಿಳಾ ಅಭಿಮಾನಿ-Watch Video

Published : Mar 30, 2026, 05:07 PM IST
Yo Yo Honey Singh

ಸಾರಾಂಶ

ಮುಂಬೈನಲ್ಲಿ ನಡೆದ ಯೋ ಯೋ ಹನಿ ಸಿಂಗ್ ಸಂಗೀತ ಕಚೇರಿಯಲ್ಲಿ ಮಹಿಳಾ ಅಭಿಮಾನಿಯೊಬ್ಬರು ಗಲಾಟೆ ಎಬ್ಬಿಸಿದ್ದು, ವಿಡಿಯೋ ವೈರಲ್ ಆಗಿದೆ. ಕಳಪೆ ವ್ಯವಸ್ಥೆಯ ಬಗ್ಗೆಯೂ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದರು.

ಮುಂಬೈ (ಮಾ.30): ಖ್ಯಾತ ರಾಪರ್ ಮತ್ತು ಗಾಯಕ ಯೋ ಯೋ ಹನಿ ಸಿಂಗ್ ಅವರ 'ಮೈ ಸ್ಟೋರಿ -- ಇಂಡಿಯಾ ಚಾಪ್ಟರ್' ಪ್ರವಾಸದ ಭಾಗವಾಗಿ ಶನಿವಾರ (ಮಾ. 28) ಮುಂಬೈನ ಬಾಂದ್ರಾದಲ್ಲಿರುವ ಎಂಎಂಆರ್‌ಡಿಎ (MMRDA) ಮೈದಾನದಲ್ಲಿ ನಡೆದ ಮ್ಯೂಸಿಕ್‌ ಕನ್ಸರ್ಟ್ ಭಾರೀ ಸುದ್ದಿಯಲ್ಲಿದೆ. ವೇದಿಕೆಯ ಮೇಲೆ ಹನಿ ಸಿಂಗ್ ತಮ್ಮ ಹಿಟ್ ಹಾಡುಗಳ ಮೂಲಕ ಅಭಿಮಾನಿಗಳನ್ನು ಕುಣಿಸಿದರೆ, ವೇದಿಕೆಯ ಹೊರಗೆ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.

ಸಂಗೀತ ಕಚೇರಿ ನಡೆಯುತ್ತಿದ್ದ ವೇಳೆ ಹೊರಗೆ ಕಾಯುತ್ತಿದ್ದ ಮಹಿಳಾ ಅಭಿಮಾನಿಯೊಬ್ಬಳು ಒಳಗೆ ನುಗ್ಗಲು ಯತ್ನಿಸಿ ಗದ್ದಲ ಎಬ್ಬಿಸಿದ್ದಾರೆ. ಆಕೆ ಮುಚ್ಚಿದ್ದ ದೊಡ್ಡ ಗೇಟ್ ಅನ್ನು ಹತ್ತಿ ಒಳಗೆ ಜಿಗಿಯಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆಯಲು ಮುಂದಾದಾಗ, ಆಕೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದು ಅಸಭ್ಯ ಭಾಷೆಯಲ್ಲಿ ಕೂಗಾಡಿದ್ದಾರೆ. ಸ್ಥಳದಲ್ಲಿದ್ದ ಇತರರು ಈ ದೃಶ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇಂಟರ್ನೆಟ್‌ನಲ್ಲಿ ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ವೈರಲ್ ಆಯ್ತು ಗಲಾಟೆಯ ವಿಡಿಯೋ!

ಕೇವಲ ಈ ಗಲಾಟೆ ಮಾತ್ರವಲ್ಲದೆ, ಕಾರ್ಯಕ್ರಮದ ಸಂಘಟಕರ ವಿರುದ್ಧವೂ ಅಭಿಮಾನಿಗಳು ಕಿಡಿಕಾರಿದ್ದಾರೆ. ಮೈದಾನಕ್ಕೆ ಪ್ರವೇಶ ನೀಡುವಲ್ಲಿ ಸರಿಯಾದ ನಿರ್ವಹಣೆ ಇರಲಿಲ್ಲ, ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲು ನಿಲ್ಲಬೇಕಾಯಿತು ಎಂದು ಹಲವರು ದೂರಿದ್ದಾರೆ. ಇನ್ನು ಕೆಲವರು, ಪ್ಲಾಟಿನಂ ಟಿಕೆಟ್ ಇಲ್ಲದವರನ್ನೂ ಯಾವುದೇ ರಿಸ್ಟ್‌ಬ್ಯಾಂಡ್ ಪರಿಶೀಲಿಸದೆ ಒಳಗೆ ಬಿಡಲಾಗುತ್ತಿತ್ತು, ಇದರಿಂದ ಭದ್ರತೆಯ ಲೋಪವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರೋಲ್ಸ್ ರಾಯ್ಸ್ ಕಾರಿನಲ್ಲಿ ಭರ್ಜರಿ ಎಂಟ್ರಿ!

ಇಷ್ಟೆಲ್ಲಾ ಗೊಂದಲಗಳ ನಡುವೆಯೂ ಹನಿ ಸಿಂಗ್ ಅವರ ಎಂಟ್ರಿ ಮಾತ್ರ ಭರ್ಜರಿಯಾಗಿತ್ತು. ಕಾರ್ಯಕ್ರಮದ ಅಂತಿಮ ಹಂತದಲ್ಲಿ 'ಮಿಲಿಯನೇರ್' ಹಾಡನ್ನು ಹಾಡುತ್ತಾ ಹನಿ ಸಿಂಗ್ ಸುಮಾರು 9 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಸೀರಿಸ್ II ಕಾರಿನಲ್ಲಿ ವೇದಿಕೆಯ ಮೇಲೆ ಬಂದರು. ಇದು ಪ್ರೇಕ್ಷಕರನ್ನು ರಂಜಿಸಿತು. ಸುಮಾರು ಎರಡು ಗಂಟೆಗಳ ಕಾಲ 'ಡೋಪ್ ಶೋಪ್', 'ಬ್ಲೂ ಐಸ್', 'ಬ್ರೌನ್ ರಂಗ್', 'ದೇಸಿ ಕಲಾಕಾರ್' ಮತ್ತು 'ಲುಂಗಿ ಡ್ಯಾನ್ಸ್' ನಂತಹ ಸೂಪರ್ ಹಿಟ್ ಹಾಡುಗಳ ಮೂಲಕ ಅವರು ಅಭಿಮಾನಿಗಳನ್ನು ರಂಜಿಸಿದರು.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Priyanka Chopra: ಅಮೃತಸರದಲ್ಲಿ ಪಂಜಾಬಿ ಥಾಲಿ ಸವಿದ 'ದೇಸಿ ಗರ್ಲ್' ಪ್ರಿಯಾಂಕಾ: ಫೋಟೋ ವೈರಲ್!
ಕಥೆಯನ್ನು 6 ತಿಂಗಳು ಕಾಯಿಸಿದ ಡಾಲಿ.. ಕೊನೆಗೂ, ಗೆಳೆಯನ ಕಥೆ-ನಿರ್ದೇಶನಕ್ಕೆ ನಿರ್ಮಾಪಕನಾಗಿ ಧನಂಜಯ್ 'ಅಸ್ತು'..!