'ಧುರಂಧರ್ 2' ಹಿಟ್ ಆಗಿದ್ದಕ್ಕೆ ನಟ ರಣವೀರ್‌ ಸಿಂಗ್‌ಗೆ ಅಷ್ಟೊಂದು ದುಬಾರಿ ಕಾರು ಗಿಫ್ಟ್‌ ಕೊಟ್ರಾ ಆದಿತ್ಯ ಧರ್..?

Published : Mar 30, 2026, 04:54 PM IST
Ranveer Singh Aditya Dhar

ಸಾರಾಂಶ

ಸದ್ಯ 'ಧುರಂಧರ್: ದಿ ರಿವೆಂಜ್' ಭಾರತದಲ್ಲಿ 1,000 ಕೋಟಿ ರೂ. ಹಾಗೂ ವಿಶ್ವದಾದ್ಯಂತ 1,350 ಕೋಟಿ ರೂ.ಗಳ ಗಡಿ ದಾಟಿ ಮುನ್ನುಗ್ಗುತ್ತಿದೆ. ರಣವೀರ್ ಸಿಂಗ್ ಅವರ ಅಬ್ಬರ ನೋಡಿದರೆ, ಈ ಸಿನಿಮಾ ಇನ್ನಷ್ಟು ಹೊಸ ದಾಖಲೆಗಳನ್ನು ಬರೆಯುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು.

ಧುರಂಧರ್ ಸೂಪರ್ ಹಿಟ್, ರಣವೀರ್ ಸಿಂಗ್‌ಗೆ ದುಬಾರಿ 'ಹಮ್ಮರ್ ಇವಿ' ಕಾರು?

ಬಾಲಿವುಡ್‌ನ 'ಪವರ್ ಹೌಸ್' ರಣವೀರ್ ಸಿಂಗ್ (Ranveer Singh) ನಟನೆಯ 'ಧುರಂಧರ್: ದಿ ರಿವೆಂಜ್' ಚಿತ್ರದ ಸಕ್ಸಸ್ ಅಲೆ ಇಡೀ ದೇಶವನ್ನೇ ಆವರಿಸಿದೆ. ಮಾರ್ಚ್ 19ರಂದು ತೆರೆಕಂಡ ಈ ಸಿನಿಮಾ ಕೇವಲ ಹತ್ತು ದಿನಗಳಲ್ಲಿ ಸಾವಿರಾರು ಕೋಟಿ ಬಾಚುವ ಮೂಲಕ ಬಾಲಿವುಡ್‌ನ ಹೊಸ ಸುಲ್ತಾನ ಯಾರು ಎಂಬುದನ್ನು ಸಾಬೀತುಪಡಿಸಿದೆ. ಈ ಭರ್ಜರಿ ಯಶಸ್ಸಿನ ನಡುವೆಯೇ, ರಣವೀರ್ ಸಿಂಗ್ ಅವರಿಗೆ ಸಂಬಂಧಿಸಿದ ಒಂದು ರೋಚಕ ಸುದ್ದಿ ಮತ್ತು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

5 ಕೋಟಿಯ ಐಷಾರಾಮಿ ಕಾರು ಗಿಫ್ಟ್?

ಸದ್ಯ ಗಾಂಧಿನಗರದಿಂದ ಹಿಡಿದು ಬಾಲಿವುಡ್ ಗಲ್ಲಿಗಳವರೆಗೆ ಹರಿದಾಡುತ್ತಿರುವ ಬಿಸಿಬಿಸಿ ಸುದ್ದಿ ಎಂದರೆ, 'ಧುರಂಧರ್ 2' ಚಿತ್ರದ (Dhurandhar 2) ಮೆಗಾ ಸಕ್ಸಸ್‌ನಿಂದ ಖುಷಿಯಾದ ನಿರ್ದೇಶಕ ಆದಿತ್ಯ ಧರ್ ಮತ್ತು ಅವರ ಪತ್ನಿ ಯಾಮಿ ಗೌತಮ್ ಅವರು ರಣವೀರ್ ಸಿಂಗ್‌ಗೆ ಬರೋಬ್ಬರಿ 5 ಕೋಟಿ ರೂಪಾಯಿ ಬೆಲೆಬಾಳುವ 'GMC ಹಮ್ಮರ್ ಇವಿ' (GMC Hummer EV) ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದು! ರಣವೀರ್ ಸಿಂಗ್ ಇತ್ತೀಚೆಗೆ ಇದೇ ಬೃಹತ್ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ, ಎಲ್ಲರ ಕಣ್ಣು ಆ ಕಾರಿನ ಮೇಲೆಯೇ ಇತ್ತು. ತಕ್ಷಣವೇ ನೆಟ್ಟಿಗರು "ಇದು ಸಿನಿಮಾದ ಗೆಲುವಿಗೆ ಸಿಕ್ಕ ಉಡುಗೊರೆ" ಎಂದು ಪೋಸ್ಟ್ ಮಾಡಲು ಶುರುಮಾಡಿದರು.

ವದಂತಿಯ ಹಿಂದಿರುವ ಅಸಲಿ ಸತ್ಯವೇನು?

ಆದರೆ, ಕಣ್ಣಿಗೆ ಕಂಡದ್ದೆಲ್ಲಾ ಸತ್ಯವಲ್ಲ ಎಂಬಂತೆ ಈ ಸುದ್ದಿಯ ಹಿಂದೆ ಬೇರೆಯದೇ ಕಥೆಯಿದೆ. ಹೌದು, ಆದಿತ್ಯ ಧರ್ ಅವರು ರಣವೀರ್‌ಗೆ ಕಾರು ನೀಡಿದ್ದಾರೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಚಿತ್ರತಂಡಕ್ಕೆ ಹತ್ತಿರವಿರುವ ಮೂಲಗಳು ತಿಳಿಸಿವೆ. ವಾಸ್ತವವಾಗಿ, ರಣವೀರ್ ಸಿಂಗ್ ಈ ಐಷಾರಾಮಿ ಮತ್ತು ಶಕ್ತಿಶಾಲಿ ಹಮ್ಮರ್ ಕಾರನ್ನು ಕಳೆದ ವರ್ಷವೇ ಖರೀದಿಸಿದ್ದರು. ಅವರು ಈ ಹಿಂದೆಯೂ ಹಲವು ಬಾರಿ ಇದೇ ಕಾರಿನಲ್ಲಿ ಓಡಾಡುತ್ತಿರುವುದು ಕ್ಯಾಮೆರಾ ಕಣ್ಣಿಗೆ ಬಿದ್ದಿತ್ತು. ಹಾಗಾಗಿ, ಇದು 'ಧುರಂಧರ್' ಗೆಲುವಿಗೆ ಸಿಕ್ಕ ಉಡುಗೊರೆಯಲ್ಲ, ಬದಲಾಗಿ ರಣವೀರ್ ಅವರ ವೈಯಕ್ತಿಕ ಗ್ಯಾರೇಜ್‌ನಲ್ಲಿರುವ ಕಿಂಗ್ ಸೈಜ್ ಕಾರು ಅಷ್ಟೇ! ಸೋಶಿಯಲ್ ಮೀಡಿಯಾದಲ್ಲಿ ಎಂಗೇಜ್‌ಮೆಂಟ್ ಹೆಚ್ಚಿಸಿಕೊಳ್ಳಲು ಕೆಲವರು ಈ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎನ್ನಲಾಗುತ್ತಿದೆ.

ಅಭಿಮಾನಿಗಳ ಮನಗೆದ್ದ 'ರೌಡಿ' ರಣವೀರ್:

ಕಾರಿನ ಸುದ್ದಿ ಪಕ್ಕಕ್ಕಿಟ್ಟರೆ, ವಿಮಾನ ನಿಲ್ದಾಣದಲ್ಲಿ ರಣವೀರ್ ಸಿಂಗ್ ನಡೆದುಕೊಂಡ ರೀತಿ ಮಾತ್ರ ನಿಜಕ್ಕೂ ಎಲ್ಲರ ಹೃದಯ ಗೆದ್ದಿದೆ. ತಮ್ಮ ಐಷಾರಾಮಿ ಹಮ್ಮರ್ ಕಾರಿನಿಂದ ಇಳಿದ ರಣವೀರ್, ಅಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಕಂಡು ಮುಗುಳ್ನಕ್ಕಿದ್ದಾರೆ. ವಿಶೇಷವೆಂದರೆ, ಅಭಿಮಾನಿಯೊಬ್ಬರು ರಣವೀರ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ವಿಮಾನ ನಿಲ್ದಾಣಕ್ಕೇ ಕೇಕ್ ತಂದಿದ್ದರು. ಇದನ್ನು ಗಮನಿಸಿದ ರಣವೀರ್, ಯಾವುದೇ ಹಮ್ಮಿಲ್ಲದೆ ಅಭಿಮಾನಿಯ ಬಳಿ ತೆರಳಿ ಕೇಕ್ ಕತ್ತರಿಸಿದ್ದಲ್ಲದೆ, ಅವರೊಂದಿಗೆ ಹಾಡು ಹಾಡಿ ಸಂಭ್ರಮಿಸಿದ್ದಾರೆ.

ಸದ್ಯ 'ಧುರಂಧರ್: ದಿ ರಿವೆಂಜ್' ಭಾರತದಲ್ಲಿ 1,000 ಕೋಟಿ ರೂ. ಹಾಗೂ ವಿಶ್ವದಾದ್ಯಂತ 1,350 ಕೋಟಿ ರೂ.ಗಳ ಗಡಿ ದಾಟಿ ಮುನ್ನುಗ್ಗುತ್ತಿದೆ. ರಣವೀರ್ ಸಿಂಗ್ ಅವರ ಅಬ್ಬರ ನೋಡಿದರೆ, ಈ ಸಿನಿಮಾ ಇನ್ನಷ್ಟು ಹೊಸ ದಾಖಲೆಗಳನ್ನು ಬರೆಯುವುದು ಗ್ಯಾರಂಟಿ ಎನ್ನುತ್ತಿದ್ದಾರೆ ಸಿನಿಮಾ ಪಂಡಿತರು. ಒಟ್ಟಾರೆಯಾಗಿ, ರಣವೀರ್ ಅವರ ಸಿನಿಮಾದ ಸಕ್ಸಸ್ ಮತ್ತು ಅವರ ಸರಳತೆ ಎರಡೂ ಈಗ ಟ್ರೆಂಡಿಂಗ್ ವಿಷಯಗಳಾಗಿವೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮರ್ಸಿಡಿಸ್ ಬೆಂಜ್ ವಿ ಕ್ಲಾಸ್ ಕಾರು ಖರೀದಿಸಿದ ಶಾರುಖ್ ಖಾನ್, ಇದರ ಬೆಲೆ ಎಷ್ಟು?
Sonam Kapoor: ಮತ್ತೊಂದು ಗಂಡು ಮಗು ಸ್ವಾಗತಿಸಿದ ಸೋನಂ ಕಪೂರ್-ಆನಂದ್ ಅಹುಜಾ ದಂಪತಿ