ತೂಕ ಇಳಿಸೋಕೆ ಅನುಷ್ಕಾ ಶೆಟ್ಟಿ ಮಾಡ್ತಾ ಇರೋ ಕಸರತ್ತೇನು?

By Web Desk  |  First Published Oct 1, 2018, 6:02 PM IST

ಟಾಲಿವುಡ್ ಚೆಲುವೆ ಅನುಷ್ಕಾ ಶೆಟ್ಟಿ ತೂಕ ಇಳಿಸಲು ಮಾಡುತ್ತಿರುವ ಕಸರತ್ತೇನು ? ಜೀರೋ ಸೈಜ್‌ಗಾಗಿ ಮಾಡ್ತಾ ಇರೋ ವ್ಯಾಯಾಮಗಳೇನು ಗೊತ್ತಾ? 


ಬೆಂಗಳೂರು (ಅ. 01): ಟಾಲಿವುಡ್ ಚೆಲುವೆ ಅನುಷ್ಕಾ ಶೆಟ್ಟಿ ತೆರೆ ಮೇಲೆ ಬಂದರಂದ್ರೆ ಸಾಕು ಸಿನಿ ರಸಿಕರಿಗೆ ಎದೆಗೆ ಕಚಗುಳಿ ಇಟ್ಟಂಗಾಗುವುದು ಸುಳ್ಳಲ್ಲ. ಇತ್ತೀಚಿಗೆ ಯಾವುದೇ ಸಿನಿಮಾದಲ್ಲೂ ಕಾಣಿಸುತ್ತಿಲ್ಲ. ಅರೇ! ಎಲ್ಲೋದ್ರು ಅನುಷ್ಕಾ ಶೆಟ್ಟಿ ಅಂತಿದೀರಾ? ಎಲ್ಲೂ ಹೋಗಿಲ್ಲ. ತೂಕ ಕಳೆದುಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಾರೆ. 

ಧರ್ಮದುರ್ಗದ ರಾಣಿ ಅನುಷ್ಕಾ ಕಥೆ

ಸೈಜ್ ಜೀರೋ ಚಿತ್ರಕ್ಕಾಗಿ ಇರುವುದಕ್ಕಿಂತ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಅದನ್ನು ಇಳಿಸಿಕೊಂಡು ಸ್ಲಿಮ್ ಆಗಲು ತಯಾರಿ ನಡೆಸುತ್ತಿದ್ದಾರೆ. ಇದಕ್ಕೆ ಡಿಟಾಕ್ಸಿನೇಶನ್ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಕೆಲ ವಾರಗಳ ಕಾಲ ಅಲ್ಲಿ ಇದ್ದು ಚಿಕಿತ್ಸೆ ಪಡೆಯಲಿದ್ದಾರೆ. ತೂಕ ಇಳಿಕೆ ನಂತರ ಮತ್ತೆ ಸಿನಿಮಾಗಳಿಗೆ ಹಿಂತಿರುಗಲಿದ್ದಾರೆ.  

ಅನುಷ್ಕಾ-ಪ್ರಭಾಸ್ ಮದ್ವೆ ಬಗ್ಗೆ ಅನುಷ್ಕಾ ಅಮ್ಮ ಏನಂತಾರೆ?

Tap to resize

Latest Videos

click me!