
ಯಾಕೆ ಗೊತ್ತಾ? ಮೊನ್ನೆಯಷ್ಟೇ ರಣಬೀರ್ ಬರ್ತ್‌ಡೇ ಆಗಿದೆ. ಬಂಧು ಬಳಗವೆಲ್ಲಾ ಬಂದು ಹರಸಿದ್ದಾರೆ. ತಮಗೆ ಇಷ್ಟವಾದ ಗ್‌ಟಿ ಕೂಡಾ ಕೊಟ್ಟಿದ್ದಾರೆ. ಆದರೆ ಅಲಿಯಾ ಭಟ್ ಕೊಟ್ಟಿರುವ ಗ್‌ಟಿ ಏನೆಂದರೆ ಪೈನಾಪಲ್ ಗ್‌ಟಿ.
ರಣಬೀರ್‌ಗೆ ಪೈನಾಪಲ್ ಎಂದರೆ ಇಷ್ಟ ಎಂದು ತಿಳಿದಿರುವ ಅಲಿಯಾ ತಾನೇ ಖುದ್ದಾಗಿ ಅಡುಗೆ ಮನೆಯಲ್ಲಿ ಪೈನಾಪಲ್ ಕೇಕ್ ತಯಾರಿಸಿ ಅದನ್ನು ರಣಬೀರ್ ಕೈಯಿಂದ ಕಟ್ ಮಾಡಿಸಿ ಬರ್ತ್‌ಡೇ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾಳೆ. ಅಲ್ಲದೇ ಇನ್‌ಸ್ಟಾಗ್ರಾಂನಲ್ಲಿ ಹ್ಯಾಪಿ ಬರ್ತ್‌ಡೇ ಸನ್‌ಶೈನ್ ಎಂದು ಹೇಳಿ ಹರಸಿದ್ದಾಳೆ. ಇದರಿಂದ ಫುಲ್ ಖುಷ್ ಆಗಿರುವ ರಣಬೀರ್ ತನ್ನ ಗೆಳತಿ ಬೇರೆ ಯಾರೂ ಕೊಡದಂತಹ ಗ್‌ಟಿ ಕೊಟ್ಟು ತನ್ನ 36ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸಿದ್ದಕ್ಕೆ ಮನಸಾರೆ ಮೆಚ್ಚುಗೆ ಸೂಚಿಸಿದ್ದಾರೆ.
ಈ ಘಟನೆಯಿಂದ ತಿಳಿದು ಬಂದ ನೀತಿಯೇನೆಂದರ ಅಲಿಯಾ ಮತ್ತು ರಣಬೀರ್ ತುಂಬಾ ಹತ್ತಿರವಾಗಿದ್ದಾರೆ, ಇನ್ನೊಂದು ತಾರಾ ಜೋಡಿಯ ಮದುವೆಯನ್ನು ಜಗತ್ತು ಶೀಘ್ರವೇ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.