ಬ್ರೇಕ್ಅಪ್‌ಗೆ ಕಾರಣಗಳು ಏಳು, ರಶ್ಮಿಕಾಗೆ ಟ್ರೋಲಿಗರ ಗೋಳು!

By Web DeskFirst Published 10, Sep 2018, 9:13 PM IST
Highlights

ಒಂದು ಕಡೆ ರಕ್ಷಿತ್ ಶೆಟ್ಟಿ ಸೋಶಿಯಲ್ ಮೀಡಿಯಾದಿಂದ ಹೊರನಡೆದಿದ್ದಾರೆ. ಇನ್ನೊಂದು ಕಡೆ ರಶ್ಮಿಕಾ ಮಂದಣ್ಣ ಎಂಗೇಜ್ ಮೆಂಟ್ ಮುರಿಸುಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಮತ್ತೊಂದು ಕಡೆ ರಶ್ಮಿಕಾ ಕುಟುಂಬ ನಿಶ್ಚಿತಾರ್ಥ ಮುರಿದು ಬಿದ್ದಿದ್ದು ಹೌದು ಎನ್ನುತ್ತಿದೆ. ಒಟ್ಟಿನಲ್ಲಿ ಅಭಿಮಾನಿಗಳಿಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲ. ಈ ನಡುವೆ ರಶ್ಮಿಕಾ ಟ್ರೋಲಿಗರಿಗೂ ಆಹಾರವಾಗಿದ್ದಾರೆ.

ರಕ್ಷಿತ್​ ಶೆಟ್ಟಿ, ರಶ್ಮಿಕಾ ಮಂದಣ್ಣ ಬ್ರೇಕ್​ಅಪ್​  ಸುದ್ದಿ ಸದ್ಯದ ಸ್ಯಾಂಡಲ್ ವುಡ್ ಹಾಟ್ ಟಾಪಿಕ್. ಕಿರಿಕ್​ ಪಾರ್ಟಿ ನಂತರ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಕ್ಷಿತ್​, ರಶ್ಮಿಕಾ ಈಗ ಬೇರೆಬೇರೆಯಾಗಿರುವುದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾಗಿದೆ. ಯಾಕೆ ಹೀಗಾಯ್ತು... ಅಭಿಮಾನಿಗಳ ಪ್ರಶ್ನೆಗೆ  ಸದ್ಯಕ್ಕೆ ಇಲ್ಲ ಉತ್ತರ. ಆದರೆ ಒಂದಿಷ್ಟು ಘಟನೆಗಳನ್ನು ಮಾತ್ರ ಲೆಕ್ಕ ಹಾಕಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತ್​ ಅಭಿಮಾನಿಗಳು ರಶ್ಮಿಕಾ ಅವರನ್ನು, ರಶ್ಮಿಕಾ ಅಭಿಮಾನಿಗಳು ರಕ್ಷಿತ್​ ಅವರನ್ನು ಬೈಯುತ್ತಿದ್ದಾರೆ. ರಶ್ಮಿಕಾ ಅವರನ್ನು ದೂಷಿಸುತ್ತಿದ್ದಾರೆ. ಸಕ್ಸೆಸ್​ ಬಂದ ಮೇಲೆ ಹೀಗಾಗಿದೆ . ಬೇರೆ ಇಂಡಸ್ಟ್ರಿಯಲ್ಲಿ ಜಾಗ ಸಿಕ್ಕ ಮೇಲೆ ನಮ್ಮತನ ಎಲ್ಲಿ ಉಳಿಯುತ್ತದೆ? ಎಂಬೆಲ್ಲ ಪ್ರಶ್ನೆಗಳು ಮೂಡಿವೆ.

ರಶ್ಮಿಕಾ - ರಕ್ಷಿತ್ ಬ್ರೇಕ್ ಅಪ್: ಹೌದು ಎಂದ ಕುಟುಂಬ!

ನಿಶ್ಚಿತಾರ್ಥ ಬ್ರೇಕ್ ಆಗಲು ಇವೇ ಕಾರಣಗಳೇ?

1.  ತೆಲುಗಿನ ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಬೋಲ್ಡ್ ಆಗಿ ನಟಿಸಿದ್ದರು. ಕಿಸ್ಸಿಂಗ್ ಸೀನ್ ಕಂಡು ಕಸಿವಿಸಿಗೊಂಡಿದ್ದ ರಕ್ಷಿತ್ ಅದರ ಪ್ರೀಮಿಯರ್​ ಶೋದಿಂದ ಎದ್ದು ಹೊರನಡೆದಿದ್ದರಂತೆ. ಶೋನಲ್ಲಿ ರಶ್ಮಿಕಾ ಅಭಿನಯಕ್ಕೆ ಎಲ್ಲರೂ ಚಪ್ಪಾಳೆ ಹೊಡೆಯುತ್ತಿದ್ದಾಗ ರಕ್ಷಿತ್ ಎದ್ದುಹೋಗಿದ್ದಲ್ಲದೆ ನಟ ವಿಜಯ್​ ದೇವರಕೊಂಡ ಜತೆಗಿನ ಕೆಲ ದೃಶ್ಯಗಳ ಬಗ್ಗೆ ರಕ್ಷಿತ್ ಗೆ ಅಸಮಾಧಾನ ಉಂಟಾಗಿತ್ತೆ?

2. ಅಂಜನಿಪುತ್ರ ಚಿತ್ರದಲ್ಲಿ ಹೀರೋ  ಪುನೀತ್ ರಾಜ್‌ ಕುಮಾರ್ ಜತೆ ಬೈಕ್​ ಸೀನ್​ನಲ್ಲಿ ನಟಿಸಿದ್ದ ರಶ್ಮಿಕಾ ಅಪ್ಪುವನ್ನು ಬಿಗಿಯಾಗಿ ಅಪ್ಪಿಕೊಂಡಿದ್ದು ರಕ್ಷಿತ್ ಕೆಂಗಣ್ಣಿಗೆ ಗುರಿಯಾಯಿತೆ?

3. ಚಮಕ್​ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜತೆ ಕಾಣಿಸಿಕೊಂಡ ರೀತಿ, ಮದ್ಯ ಕುಡಿದ ರೀತಿಯಲ್ಲಿ ಮಾಡಿದ ಓವರ್ ಆಕ್ಟಿಂಗ್ ರಕ್ಷಿತ್ ಮನಸ್ಸಿನ ಮೇಲೆ ಘಾಸಿ ಮಾಡಿತ್ತೆ?

4. ಇವೆಲ್ಲದರ ಪರಿಣಾಮವಾಗಿ ರಕ್ಷಿತ್​  ಶೆಟ್ಟಿ ರಶ್ಮಿಕಾ ಕಾಲ್​ ಪದೇಪದೆ ಕಟ್ ಮಾಡುತ್ತಿದ್ದರೆ? ಇದೇ ಈ ಬಿಕ್ಕಟ್ಟಿಗೆ ಕಾರಣವಾಯಿತೆ?

ರಶ್ಮಿಕಾ-ರಕ್ಷಿತ್ ಎಂಗೇಜ್‌ ಮೆಂಟ್ ಹೇಗಿತ್ತು

5. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಗಾಸಿಪ್ ಗಳು ಜೋರಾಗಿ ಸಿನಿಮಾ ರಂಗದವರಿಂಲೇ ಪದೆ ಪದೇ ಇಬ್ಬರೂ ಸೆಲೆಬ್ರಿಟಿಗಳಿಗೆ ಕರೆ ಬರಲು ಆರಂಭಿಸಿತೆ? ಉತ್ತರ ಕೊಡಲು ಸಾಧ್ಯವಾಗದೇ ರಕ್ಷಿತ್ ಸೋಶಿಯಲ್ ಮೀಡಿಯಾದಿಂದಲೇ ಹೊರನಡೆದರೆ?

6. ಎರಡು ದಿನ ಅದ್ದೂರಿಯಾಗಿ ನಡೆದ ಕರ್ನಾಟಕ ಚಲನಚಿತ್ರ ಕಪ್ ನಲ್ಲಿಯೂ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳಲಿಲ್ಲ? ಪ್ರಶ್ನೆ ಮಾಡುತ್ತಾರೆ ಎಂಬ ಭಯ ಅವರನ್ನು ಕಾಡಿತ್ತೆ?

7. ಗೀತಾ ಗೋವಿಂದ ಯಶಸ್ಸಿನ ಅಮಲಿನಲ್ಲಿ ರಕ್ಷಿತ್ ಇಮೇಜ್ ಗಿಂತ ರಶ್ಮಿಕಾ ಇಮೇಜ್ ದೊಡ್ಡದಾಗಿ ಬೆಳೆಯಿತೆ?

Last Updated 19, Sep 2018, 9:22 AM IST