
ಇಲ್ಲಿ ಅವರದ್ದು ಮೂಕಿ ಪಾತ್ರ. ಹೆಚ್ಚು ಕಡಿಮೆ ಒಂದೂವರೆ ವರ್ಷಗಳ ಗ್ಯಾಪ್ ನಂತರ ರಶ್ಮಿ, ಮತ್ತೆ ನಾಯಕಿ ಆಗಿ ಅಭಿನಯಿಸಿರುವ ಚಿತ್ರವಿದು. ಗೋವಿ ಆಲೂರು ನಿರ್ಮಾಣದಲ್ಲಿ ವಿನೋದ್ ಕುಮಾರ್ ನಿರ್ದೇಶಿಸಿದ ಈ ಚಿತ್ರ ಸೆಪ್ಟೆಂಬರ್ 14ಕ್ಕೆ ಬಿಡುಗಡೆ. ಈ ಚಿತ್ರ, ಬದುಕಿನ ಕುರಿತು ರಶ್ಮಿ ಮಾತನಾಡಿದ್ದು ಇಲ್ಲಿದೆ.
'ಪ್ರತಿ ಸಿನಿಮಾದ ಪ್ರತಿ ಪಾತ್ರವೂ ನನಗೆ ಮುಖ್ಯ. ಹಾಗಂದುಕೊಂಡೇ ಇಲ್ಲಿ ತನಕ ಅಭಿನಯಿಸುತ್ತಾ ಬಂದಿದ್ದೇನೆ. ಹಲವು ಪಾತ್ರಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಹಾಗೆಯೇ ಕೆಲವು ಪಾತ್ರಗಳಿಗೆ ಮಿಶ್ರ ಪ್ರತಿಕ್ರಿಯೆಯೂ ಲಭ್ಯವಾಗಿದೆ. ಅಷ್ಟಾಗಿಯೂ ಈ ಏರಿಳಿತಗಳು ಯಾಕಾಗಿ ಬರುತ್ತವೋ ನನಗೆ ಗೊತ್ತಿಲ್ಲ. ಎಲ್ಲವನ್ನು ಸಮವಾಗಿ ಸ್ವೀಕರಿಸುತ್ತಾ ಬರುತ್ತಿದ್ದೇನೆ. ಎಲ್ಲದಕ್ಕೂ ಪ್ರೇಕ್ಷಕರ ಬೆಂಬಲ, ದೇವರ ಆಶೀರ್ವಾದವೇ ಮುಖ್ಯ' - ದುನಿಯಾ ರಶ್ಮಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.