
ಬಾಲಿವುಡ್ ನೆಪೊಟಿಸಂ ಬಗ್ಗೆ ತೀವ್ರ ಚರ್ಚೆಗಳಾಗುತ್ತಿರುವ ಬೆನ್ನಲ್ಲೇ ಖ್ಯಾತ ಗಾಯಕ ಸೋನು ನಿಗಮ್ ಬಾಲಿವುಡ್ ಕ್ವೀನ್ ಬೆಂಬಲಕ್ಕೆ ನಿಂತಿದ್ದಾರೆ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಸದ್ದು ಮಾಡ್ತಿರುವ ಬಾಲಿವುಡ್ ನೆಪೊಟಿಸಂ ಚರ್ಚೆಯಾಗುವ ಸಂದರ್ಭ ಹಳೇ ವಿಚಾರವಾಗಿ ನಟಿಯನ್ನು ಬೆಂಬಲಿಸಿದ್ದಾರೆ ಸೋನು.
ನಟಿ ಕಂಗನಾ ರಣಾವತ್ ಅವರ ಟ್ವೀಟ್‌ಗಳು ಹಾಗೂ ಆಡಿಯೂದಲ್ಲಿಇರುವ ಆರೋಪಗಳು ನಿಜವಿರಬಹುದು ಎಂದು ಅವರು ಹೇಳಿದ್ದಾರೆ. ಅವರ ಭಟ್ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಕ್ಕೆ ಮಹೇಶ್ ಭಟ್ ನನ್ನ ಮೇಲೆ ಚಪ್ಪಲಿ ಎಸೆದಿದ್ದರು ಎಂದು ನಟಿ ಕಂಗನಾ ಇತ್ತೀಚಿನ ಇಂಟರ್‌ವ್ಯೂನಲ್ಲಿ ಹೇಳಿದ್ದರು. ಇದು ನಿಜವಿರಬಹುದೆಂದು ಸೋನು ನಿಗಮ್ ಹೇಳಿದ್ದು, ಬಾಲಿವುಡ್ ಕ್ವೀನ್ ಬೆಂಬಲಕ್ಕೆ ನಿಂತಿದ್ದಾರೆ.
ಅವಕಾಶಕ್ಕಾಗಿ ಅಲೆದಿದ್ರು ಸೋನು ಸೂದ್: ರಿಯಲ್ ಹಿರೋ ಬಾಲಿವುಡ್ ನೆಪೊಟಿಸಂ ಬಗ್ಗೆ ಹೇಳಿದ್ದಿಷ್ಟು
ಕಂಗನಾ ರಣಾವತ್ ಬಗ್ಗೆ ನನಗೆ ಬಹಳ ಗೌರವ ಇದೆ. ಅವರು ಏನು ಮಾಡಿದ್ದಾರೋ ಅದನ್ನು ಮಾಡಲು ಅತ್ಯಂತ ಸ್ಪಷ್ಟವಾದ, ನಿಖರವಾದ ನಿಲುವು ಬೇಕು ಎಂದಿದ್ದಾರೆ. ಆಕೆ ಆಕೆಯತ್ತ ಚಪ್ಪಲಿ ಎಸೆದಿದ್ದಾರೆ ಎಂದಿದ್ದರೆ, ಹಾಗೆ ಆಗಿರಬೇಕು ಎಂದಿದ್ದಾರೆ.
ಮ್ಯೂಸಿಕ್ ಮಾಫಿಯಾ ಬಗ್ಗೆ ಸೋನು ನಿಗಮ್ ಮಾತು: ಸಂಗೀತ ಕ್ಷೇತ್ರದಲ್ಲೂ ಆತ್ಮಹತ್ಯೆ ಎಚ್ಚರಿಕೆ
ಆಕೆಯನ್ನು ತಪ್ಪು ಎಂದು ಹೇಳುವವರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಕಳೆದ 25-30 ವರ್ಷಗಳಿಂದ ನಾನು ಅವರೊಂದಿಗೆ ಕೆಲಸ ಮಾಡಿದ್ದರೂ ನನಗೆ ಬಹುಶಃ ಅನುಭವ ಇಲ್ಲದಿರಬಹುದು. ಆದರೆ ಆಕೆ ಆ ರೀತಿ ಹೇಳುತ್ತಿದ್ದರೆ, ನಾನದನ್ನು ನಂಬುತ್ತೇನೆ. ಯಾಕೆಂದರೆ ಈ ರೀತಿ ಕಥೆ ಕಟ್ಟಲು ಜನರು ಹುಚ್ಚರಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.