
ಬೆಳ್ಳಿತೆರೆ ಮತ್ತು ಕಿರುತೆರೆ ಈ ಎರಡೂ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವ ಮೂಗುತ್ತಿ ಸುಂದರಿ ಅನುಪಮಾಗೌಡ ಮೊದಲ ಬಾರಿಗೆ ತಮ್ಮ ಕೂದಲನ್ನು ಹೇಗೆಲ್ಲಾ ಆರೈಕೆ ಮಾಡುತ್ತಾರೆ ಎಂದು ರಿವೀಲ್ ಮಾಡಿದ್ದಾರೆ.
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಈಕೆಯ ನ್ಯಾಚುರಲ್ ಹೇರ್ ಲುಕ್‌ಗೆ ಅನೇಕರು ಫಿದಾ ಆಗಿದ್ದರು. ವೈಯಕ್ತಿವಾಗಿ ಇನ್‌ಸ್ಟಾಗ್ರಾಂನಲ್ಲಿ ಮೆಸೇಜ್ ಮಾಡಿದ ಸಲಹೆ ಮತ್ತು ಟಿಪ್ಸ್ ಕೇಳುತ್ತಿದ್ದರು ಈ ಕಾರಣ ಈಗ ತಮ್ಮ IGTVನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.
ಹೇರ್ ಮಾಸ್ಕ್:
ಯಾವ ದುಬಾರಿ ಶ್ಯಾಂಪೂ ಬಳಸಿದರೆ ನಮ್ಮ ಕೂದಲಿನ ಅರೋಗ್ಯ ಕಾಪಡಿಕೊಳ್ಳಲು ಸಹಾಯ ಮಾಡುವುದು? ಎಣ್ಣೆ ಅಥವಾ ಹೇರ್ ಮಾಸ್ಕ್ ಅದರಲ್ಲೂ ಕೊಬ್ಬರಿ ಎಣ್ಣೆ ಕೂದಲನ್ನು ನೈಸರ್ಗಿಕವಾಗಿ ಸದೃಢ ಮಾಡುತ್ತದೆ, ಆದರೆ ವಾರಕ್ಕೆ ಒಂದು ಬಾರಿ ಅದರೂ ಹೇರ್ ಮಾಸ್ಕ್ ಧರಿಸಲೇಬೇಕು.
ನಟಿ ಅನುಪಮಾಗೌಡ ಮನೆಯಲ್ಲಿಯೇ ತಯಾರಿಸುವ ಹೇರ್ ಮಾಸ್ಕ್ ಬಗ್ಗೆ ರಿವೀಲ್ ಮಾಡಿದ್ದಾರೆ. ಹೇರ್ ಕೇರ್ ಬಗ್ಗೆ ಮಾಹಿತಿಯೊಂದಿಗೆ ಟಿಪ್ಸ್ ಕೊಡುವುದಾಗಿ ನಿಮ್ಮೆಲ್ಲರಿಗೂ ಮಾತು ಕೊಟ್ಟಿದ್ದೆ . ಅದರಂತೆ ಇಲ್ಲಿ ವಿಡಿಯೋ ಶೇರ್ ಮಾಡಿರುವೆ. ಅತಿ ಹೆಚ್ಚು ಮೆಚ್ಚುಗೆ ಪಡೆದುಕೊಂಡಿರುವ ಹೇರ್ ಕೇರ್ ಹಾಗೂ ಈ ಮಾಸ್ಕ್ ನನ್ನ ಕೂದಲು ಆರೋಗ್ಯಕ್ಕೆ ಸಹಾಯ ಮಾಡಿದೆ' ಎಂದು ಬರೆದುಕೊಂಡಿದ್ದಾರೆ.
ಮಾಸ್ಕ್ ತಯಾರಿಸುವುದು ಹೇಗೆ?
ಸ್ವಲ್ಪ ಮೆಂತ್ಯಾವನ್ನು ನೀರಿನಲ್ಲಿ ರಾತ್ರಿ ಇಡೀ ನೆನಸಿಡಬೇಕು.
ಮಿಕ್ಸಿಯಲ್ಲಿ ಅರ್ಧ ಈರುಳ್ಳಿ, ಸೋದಿಸಿದ ಮೆಂತ್ಯಾನ, ಒಂದು ಚಮಚ ಕೊಬ್ಬರಿ ಎಣ್ಣೆ, ಒಂದು ಚಮಚ ಮೊಸರು ಸೇರಿಸಿ ರುಬ್ಬಿಕೊಳ್ಳಬೇಕು. ತಲೆ ಬುಡಕ್ಕೆ ಮೊದಲು ಹಚ್ಚಿ ಆನಂತರ ಕೂದಲಿಗೆ ಹಚ್ಚಿ ಸುಮಾರು 1 ಗಂಟೆ ನಂತರ ತೊಳೆದುಕೊಳ್ಳಬೇಕು.
ಹೀಗೆ ತಿಂಗಳಿಗೆ ಎರಡು- ಮೂರು ಸಲ ಮಾಸ್ಕ್ ಧರಿಸಿದರೆ ಕೂದಲು ಆರೋಗ್ಯವಾಗಿದ್ದು ನೈಸರ್ಗಿಕ ವಸ್ತುಗಳಿಂದ ಉತ್ತಮವಾಗಿ ಕಾಪಾಡಿಕೊಳ್ಳ ಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.