
ವಿಚ್ಛೇದಿತ ರಾಜ್‌ಕುಂದ್ರಾನ ಮದ್ವೆಯಾದ ನಂತರ ಶಿಲ್ಪಾ ಶೆಟ್ಟಿ ಗೃಹಚಾರ ಸ್ವಲ್ಪವೂ ಸರಿ ಇದ್ದಂತೆ ಕಾಣುತ್ತಿಲ್ಲ. ಗಂಡ ರಾಜ್‌ಕುಂದ್ರಾ ಮಾಡಬಾರದನ್ನೆಲ್ಲಾ ಮಾಡಿ ಕೆಲಕಾಲ ಮುಖ ಮುಚ್ಚಿಕೊಂಡು ಓಡಾಡ್ತಿದ್ರೆ ಇತ್ತ ಶಿಲ್ಪಾಶೆಟ್ಟಿ ಮಾತ್ರ ಗಂಡ ಮಾಡಿದ ತಪ್ಪಿಗೆ ಜನರ ಟೀಕೆಗಳೆಲ್ಲವನ್ನು ಮೌನವಾಗಿಯೇ ಅನುಭವಿಸಿದರು. ಇಂತಹ ಶಿಲ್ಪಾ ಶೆಟ್ಟಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. 60 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಈಗ 9 ವರ್ಷಗಳ ಹಿಂದೆ ತಾವು ಮುಂಬೈನ ಪ್ರತಿಷ್ಠಿತ ಬಾಂದ್ರಾದಲ್ಲಿ ಸ್ಥಾಪಿಸಿದ್ದ ರೆಸ್ಟೋರೆಂಟ್‌ನ್ನು ಮುಚ್ಚುವಂತೆ ಆದೇಶವಾಗಿದ್ದು, ನಾಳೆ ಕೊನೆಯ ದಿನ ಬಾಸ್ಟಿಯನ್ ಬಾಂದ್ರಾ ಎಂಬ ಐಷಾರಾಮಿ ರೆಸ್ಟೋರೆಂಟ್ ಕೆಲಸ ಮಾಡಲಿದೆ.
ಐಕಾನಿಕ್ ಬಾಸ್ಟಿಯನ್ ಬಾಂದ್ರಾ ರೆಸ್ಟೋರೆಂಟ್‌ಗೆ ತೆರೆ:
ಈ ವಿಚಾರವನ್ನು ಶಿಲ್ಪಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮುಂಬೈನ ಅತ್ಯಂತ ಪ್ರಸಿದ್ಧ ಹೊಟೇಲ್ ಹಾಗೂ ನೈಟ್ ಲೈಫ್ ತಾಣಗಳಲ್ಲಿ ಒಂದೆಂದು ಬಹಳ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದ ಮುಂಬೈನ ಹಾಟ್‌ಸ್ಪಾಟ್ ಬಾಸ್ಟಿಯನ್ ಬಾಂದ್ರಾವನ್ನು ಮುಚ್ಚುವುದಾಗಿ ಅವರು ಘೋಷಿಸಿದ್ದಾರೆ. ಈ ಗುರುವಾರ ಮುಂಬೈನ ಅತ್ಯಂತ ಪ್ರಸಿದ್ಧ ತಾಣಗಳಲ್ಲಿ ಒಂದಾದ ಬಾಸ್ಟಿಯನ್ ಬಾಂದ್ರಾ ವಿದಾಯ ಹೇಳಲಾಗುತ್ತಿದ್ದು ಇದು ಒಂದು ಯುಗದ ಅಂತ್ಯವನ್ನು ಸೂಚಿಸುತ್ತದೆ. ಬಾಂದ್ರಾ ಸ್ಥಳ ಮುಚ್ಚಲ್ಪಟ್ಟಿದ್ದರೂ, ಟಾಪ್ ಔಟ್ಲೆಟ್ನಲ್ಲಿರುವ ಬಾಸ್ಟಿಯನ್ ತೆರೆದಿರುತ್ತದೆ ಮತ್ತು ಹೊಸ ಅನುಭವಗಳನ್ನು ನೀಡುತ್ತದೆ ಎಂದು ಶೆಟ್ಟಿ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ಭಾವುಕ ಪೋಸ್ಟ್:
ಇಲ್ಲಿ ನಡೆಯುವ ಜನಪ್ರಿಯ ಗುರುವಾರದ ಕಾರ್ಯಕ್ರಮವಾದ ಆರ್ಕೇನ್ ಅಫೇರ್ ಅನ್ನು ಸಹ ವರ್ಲಿಯಲ್ಲಿರುವ ಆಸ್ತಿಗೆ ಸ್ಥಳಾಂತರಿಸಲಾಗುವುದು. ಬಾಂದ್ರಾ ಸ್ಥಳವನ್ನು ಸ್ಮರಿಸಲು ಹಾಗೂ ಅದರ ಶಕ್ತಿಯ ಭಾಗವಾಗಿದ್ದ ಅದರ ಪೋಷಕರಿಗಾಗಿ(ಕೆಲಸಗಾರರು ಸಿಬ್ಬಂದಿ) ಬಹಳ ವಿಶೇಷ ಸಂಜೆಯನ್ನು ಯೋಜಿಸಲಾಗಿದೆ, ಇದು ನಾಸ್ಟಾಲ್ಜಿಯಾ, ಶಕ್ತಿ ಮತ್ತು ಮೋಹಕ ರಾತ್ರಿಯ ಭರವಸೆ ನೀಡುತ್ತದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ 60 ಕೋಟಿ ವಂಚನೆ ಆರೋಪ:
ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ಉದ್ಯಮಿ ದೀಪಕ್ ಕೊಠಾರಿ 60 ಕೋಟಿ ರೂ. ವಂಚನೆ ಆರೋಪ ಮಾಡಿರುವಾಗಲೇ ಈ ರೆಸ್ಟೋರೆಂಟ್ ಮುಚ್ಚುವ ಘೋಷಣೆ ಹೊರಬಿದ್ದಿದೆ . ಸುಮಾರು ಏಳೆಂಟು ವರ್ಷಗಳ ಹಿಂದೆ ಉದ್ಯಮದ ವಿಸ್ತರಣೆಗೆ ಇಟ್ಟಿದ್ದ ಹಣವನ್ನು ದಂಪತಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಶಿಲ್ಪಾ ಶೆಟ್ಟಿ ಹಾಗೂ ರಾಜ್‌ಕುಂದ್ರಾ ಅವರ ಪರ ವಕೀಲ ಪ್ರಶಾಂತ್ ಪಾಟೀಲ್, ಈ ಆರೋಪವನ್ನು ನಿರಾಕರಿಸಿದ್ದು, ಈ ಎಲ್ಲಾ ಆರೋಪಗಳು ಸುಳ್ಳು, ನಮಗೆ ಇಲ್ಲಿಯವರೆಗೆ ಎಫ್‌ಐಆರ್ ಪ್ರತಿ ಬಂದಿಲ್ಲ. ನಾವು ಅದನ್ನು ಸ್ವೀಕರಿಸಿದಾಗ, ನಿಖರವಾದ ಆರೋಪಗಳು ನಮಗೆ ತಿಳಿಯುತ್ತವೆ. ಆ ಆಧಾರದ ಮೇಲೆ, ನಾವು ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತೇವೆ.ಆದರೆ ಈ ವ್ಯವಹಾರವು ತುಂಬಾ ಹಳೆಯದು. ಯಾರಾದರೂ ತಪ್ಪಿತಸ್ಥರೆಂದು ಭಾವಿಸಿದರೆ, ಅವರು ದೂರು ನೀಡಲು 8 ರಿಂದ 10 ವರ್ಷ ಕಾಯುವುದಿಲ್ಲ. ಎಲ್ಲದಕ್ಕೂ ದಾಖಲೆ ಪುರಾವೆಗಳಿವೆ ಎಂದು ಹೇಳಿದ್ದಾರೆ.
ಶಿಲ್ಪಾ ಶೆಟ್ಟಿ 2019 ರಲ್ಲಿ ಆಲಿಯಾ ಹಾಸ್ಪಿಟಾಲಿಟಿ ಜೊತೆ ಪಾಲುದಾರಿಕೆ ಮಾಡಿಕೊಂಡು ಬಾಸ್ಟಿಯನ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ (BHPL)ಅನ್ನು ಸ್ಥಾಪಿಸಿದರು. ಈ ಆಲಿಯಾ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ ಅನ್ನು ರಂಜಿತ್ ಬಿಂದ್ರಾ, ಕಿನಲ್ ಜಾನಿ ಮತ್ತು ಟೀನಾ ರಂಜಿತ್ ಬಿಂದ್ರಾ 2010 ರಲ್ಲಿ ಪ್ರಾರಂಭಿಸಿದರು ಮತ್ತು ಬಾಸ್ಟಿಯನ್ ರೆಸ್ಟೋರೆಂಟ್ ಸರಪಳಿಯನ್ನು ಇವರು ಪ್ರಾರಂಭಿಸಿದರು. ಇದರ ಮೊದಲ ಶಾಖೆ, ಬಾಸ್ಟಿಯನ್ ಬಾಂದ್ರಾ, 2016 ರಲ್ಲಿ ಪ್ರಾರಂಭವಾಗಿತ್ತು ಶಿಲ್ಪಾ ಶೆಟ್ಟಿ ಅವರ ಸಹಯೋಗದ ನಂತರ, 2020 ರಲ್ಲಿ ವರ್ಲಿಯಲ್ಲಿಯೂ ಇದರ ಹೊಸ ಶಾಖೆಯನ್ನು ಆರಂಭಿಸಲಾಗಿತ್ತು. ನಂತರ ವರ್ಲಿಯಲ್ಲಿದ್ದ ರೆಸ್ಟೋರೆಂಟ್ ಸ್ಥಳವನ್ನು 2023 ರಲ್ಲಿ ಬಾಸ್ಟಿಯನ್ ಅಟ್ ದಿ ಟಾಪ್ ಹೆಸರಿನಲ್ಲಿ ಐಕಾನಿಕ್ ರೂಫ್‌ಟಾಪ್ ಸ್ಥಳಕ್ಕೆ ಸ್ಥಳಾಂತರಿಸಲಾಯಿತು. ಇದಾದ ನಂತರ 2024 ರಲ್ಲಿ ಬಾಸ್ಟಿಯನ್ ಗಾರ್ಡನ್ ಸಿಟಿ ಎಂಬ ಬೆಂಗಳೂರು ಶಾಖೆಯನ್ನು ಸ್ಥಾಪಿಸಲಾಯಿತು. ನಂತರ ಪುಣೆಯಲ್ಲಿಯೂ ಬಾಸ್ಟಿಯನ್ ಎಂಪೈರ್ ತೆರೆಯಲಾಯಿತು.
ಇದನ್ನೂ ಓದಿ: ತಿಂಗಳ ವೆಚ್ಚ 5,90,000 ರೂ. ಎಂದ ದಂಪತಿ: ಬೆಂಗಳೂರಿನಲ್ಲಿ ಜೀವನ ಇಷ್ಟೊಂದು ದುಬಾರಿನಾ?
ಇದನ್ನೂ ಓದಿ: ಶ್ವಾನದ ಆಧಾರ್‌ಕಾರ್ಡ್ ವೈರಲ್: ಮೂಲ ಹುಡುಕಿ ಹೊರಟ ಮಾಧ್ಯಮಕ್ಕೆ ಶಾಕ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.