
ಬೆಂಗಳೂರು (ಸೆ.3): ನಿರೂಪಕಿ ಅನುಶ್ರೀ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ 37ನೇ ವಯಸ್ಸಿನಲ್ಲಿ ಅವರು ಐಟಿ ಉದ್ಯೋಗಿ ರೋಶನ್ ರಾಮಮೂರ್ತಿ ಅವರನ್ನು ವಿವಾಹವಾದರು. ಆಗಸ್ಟ್ ತಿಂಗಳ ಕೊನೆಯಲ್ಲಿ ಕನಕಪುರದ ಖಾಸಗಿ ರೆಸಾರ್ಟ್‌ನಲ್ಲಿ ನಡೆದ ಎರಡು ದಿನಗಳ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗೂ ರೋಶನ್ ಅವರ ವಿವಾಹ ನೆರವೇರಿತು. ಚಿತ್ರರಂಗದ ಗಣ್ಯರು, ಅನುಶ್ರೀ ಅವರ ಆಪ್ತರು ಹಾಗೂ ಕುಟುಂಬದವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ. ಮದುವೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಶೀಘ್ರದಲ್ಲೇ ಕಿರುತೆರೆಗೆ ಮರಳುವುದಾಗಿ ಹೇಳಿದ್ದರು. ಇದರ ನಡುವೆ ಮದುವೆ ಕಾರ್ಯಕ್ರಮದ ಕೆಲವೊಂದು ವಿಡಿಯೋಗಳು ವೈರಲ್ ಆಗಿದೆ.
ಅನುಶ್ರೀ ಕೈಗೆ 8 ಚಿನ್ನದ ಬಳೆ ಹಾಕಿದ ರೋಶನ್
ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಅನುಶ್ರಿಗೆ ಅವರ ಪತಿ ರೋಶನ್ ರಾಮಮೂರ್ತಿ ಪ್ರೀತಿಯಿಂದ ಬಳೆ ಹಾಕಿರುವುದು ಕಂಡಿದೆ. ಮದುವೆ ಮನೆಯ ಊಟದ ಹಾಲ್‌ನಲ್ಲಿ ರೋಶನ್ ಊಟಕ್ಕೆ ಕುಳಿತಿದ್ದಾಗ ಅಲ್ಲಿಗೆ ಅನ್ನ ಬಡಿಸಲು ಬರುವ ಅನುಶ್ರಿ, ರೋಶನ್ ಎಲೆಗೆ ಅನ್ನ ಹಾಕಿ ಅದರ ಮೇಲೆ ಸೌಟ್ ಇಡುತ್ತಾರೆ. ಈ ವೇಳೆ ರೋಶನ್ ತನ್ನ ಪಕ್ಕದಿಂದ ತಾವು ತಂದಿದ್ದ ನಾಲ್ಕು ಚಿನ್ನದ ಬಳೆಗಳನ್ನು ಕೈಗೆ ಹಾಕಲು ಮುಂದಾಗುತ್ತಾರೆ.
ಮೊದಲು ನಾಲ್ಕು ಹಾಕಿ ಎಂದು ಅನುಶ್ರೀ ಅವರ ತಾಯಿ ಹೇಳುವುದು ದಾಖಲಾಗಿದೆ. ಅದರ ಬಳಿಕ ಮೊದಲಿಗೆ ಎರಡನ್ನೇ ಹಾಕ್ತೇನೆ ಎನ್ನುತ್ತಾರೆ. ಕೊನೆಗೆ ಇದನ್ನು ಎಲ್ಲಿಗೆ ಹಾಕೋದು ಎಂದು ರೋಶನ್ ರಾಮಮೂರ್ತಿ ತಮಾಷೆಯಾಗಿ ಪ್ರಶ್ನೆ ಮಾಡಿದಾಗ, ಅನುಶ್ರೀ ಅವರ ತಾಯಿ 'ಸೌಟಿಗೆ ಹಾಕು' ಎಂದು ತಮಾಷೆಯಾಗಿ ಹೇಳಿದಾಗ ಸುತ್ತಲಿನ ಜನ ನಗೆಗಡಲಲ್ಲಿ ತೇಲಿದೆ.
ಡಿಜಿಟಲ್ ಪವರ್ ಗುರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಈ ವಿಡಿಯೋಗೆ ಹಲವರು ಕಾಮೆಂಟ್ ಮಾಡಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬರು ನಿನಗೆ ತಕ್ಕ ಗಂಡ ಅಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವರು, 'ಜೀವನವನ್ನು ಮುನ್ನಡೆಸಬೇಕಾದವರು ಅವರು. ಅವರಿಬ್ಬರು ಇಷ್ಟಪಟ್ಟಿದ್ದಾರೆ' ಎಂದು ಒಬ್ಬರು ಉತ್ತರಿಸಿದ್ದಾರೆ. 'ಸರ್ ಏನು ಮಾಡಕ್ಕೆ ಆಗುತ್ತೆ ಬ್ರಹ್ಮಮಾಡಿರುವ ಬ್ರಹ್ಮಗಂಟು ಅಲ್ವಾ ಯಾರು ಯಾರಿಗೆ ಸಿಗಬೇಕು ಅಂತ ಆ ಬ್ರಹ್ಮ ಹುಟ್ಟುವಾಗಲೆ ನಮ್ಮ ಹಣೆಬರಹ ಬರೆದಿರುತಾನೆ ಅಲ್ವಾ ನಿಮಗೆ ನಿಮ್ಮ ಹೆಂಡತಿ ಹೇಗೆ ಸಿಕ್ಕಿದ್ದು ಹಾಗೆನೆ ಅವರಿಗೂ ಅಷ್ಟೇ ವಿಧಿ ಬರಹನ ಯಾರಿಂದಲೂ ತಪ್ಪಿಸೋಕೆ ಆಗಲ್ಲ ಸರ್' ಎಂದು ಮತ್ತೊಬ್ಬರು ಬರೆದಿದ್ದಾರೆ.
'ಹೊಸದರಲ್ಲಿ ಭಾರಿ ಪ್ರೀತಿ ಒಂದು ಐದು ಹತ್ತು ವರ್ಷ ದಾಂಪತ್ಯವಾಗಲಿ ಗೊತ್ತಾಗುತ್ತೆ ಇದೇ ಪ್ರೀತಿ ಸದಾ ನಿಮ್ಮಿಬ್ಬರ ಬದುಕಿನಲ್ಲಿ ಜೀವನದಲ್ಲಿ ಇರಲಿ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.