ಪ್ರೀಮಿಯರ್ ಶೋಗೆ ಸಖತ್ ರೆಸ್ಪಾನ್ಸ್, ನಿರಂಜನ್ ಶೆಟ್ಟಿ '31 ಡೇಸ್‌' ಬಿಡುಗಡೆಗೆ ಕ್ಷಣಗಣನೆ!

Published : Sep 03, 2025, 03:51 PM ISTUpdated : Sep 03, 2025, 04:11 PM IST
Niranjan Shetty V Manohar

ಸಾರಾಂಶ

ಮೊನ್ನೆ ಶಿವಮೊಗ್ಗಾದಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಅಲ್ಲಿ ಸಿನಿಮಾ ನೋಡಿದ ಮಂದಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರೀಮಿಯರ್ ಶೋ ಈವೆಂಟ್‌ ಸಕತ್ ಗ್ರಾಂಡ್‌ ಆಗಿತ್ತು ಎಂಬ ಮಾಹಿತಿ ಸ್ವತಃ ಚಿತ್ರತಂಡದಿಂದ ಸಿಕ್ಕಿದೆ. '31 DAYS' ಚಿತ್ರ ಪ್ರಸ್ತುತ ಜನರೇಷನ್..

'ಜಾಲಿಡೇಸ್' ಖ್ಯಾತಿಯ ನಟ ನಿರಂಜನ್ ಶೆಟ್ಟಿ (Niranjan Shetty) ನಟನೆಯ '31 ಡೇಸ್' (31 Days) ಸಿನಿಮಾ ಇದೇ ತಿಂಗಳು, ಅಂದರೆ 05 ಸೆಪ್ಟೆಂಬರ್ 2025ರಂದು ಬಿಡುಗಡೆ ಆಗುತ್ತಿದೆ. ಇದು ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ನಿರ್ದೇಶನದ 150 ಸಿನಿಮಾ ಎಂಬುದು ಕೂಡ ವಿಶೇಷ. ಈಗಾಗಲೇ ಕನ್ನಡದಲ್ಲಿ 149 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ವ. ಮನೋಹರ್ ಅವರ ಸಾಧನೆ ನಿಜವಾಗಿಯೂ ಗ್ರೇಟ್. ಕನ್ನಡದ ಲೆಜೆಂಡ್ ಸಂಗೀತ ನಿರ್ದೇಶಕರ ಸಾಲಿಗೆ ವಿ. ಮನೋಹರ್ ಕೂಡ ಸೇರಿಕೊಂಡಿದ್ದಾರೆ ಎಂಬುದು ಅತಿಶಯೋಕ್ತಿಯೇನೂ ಅಲ್ಲ.

ಇತ್ತೀಚೆಗೆ ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ನಿರಂಜನ್ ಶೆಟ್ಟಿ ಅಭಿನಯದ "31 DAYS" ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ. ಅಂದೇ ಈ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಬಹು ನಿರೀಕ್ಷಿತ ಈ ಚಿತ್ರವು ಸೆಪ್ಟೆಂಬರ್ 5 ರಂದು ತೆರೆಗೆ ಬರಲಿದೆ. 'ಜಾಲಿಡೇಸ್' ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕರಾಗಿ ಈ ಚಿತ್ರದೆಲ್ಲಿ ನಟಿಸಿದ್ದಾರೆ. ರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ "31 DAYS".

ಈಗಾಗಲೇ ಫಸ್ಟ್ ಲುಕ್, ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸಿಗೆ ಹತ್ತಿರವಾಗಿದೆ ಈ '31 ಡೇಸ್' ಚಿತ್ರ. ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಸಚಿವ ಸಂತೋಷ್ ಎಸ್ ಲಾಡ್, 'ಈ ಚಿತ್ರದ ನಾಯಕ ನಿರಂಜನ್ ಶೆಟ್ಟಿ‌ ನನಗೆ ಬಹಳ ವರ್ಷಗಳ ಸ್ನೇಹಿತ. ಇದು ಅವರು ನಾಯಕನಾಗಿ ನಟಿಸಿರುವ 8 ನೇ ಚಿತ್ರ ಹಾಗೂ ವಿ.ಮನೋಹರ್ ಅವರು ಸಂಗೀತ ನೀಡಿರುವ 150ನೇ ಚಿತ್ರ ಅಂತ ತಿಳಿದು ಬಹಳ ಸಂತೋಷವಾಯಿತು.‌ ಟೀಸರ್ ನೋಡಿದಾಗ ಕುತೂಹಲ ಮೂಡಿತ್ತು.

ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿದೆ ಎಂಬ ಭರವಸೆ ಬಂತು. ಬಹು ನಿರೀಕ್ಷಿತ ಈ ಚಿತ್ರ ಸೆಪ್ಟೆಂಬರ್ 5 ರಂದು ಬಿಡುಗಡೆಯಾಗುತ್ತಿದೆ. ಉತ್ತಮ ಕಂಟೆಂಟ್ ವುಳ್ಳ ಚಿತ್ರಗಳನ್ನು ಕನ್ನಡಿಗರು ಕೈ ಬಿಡುವುದಿಲ್ಲ ಎನ್ನುವುದಕ್ಕೆ 'ಸು ಫ್ರಮ್ ಸೋ' ಯಶಸ್ಸೇ ಸಾಕ್ಷಿ. '31 DAYS'ಚಿತ್ರ ಕೂಡ ಉತ್ತಮ ಕಂಟೆಂಟ್ ವುಳ್ಳ ಚಿತ್ರವಾಗಿದೆ. ಕನ್ನಡ ಕಲಾರಸಿಕರು ಈ ಚಿತ್ರವನ್ನು ಚಿತ್ರಮಂದಿರಗಳಲ್ಲೇ ನೋಡಿ ಭರ್ಜರಿ ಯಶಸ್ಸು ತಂದುಕೊಡಬೇಕು. ಚಿತ್ರ ಸೂಪರ್ ಹಿಟ್ ಆಗಬೇಕು' ಎಂದು ಹಾರೈಸಿದರು.

'Nstar' ಬ್ಯಾನರ್ ನಲ್ಲಿ ನಾಗವೇಣಿ. N. ಶೆಟ್ಟಿ ಅವರು ನಿರ್ಮಿಸಿರುವ '31DAYS' ಚಿತ್ರವನ್ನು ರಾಜ ರವಿಕುಮಾರ್ ನಿರ್ದೇಶಿಸಿದ್ದಾರೆ. ನಿರಂಜನ್ ಶೆಟ್ಟಿ ಅವರಿಗೆ ನಾಯಕಿಯಾಗಿ ಪ್ರಜ್ವಲಿ ಸುವರ್ಣ ನಟಿಸಿದ್ದಾರೆ. 11 ಹಾಡುಗಳಿರವ ಸಂಗೀತ ಪ್ರಧಾನ ಈ ಚಿತ್ರಕ್ಕೆ ವಿ. ಮನೋಹರ್ ರವರ ಸಂಗೀತ ನಿರ್ದೇಶನವಿದೆ. ಇದು ವಿ.ಮನೋಹರ್ ಅವರ ಸಂಗೀತ ನಿರ್ದೇಶನದ 150 ನೇ ಚಿತ್ರವೂ ಹೌದು. ವಿನುತ್. K ಛಾಯಾಗ್ರಹಣ, ಧನು ಕುಮಾರ್ ನೃತ್ಯ ನಿರ್ದೇಶನ ಹಾಗೂ ನಿಖಿತ್ ಪೂಜಾರಿಯರವರ ಸಂಕಲನ ಈ ಚಿತ್ರಕ್ಕಿದೆ.

ಮೊನ್ನೆ ಶಿವಮೊಗ್ಗಾದಲ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಅಲ್ಲಿ ಸಿನಿಮಾ ನೋಡಿದ ಮಂದಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರೀಮಿಯರ್ ಶೋ ಈವೆಂಟ್‌ ಸಕತ್ ಗ್ರಾಂಡ್‌ ಆಗಿತ್ತು ಎಂಬ ಮಾಹಿತಿ ಸ್ವತಃ ಚಿತ್ರತಂಡದಿಂದ ಸಿಕ್ಕಿದೆ. '31 DAYS' ಚಿತ್ರ ಪ್ರಸ್ತುತ ಜನರೇಷನ್‌ನಲ್ಲಿ ನಡೆಯುವ ಒಂದು ಸುಂದರ love story ಆಗಿದ್ದು 31 ದಿನಗಳಲ್ಲಿ ನಡೆಯುವ high voltage love story ಇದಾಗಿದೆ. ಇನ್ನೇನು ಎರಡೇ ದಿನಗಳಲ್ಲಿ ಈ 31 ಡೇಸ್ ತೆರೆಯ ಮೇಲೆ ಬರಲಿದೆ, ಅಲ್ಲಯವರೆಗೆ ಕಾಯಬೇಕಷ್ಟೇ..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌