
ಈ ಸಾಮಾಜಿಕ ಜಾಲತಾಣವೇ ಹೀಗೆ
ನಟ, ಬಾಲಿವುಡ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಮಾತನ್ನಾಡಿರುವ ಹಳೆಯ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಮತ್ತೆ ವೈರಲ್ ಆಗುತ್ತಿದೆ. ಈ ಸಾಮಾಜಿಕ ಜಾಲತಾಣವೇ ಹೀಗೆ.. ಅದರಲ್ಲಿ ಯಾವಾಗ ಯಾವಸುದ್ದಿ ಟ್ರೆಂಡಿಂಗ್ ಆಗುತ್ತೆ, ಯಾವಾಗ ಹಳೆಯ ವಿಡಿಯೋ ವೈರಲ್ ಆಗಿ ಮತ್ತೆ ಗಮನಸೆಳೆಯುತ್ತೆ ಅಂತ ಹೇಳೋದು ತುಂಬಾ ಕಷ್ಟ. ಅದ್ಯಾವುದೋ ಹಳೆಯ ಸಂದರ್ಶನದಲ್ಲಿ ನಟ ಶಾರುಖ್ ಖಾನ್ ಅವರು ಹೇಳಿರುವ ಮಾತುಗಳು ಈಗ ಮತ್ತೆ ವೈರಲ್ ಅಗುತ್ತಿವೆ. ಹಾಗಿದ್ದರೆ ಅವರೆನು ಹೇಳಿದ್ದರು? ಯಾಕೆ ಹಾಗೆ ಹೇಳಿದ್ದರು?
ನಟ ಶಾರುಖ್ ಖಾನ್ ಅವರು ತಮ್ಮ ತಂದೆ ಹಾಗೂ ತಾಯಿಯ ಬಗ್ಗೆ ಮಾತನ್ನಾಡಿರುವ ವಿಡಿಯೋ ಅದು. ಅದರಲ್ಲಿ ಅವರು 'ನಾನು ಚಿಕ್ಕ ವಯಸ್ಸಿನಲ್ಲೆ ತಂದೆ-ತಾಯಿಯರನ್ನು ಕಳೆದುಕೊಂಡವನು. ನನ್ನ ತಂದೆ ತೀರಿಕೊಂಡಾಗ ನನಗೆ ಕೇವಲ 15 ವರ್ಷ ವಯಸ್ಸು. ಅದಕ್ಕೂ ಮೊದಲೇ ನನ್ನ ತಾಯಿ ತೀರಿಹೋಗಿದ್ದರು. ನಾನುಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ನನಗೆ ತಂದೆ-ತಾಯಿ ಇರಲೇ ಇಲ್ಲ' ಎಂದಿದ್ದಾರೆ. ಶಾರುಖ್ ಖಾನ್ ತಂದೆ ತಾಜ್ ಮೊಹಮ್ಮದ್ ಖಾನ್ ಮತ್ತು ತಾಯಿ ಲತೀಫ್ ಫಾತಿಮಾ ಖಾನ್.
ನಟ ಶಾರುಖ್ ಖಾನ್ ಅವರು ಯಾವಾಗಲೂ ಸೋಷಿಯಲ್ ಮೀಡಿಯಾಗಳಲ್ಲಿ ಕ್ರಿಯಾಶೀಲರು. ಅವರು ಬಹಳಷ್ಟು ಸಮಯಗಳಲ್ಲಿ ದೇಶ-ವಿದೇಶದ ಘಟನೆಗಳಿಗೆ ಸಂಬಂಧಪಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿರುತ್ತಾರೆ. ಅವರು ಪಹಲ್ಗಾಮ್ ದಾಳಿಯನ್ನು ಖಂಡಿಸಿ ಟ್ವೀಟ್ ಮಾಡಿದ್ದರು. ಆದರೆ, ಅದಕ್ಕೆ ಪ್ರತಿಯಾಗಿ ಭಾರತ 'ಆಪರೇಶನ್ ಸಿಂಧೂರ್' ಮಾಡಿದಾಗ ಯಾವುದೇ ಪೋಸ್ಟ್ ಹಾಕದೇ ಸುಮ್ಮನಿದ್ದರು. ಅವರ ಈ ನಡೆಯನ್ನು ಪ್ರಶ್ನಿಸಿ ಹಲವರು ಸೋಷಿಯಲ್ ಮಿಡಿಯಾಗಳಲ್ಲಿ ಕಾಮೆಂಟ್ ಮಾಡಿದ್ದರು. ಅದಕ್ಕೆ ಉತ್ತರವೋ ಎಂಬಂತೆ, ನಟ ಶಾರುಖ್ ಖಾನ್ ಅವರು ಸಂದರ್ಶನದಲ್ಲಿ ಆ ಮಾತು ಹೇಳಿದ್ದರು.
https://www.facebook.com/watch/?v=540986522209187
ನಟ ಶಾರುಖ್ ಖಾನ್ ಅವರು 'ನನ್ನ ಮಾತು ಹಾಗೂ ಕೃತಿಯಲ್ಲಿ ಎರಡೂ ಕಡೆ ಪಾಯಿಂಟ್‌ಗಳಿವೆ. ನನ್ನ ಕುಟುಂಬಕ್ಕೆ ಪಾಕಿಸ್ತಾನದ ಹಿನ್ನೆಲೆ ಇದೆ. ನನ್ನ ತಂದೆಯ ಪಾಕಿಸ್ತಾನದಲ್ಲಿಯೇ ಹುಟ್ಟಿದವರು. ಅವರ ಮೂಲ ಆ ದೇಶವೇ ಆಗಿದೆ ಜೊತೆಗೆ, ಅವರ ಕುಟುಂಬ ಸದಸ್ಯರು ಕೂಡ ಅಲ್ಲಿಯೇ ಇದ್ದಾರೆ. ನಾವು ಎರಡೂ ದೇಶದವರೂ ನೆರೆಹೊರೆಯವರು ಎಂದೇ ಭಾವಿಸೋಣ. ಅವರೂ ಒಳ್ಲೆಯ ನೆರೆಹೊರೆಯವರು ಹಾಗೂ ನಾವೂ ಕೂಡ ಒಳ್ಳೆಯ ನೆರೆಹೊರೆಯವರು. ಈ ರೀತಿಯಲ್ಲಿಯೇ ಭಾವಿಸೋಣ' ಎಂದು ನಟ ಶಾರುಖ್ ಖಾನ್ ಅವರು ಅಂದು ಹೇಳಿದ್ದರು. ಅದೀಗ ಮತ್ತೆ ವೈರಲ್ ಆಗುತ್ತಿದೆ.
https://www.facebook.com/watch/?v=1221284829399815
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.