ಬಿಗ್‌ಬಾಸ್‌ ವೇದಿಕೆಯಲ್ಲಿ ರಾಜು ತಾಳಿಕೋಟೆ ಮಕ್ಕಳನ್ನು ಎಣಿಸಿಯೇ ಸುಸ್ತಾಗಿ ಹೋಗಿದ್ದ ಸುದೀಪ್‌!

Published : Oct 13, 2025, 06:56 PM ISTUpdated : Oct 13, 2025, 07:04 PM IST
raju talikote Death

ಸಾರಾಂಶ

Veteran Kannada Actor Raju Talikote Passes Away ಪ್ರಸಿದ್ಧ ರಂಗಭೂಮಿ ಕಲಾವಿದ ಮತ್ತು ನಟ ರಾಜು ತಾಳಿಕೋಟೆ ಹೃದಯಾಘಾತದಿಂದ ನಿಧನರಾದರು. 'ಮನಸಾರೆ' ಚಿತ್ರದ ಪಾತ್ರದಿಂದ ಜನಪ್ರಿಯರಾಗಿದ್ದ ಅವರು, ಬಿಗ್‌ಬಾಸ್‌ನಲ್ಲಿ ತಮ್ಮ ಇಬ್ಬರು ಪತ್ನಿಯರ ಕುಟುಂಬವನ್ನು ಪರಿಚಯಿಸಿ ಅಚ್ಚರಿ ಮೂಡಿಸಿದ್ದರು.

ನ್ನಡದ ಪ್ರಸಿದ್ಧ ರಂಗಭೂಮಿ ಕಲಾವಿದ ಹಾಗೂ ಹಾಸ್ಯ ನಟ ರಾಜು ತಾಳಿಕೋಟೆ ಸೋಮವಾರ ನಿಧನರಾದರು. ಹೃದಯಾಘಾತದಿಂದ ಮಣಿಪಾಲ್‌ ಆಸ್ಪತ್ರೆಗೆ ಭಾನುವಾರ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಸಾವು ಕಂಡಿದ್ದಾರೆ. ರಂಗಭೂಮಿ ಕಲಾವಿದ ಮಾತ್ರವಲ್ಲದೆ, ಸಿನಿಮಾಗಳಲ್ಲಿ ತಮ್ಮ ವರ್ಸೆಟೈಲ್‌ ಪಾತ್ರಗಳಿಂದ ಅವರು ಫೇಮಸ್‌ ಆಗಿದ್ದರು. ಮನಸಾರೆ ಸಿನಿಮಾದಲ್ಲಿ ಅವರ ಶಂಕರಪ್ಪ ಪಾತ್ರವನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಿದ್ದಾರೆ.

ಹೀಗಿದ್ದ ಅವರು 7ನೇ ಆವೃತ್ತಿಯ ಬಿಗ್‌ಬಾಸ್‌ನಲ್ಲಿಯೂ ಭಾಗವಹಿಸಿದ್ದರು. ಬಿಗ್ ಬಾಸ್ ಮನೆಯ ಸ್ಪರ್ಧಿಯಾಗಿ ಭಾಗವಹಿಸಿದ ಸಂದರ್ಭದಲ್ಲಿ ಅವರ ವೈಯಕ್ತಿಕ ಜೀವನದ ವಿಭಿನ್ನ ಆಯಾಮಗಳು ಬೆಳಕಿಗೆ ಬಂದಿದ್ದವು. ಮನೆಯೊಳಗೆ ಹೋಗುವ ಮುನ್ನ ಫ್ಯಾಮಿಲಿ ಇಂಟ್ರಡ್ಯೂಸ್ ಮಾಡಿಸುವಾಗ ಅವರ ಫ್ಯಾಮಿಲಿ ನೋಡಿ ನಿರೂಪಕ ದಂಗಾಗಿ ಹೋಗಿದ್ದರು.

ರಾಜು ತಾಳಿಕೋಟೆ ಅವರು ವಿಜಯಪುರ ಜಿಲ್ಲೆಯ ತಾಳಿಕೋಟೆಯವರು. 4ನೇ ತರಗತಿಯವರೆಗೆ ಮಾತ್ರ ಓದಿದ್ದ ಅವರು, ತಮ್ಮ ತಂದೆ-ತಾಯಿ ಸ್ಥಾಪಿಸಿದ ನಾಟಕ ಕಂಪನಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು. ಅವರ 'ಕಲಿಯುಗದ ಕುಡುಕ' ನಾಟಕ ಇಂದಿಗೂ ಕೂಡ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

'ಹೆಂಡ್ತಿ ಅಂದ್ರೆ ಹೆಂಡ್ತಿ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಜು ತಾಳಿಕೋಟೆ, 'ಪಂಚರಂಗಿ', 'ಜಾಕಿ', 'ಮನಸಾರೆ' ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು.

ನಿಮ್ಮ ಮಕ್ಕಳು, ಮೊಮ್ಮಕ್ಕಳು ವೋಟ್‌ ಹಾಕಿದ್ರೆ ಸಾಕು ನೀವು ಸೇಫ್‌ ಎಂದಿದ್ದ ಸುದೀಪ್‌

ಬಿಗ್‌ಬಾಸ್ ವೇದಿಕೆಯಲ್ಲಿ ರಾಜು ತಾಳಿಕೋಟೆ ತಮ್ಮ ಕುಟುಂಬದ ಪರಿಚಯ ಮಾಡಿಕೊಳ್ಳುವ ವೇಳೆ ಸ್ವತಃ ನಿರೂಪಕ ಸುದೀಪ್ ಆಶ್ಚರ್ಯಚಕಿತರಾಗಿದ್ದರು. ರಾಜು ತಾಳಿಕೋಟೆ ಅವರಿಗೆ ಇಬ್ಬರು ಪತ್ನಿಯರು. ತಮ್ಮ ಪತ್ನಿಯರು, ಮಕ್ಕಳು ಹಾಗೂ ಮೊಮ್ಮಕ್ಕಳನ್ನು ಪರಿಚಯ ಮಾಡುವ ವೇಳೆ, ಸುದೀಪ್ ಹಾಸ್ಯದಿಂದ, "ಇಡೀ ಕುಟುಂಬ ಓಟ್ ಮಾಡಿದರೆ ಸಾಕು, ರಾಜು ತಾಳಿಕೋಟೆ ಸುಲಭವಾಗಿ ಸೇಫ್ ಆಗುತ್ತಾರೆ" ಎಂದು ಚಟಾಕಿ ಹಾರಿಸಿದ್ದರು. ಕುಟುಂಬದಲ್ಲಿ ಮೊಮ್ಮಗ ಮತ್ತು ಮಗನ ನಡುವೆ ಕೇವಲ ಒಂದು ವಾರದ ವಯಸ್ಸಿನ ವ್ಯತ್ಯಾಸವಿದೆ ಎಂಬುದು ಮತ್ತೊಂದು ಮಜವಾದ ಸಂಗತಿಯಾಗಿತ್ತು.

ರಾಜು ತಾಳಿಕೋಟೆ ವೈಯಕ್ತಿಕ ಜೀವನ

1965 ಡಿಸೆಂಬರ್‌ 18 ರಂದು ವಿಜಯಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಜನಿಸಿದ್ದ ರಾಜು ತಾಳಿಕೋಟೆ, ಖಾಸ್ಗತೇಶ್ವರ ಮಠದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರೂ, ಓದಿದ್ದು 4ನೇ ಕ್ಲಾಸ್‌ ಮಾತ್ರ. ಅವರ ತಂದೆ ಜಟ್ಟೆಪ್ಪ ಯಂಕಂಚಿ ಮತ್ತು ತಾಯಿ ಮಹಬೂಬಿ ತಾಳಿಕೋಟೆ ಅವರು ರಂಗಭೂಮಿ ಕಲಾವಿದರು. ನಾಟಕ ಕಂಪನಿ ಕೂಡ ಕಟ್ಟಿದ್ದರು. ರಾಜು ತಾಳಿಕೋಟೆ ಬಾಲ ಕಲಾವಿದನಾಗಿ ತಂದೆಯ ಕಂಪನಿಯಲ್ಲೇ ಅಭಿನಯ ಆರಂಭಿಸಿದರು. ರಾಜು ತಾಳಿಕೋಟೆ ಹಿರಿಯ ಸಹೋದರ ವಿಜಯಕುಮಾರ, ಮಮತಾಜ್ ಶೇಖ್ ಮತ್ತು ಸೈದಾಮಾ ಕರ್ಜಗಿ ಅಕ್ಕಂದಿರು.

ರಂಗಭೂಮಿ ಮತ್ತು ಸಿನಿಮಾ

ರಾಜು ತಾಳಿಕೋಟೆ ಅವರೇ ಬರೆದು, ನಿರ್ದೇಶಿಸಿ ಪ್ರದರ್ಶಿಸಿದ 'ಕಲಿಯುಗದ ಕುಡುಕ' ನಾಟಕವು ಅವರಿಗೆ ಅಪಾರ ಜನಪ್ರಿಯತೆ ತಂದಿತು.'ಕಲಿಯುಗದ ಕುಡುಕ' ನಾಟಕವು 15,000 ಪ್ರದರ್ಶನಗಳನ್ನು ಕಂಡಿದ್ದು, ಇದರ ಆಡಿಯೋ ಕ್ಯಾಸೆಟ್‌ಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ.ಇವರ ಅಭಿನಯದ ಮೊದಲ ಚಿತ್ರ 'ಹೆಂಡತಿ ಅಂದರೆ ಹೆಂಡತಿ'. ಅದರೊಂದಿಗೆ'ಪಂಜಾಬಿ ಹೌಸ್', ಯೋಗರಾಜ್ ಭಟ್ ನಿರ್ದೇಶನದ 'ಪಂಚರಂಗಿ' (ಅಪಾರ ಹೆಸರು ತಂದುಕೊಟ್ಟ ಸಿನಿಮಾ), ಪುನೀತ್ ರಾಜಕುಮಾರ್ ಅವರ 'ಪರಮಾತ್ಮ', 'ಅಣ್ಣಾಬಾಂಡ್‌', ಹಾಗೂ 'ಮನಸಾರೆ', 'ಅಪ್ಪು ಆ್ಯಂಡ್‌ ಪಫ್ಪು', 'ಕಳ್ಳ ಮಳ್ಳ ಸುಳ್ಳ', 'ಅಂಜದ ಗಂಡು', 'ಭೀಮಾ ತೀರದಲ್ಲಿ' ಸೇರಿದಂತೆ ಒಟ್ಟು 35ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಕುಟುಂಬ ಮತ್ತು ಮಕ್ಕಳು

ಮೊದಲ ಪತ್ನಿ ಪ್ರೇಮಾ ತಾಳಿಕೋಟೆ ಅವರೊಂದಿಗೆ ಇವರಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಮಕ್ಕಳು ಹೊಂದಿದ್ದಾರೆ. ಪುತ್ರರು ಭರತರಾಜ ಮತ್ತು ದಾವಲ್. ಮಗಳ ಹೆಸರು ಹೀನಾ. ಎರಡನೇ ಪತ್ನಿ ಪ್ರೇಮಾ ಸಿಂಧನೂರು ಅವರೊಂದಿಗೆ ಶಾಜೀದಾ ಮತ್ತು ಶಬ್ಬು ಹೆಸರಿನ ಇಬ್ಬರು ಹೆಣ್ಣು ಮಕ್ಕಳು ಹೊಂದಿದ್ದಾರೆ.

ನಾಳೆ ಅಂತ್ಯಸಂಸ್ಕಾರ

ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರವನ್ನು ಮಣಿಪಾಲ ಆಸ್ಪತ್ರೆಯಿಂದ ರಾತ್ರಿ ವಿಜಯಪುರಕ್ಕೆ ತರಲಾಗುತ್ತದೆ. ನಾಳೆ (ಅಕ್ಟೋಬರ್ 14, 2025) ಸಿಂದಗಿ ತಾಲೂಕಿನ ಚಿಕ್ಕ ಸಿಂದಗಿ ಬಳಿಯಿರುವ ಅವರ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ನಿರ್ಧರಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ
ಸಾಯಿಬಾಬ ನಟ ಸುಧೀರ್ ಆಸ್ಪತ್ರೆ ದಾಖಲು, ಚಿಕಿತ್ಸೆಗೆ 11 ಲಕ್ಷ ರೂ ನೀಡಲು ಶಿರಡಿ ಟ್ರಸ್ಟ್‌ಗೆ ಸೂಚನೆ