Shah Rukh Khan: ಶಾರುಖ್‌ ಖಾನ್‌ನ ಫಿಟ್‌ನೆಸ್‌ ರಹಸ್ಯ ಈ ಮೂರು ಫುಡ್‌ನಲ್ಲಿದೆ!‌

Published : Sep 16, 2025, 09:43 PM IST
Shah Rukh Khan

ಸಾರಾಂಶ

59 ವರ್ಷದ ಶಾರುಖ್ ಖಾನ್ ಅವರ ಫಿಟ್‌ನೆಸ್‌ಗೆ ಕಾರಣ ಅವರ ಸರಳ ಆಹಾರ ಕ್ರಮ. ಅದು ಅವರ ಕರುಳಿನ ಆರೋಗ್ಯವನ್ನು ಸುಧಾರಿಸಿ, ಯೌವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ನಂಬಿದ್ದಾರೆ.

59 ವರ್ಷ ವಯಸ್ಸಿನಲ್ಲೂ ಶಾರುಖ್ ಖಾನ್ ಇಷ್ಟೊಂದು ಫಿಟ್‌ ಆಗಿ, ಫೈಟಿಂಗ್‌ ಮಾಡ್ತಾ, ಚಲಿಸುವ ರೈಲಿನ ಮೇಲೆ ಡ್ಯಾನ್ಸ್‌ ಮಾಡ್ತಾ, ಹೊಳೆಯುವ ತಲೆಕೂದಲನ್ನು ರಭಸದಿಂದ ಹಿಂದಕ್ಕೆ ಒಗೆಯುತ್ತಾ ಯುವಕರೂ ನಾಚುವಂತೆ ದೇಶದ ಯುವತಿಯರ ಮನ ಗೆದ್ದಿರುವುದು, ಸೂಪರ್‌ಸ್ಟಾರ್ ಆಗಿ ಉಳಿದಿರುವುದು ಹೇಗೆ? ಇದೊಂದು ರಹಸ್ಯ. ಇದು ಕೇವಲ ದುಬಾರಿ ಕ್ರೀಮ್‌ಗಳು ಅಥವಾ ಹೈಟೆಕ್ ಫಿಟ್‌ನೆಸ್ ದಿನಚರಿಗಳಿಂದ ಆಗಿದ್ದಲ್ಲ. ನಿಜ ಅಂದ್ರೆ ವಯಸ್ಸನ್ನು ತಡೆಗಟ್ಟುವಿಕೆಯ ಅವರ ತಂತ್ರ ತುಂಬಾ ಸರಳವಾಗಿದೆ: ಕೇವಲ ಮೂರೇ ಮೂರು ಆಹಾರಗಳನ್ನು ಪದಾರ್ಥಗಳ ಬಳಕೆ.

ಕಳೆದ ವರ್ಷ ಶಾರುಖ್ ತಮ್ಮ ಡಯಟ್ ಅನ್ನು ಬಹಿರಂಗಪಡಿಸಿದರು. ಆ ಮೂರು ಫುಡ್‌ ಇವು- ಮೊಳಕೆಕಾಳುಗಳು, ಗ್ರಿಲ್ಡ್‌ ಚಿಕನ್‌ ಮತ್ತು ಬ್ರೊಕೊಲಿ. ಸಾಂದರ್ಭಿಕವಾಗಿ ಒಮ್ಮೊಮ್ಮೆ ಒಂದು ಬಟ್ಟಲು ದಾಲ್‌. ಅವರ ಶೂಟಿಂಗ್‌ ಶೆಡ್ಯೂಲ್‌ ನಡುವೆ ಊಟದ ಸಮಯ ಸಾಮಾನ್ಯವಾಗಿ ಅಸ್ತವ್ಯಸ್ತ. ಆದರೂ ಅವರು ಫಿಟ್ ಆಗಿ, ಶೈನ್‌ ಆಗಿ ತೆಳ್ಳಗೆ ಇರಲು ಕಾರಣ ಇದೇ. ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಕರುಳಿನ ಆರೋಗ್ಯ ತಜ್ಞರು ಶಾರುಖ್‌ ಅವರ ಆಹಾರದ ಆಯ್ಕೆ ಯಾಕೆ ಆರೋಗ್ಯಕಾರಿ ಅಂತ ಹೇಳಿದ್ದಾರೆ.

ಉದಾಹರಣೆಗೆ, ಮೊಳಕೆ ಕಾಳುಗಳು ಸಲಾಡ್ ಫಿಲ್ಲರ್‌ಗಳಿಗಿಂತ ಹೆಚ್ಚಿನ ಶಕ್ತಿ ಕೊಡುತ್ತವೆ. ತಜ್ಞರ ಪ್ರಕಾರ, 100 ಗ್ರಾಂ ಮೊಳಕೆ ಕಾಳು ಸುಮಾರು 2 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಇದು ಕರುಳನ್ನು ಸ್ವಚ್ಛವಾಗಿ ಮತ್ತು ಜೀರ್ಣಕ್ರಿಯೆಯನ್ನು ಸುಗಮವಾಗಿಡಲು ಸಹಾಯ ಮಾಡುತ್ತದೆ. ಪೋಷಕಾಂಶ ದಟ್ಟವಾಗಿರುತ್ತದೆ. ಕರುಳಿನ ಬ್ಯಾಕ್ಟೀರಿಯಾಗಳಿಗೆ ಅತ್ಯುತ್ತಮ ಪೋಷಕ.

ನಂತರ ಗ್ರಿಲ್ಡ್ ಚಿಕನ್. ಇದನ್ನು ಶಾರುಖ್ ಖಾನ್ ತಮ್ಮ ನೇರ ಪ್ರೋಟೀನ್ ಮೂಲವಾಗಿ ಸೇವಿಸುತ್ತಾರೆ. ಇದು ಸ್ನಾಯುಗಳ ನಿರ್ವಹಣೆಗೆ ಸೂಕ್ತ. ವಯಸ್ಸಾದಂತೆ ಇದು ಹೆಚ್ಚು ಅಗತ್ಯ. ಇದರ ಕೇವಲ 100 ಗ್ರಾಂಗಳು, 30 ಗ್ರಾಂ ಪ್ರೋಟೀನ್ ಅನ್ನು ಹೊಂದಿರಬಹುದು. ಇದು ಸ್ನಾಯುಗಳ ಮರುಶಕ್ತಿ ಮತ್ತು ಒಟ್ಟಾರೆ ಶಕ್ತಿಗೆ ಅವಶ್ಯಕ.

ಇನ್ನೊಂದು, ಹಸಿರು ತರಕಾರಿ ಬ್ರೊಕೊಲಿ. ನಾವು ಇದನ್ನು ಕಡೆಗಣಿಸುವುದು ಹೆಚ್ಚು. ಇದು ಫೈಬರ್, ವಿಟಮಿನ್‌ಗಳು ಮತ್ತು ರೋಗನಿರೋಧಕಗಳಿಂದ ತುಂಬಿರುತ್ತದೆ. ಇದು ಕರುಳು ಸ್ನೇಹಿ. ಚರ್ಮ ಹೊಳೆಯಲು, ಉರಿಯೂತ ಕಡಿಮೆಯಾಗಲು ಸಹಾಯಕ. ಶಾರುಖ್ ಕೆಲವೊಮ್ಮೆ ಸ್ವಲ್ಪ ದಾಲ್ ಸೇವಿಸುತ್ತಾರೆ. ದಾಲ್‌ ಅಥವಾ ಮಸೂರ ಧಾನ್ಯ ಸಸ್ಯ ಆಧಾರಿತ ಪ್ರೋಟೀನ್, ಫೈಬರ್ ಮತ್ತು ಅಗತ್ಯ ಖನಿಜಗಳ ಶಕ್ತಿ ಕೇಂದ್ರ. ಆಹಾರದಲ್ಲಿ ವಿವಿಧ ದಾಲ್‌ಗಳನ್ನು ಸೇರಿಸುವುದರಿಂದ ಇನ್ನಷ್ಟು ಸಮತೋಲನವನ್ನು ಸೇರಿಸಬಹುದು.

ಈ ಡಯಟ್‌ ಅನ್ನು ಯಾರು ಬೇಕಾದರೂ ಮಾಡಬಹುದು, ಆದರೆ ಖಾನ್‌ ಸೇವಿಸುವಂತೆಯೇ ಸೇವಿಸಬೇಕು ಮಾತ್ರ. ಗ್ರಿಲ್ಡ್‌ ಚಿಕನ್‌ ಸವಿಯಾಗಿದೆ ಎಂದು ಸಿಕ್ಕಾಪಟ್ಟೆ ತಿನ್ನಬಾರದು. ಆಹಾರದ ಗುಣಮಟ್ಟದಷ್ಟೇ ಪ್ರಮಾಣದ ನಿಯಂತ್ರಣವೂ ಮುಖ್ಯ. ತಜ್ಞರ ಪ್ರಕಾರ, ಈ ಮೂರು ಆಹಾರಗಳ ಜೋಡಣೆಯಿಂದ ಕರುಳಿನ ಆರೋಗ್ಯ ಚೆನ್ನಾಗಿರುತ್ತದೆ. ನಮ್ಮ ಕರುಳು ಸಂತೋಷವಾಗಿದ್ದಾಗ ಚರ್ಮ ಹೊಳೆಯುತ್ತದೆ, ಮನಸ್ಥಿತಿ ಸುಧಾರಿಸುತ್ತದೆ ಮತ್ತು ವಯಸ್ಸಾಗುವಿಕೆ ನಿಧಾನವಾಗುತ್ತದೆ.

ನೇಚರ್ ಏಜಿಂಗ್‌ ಮ್ಯಾಗಜಿನ್‌ನಲ್ಲಿ ಪ್ರಕಟವಾದ 2022ರ ಒಂದು ಸ್ಟಡಿ ಪ್ರಕಾರ, ಆರೋಗ್ಯಕರ ಕರುಳಿನ ಸೂಕ್ಷ್ಮಜೀವಿಗಳನ್ನು ಕಾಪಾಡಿಕೊಳ್ಳುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ, ದೀರ್ಘಾಯುಷ್ಯವನ್ನು ಉಂಟುಮಾಡುತ್ತದೆ. ಡಿಟಾಕ್ಸ್ ಟೀಗಳು ಮತ್ತು ದುಬಾರಿ ಬೆಲೆಯ ವೆಲ್‌ನೆಸ್‌ ಡಯಟ್‌ಗಳ ಈ ಯುಗದಲ್ಲಿ, ಶಾರುಖ್ ಖಾನ್ ಅವರ ʼಮೂರು ಆಹಾರದ ಸೂತ್ರʼ ಅತ್ಯಂತ ಉಪಯೋಗಕಾರಿ, ಉಲ್ಲಾಸಕಾರಿ ಎನ್ನುತ್ತಾರೆ ತಜ್ಞರು.

ಶಾರುಖ್ ಖಾನ್ ಪ್ರಸ್ತುತ ಸಿದ್ಧಾರ್ಥ್ ಆನಂದ್ ನಿರ್ದೇಶನದ ತಮ್ಮ ಮುಂದಿನ ಆಕ್ಷನ್ ಚಿತ್ರ ಕಿಂಗ್ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಅವರ ಮಗಳು ಸುಹಾನಾ ಖಾನ್ ಕೂಡ ಇವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಅವರು ಮಗ ಆರ್ಯನ್ ಖಾನ್ ನಿರ್ದೇಶನದ ದಿ ಬಾ***ಡ್ಸ್ ಆಫ್ ಬಾಲಿವುಡ್ ನಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಮ್ಮಪ್ಪ ಮೋಹನ್ ಬಾಬು ಯಾಕೆ ಬದುಕಿದ್ರು, ಬೇರೆಯವ್ರು ಯಾಕೆ ಸತ್ರು? ನಟಿ ಮಂಚು ಲಕ್ಷ್ಮಿ ಭಾವುಕ ಮಾತು
2500 ಕೋಟಿ ರೂ ಆಸ್ತಿ ಇದ್ರೂ, ಒಂದು ಸಿನಿಮಾಕ್ಕೆ 100 ಕೋಟಿ ತಗೊಂಡ್ರೂ ಅಕ್ಷಯ್‌ ಕುಮಾರ್‌ಗೆ ಬಟ್ಟೆ ಗತಿ ಇಲ್ವಾ?