’ಅಂಬಿ ನಿಂಗೆ ವಯಸ್ಸಾಯ್ತೋ’ ನೋಡಿ ಭಾವುಕರಾದ ಪುನೀತ್

Published : Oct 08, 2018, 11:24 AM IST
’ಅಂಬಿ ನಿಂಗೆ ವಯಸ್ಸಾಯ್ತೋ’ ನೋಡಿ ಭಾವುಕರಾದ ಪುನೀತ್

ಸಾರಾಂಶ

ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರ ವೀಕ್ಷಿಸಿದ ಪುನೀತ್ ರಾಜ್ ಕುಮಾರ್ | ಅಂಬರೀಶ್, ಸುದೀಪ್ ಅಭಿನಯ ಮೆಚ್ಚಿದ ಪುನೀತ್ | 

ಬೆಂಗಳೂರು (ಅ. 08): ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರವನ್ನು ಪುನೀತ್ ರಾಜ್‌ಕುಮಾರ್ ವೀಕ್ಷಿಸಿದ್ದಾರೆ. ಶಿವರಾಜ್ ಕುಮಾರ್ ಸೇರಿದಂತೆ ಹಲವು ನಟ ನಟಿಯರು ಚಿತ್ರ ವೀಕ್ಷಿಸಿ, ಮೆಚ್ಚುಗೆ ಹೇಳಿದ್ದಾರೆ. ಈಗ ಮೆಚ್ಚುಗೆ ಸಲ್ಲಿಸಿದ್ದು ಪುನೀತ್ ರಾಜ್‌ಕುಮಾರ್.

’ಅಮ್ಮ’ ಆಗುತ್ತಿರುವ ರಾಧಿಕಾ ಪಂಡಿತ್ ಲೈಫ್‌ಸ್ಟೈಲ್ ಹೇಗಿದೆ ಗೊತ್ತಾ?

‘ಬಿಡುಗಡೆಯಾದ ಆರಂಭದಲ್ಲೇ ಚಿತ್ರ ನೋಡುವ ಕುತೂಹಲದಲ್ಲಿದ್ದೆ. ಆದರೆ ಕೆಲಸದ ಒತ್ತಡ ಕಾರಣಕ್ಕೆ ಈ ತನಕ ಚಿತ್ರ ನೋಡಲು ಆಗಿರಲಿಲ್ಲ. ಶನಿವಾರ ಬಿಡುವು ಮಾಡಿಕೊಂಡು ಸಿನಮಾ ನೋಡಿದೆ. ಅಂಬರೀಶ್ ಅವರ ನಟನೆ ನೋಡುತ್ತಾ ಭಾವುಕನಾದೆ. ಹಾಗೆಯೇ ಸುದೀಪ್ ಸೇರಿದಂತೆ ಚಿತ್ರದಲ್ಲಿರುವ ಎಲ್ಲರ ಅಭಿನಯವೂ ಅದ್ಭುತ. ಇಂತಹ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲ ಬೇಕು. ಚಿತ್ರ ತಂಡಕ್ಕೆ ಯಶಸ್ಸು ಸಿಗಲಿ’ ಎಂದು ಪುನೀತ್ ಚಿತ್ರ ವೀಕ್ಷಿಸಿದ ನಂತರ ಹೇಳಿಕೊಂಡಿದ್ದಾರೆ.

’ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾ ನೋಡಿದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ..!

ಅಂಬರೀಶ್ ನಟನೆಯನ್ನು ಕೊಂಡಾಡಿದ ಸಂದರ್ಭದಲ್ಲೇ ನಿರ್ದೇಶಕ ಗುರುದತ್ತ ಗಾಣಿಗ ಅವರ ಪ್ರತಿಭೆಗೂ ಮೆಚ್ಚುಗೆ ಹೇಳಿದರು. ನಿರ್ಮಾಪಕ ಜಾಕ್ ಮಂಜು ಕೆಲಸ ಸಾರ್ಥಕವಾಗಿದೆ ಅಂತಲೂ ಹೇಳಿದರು. 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು
ಗಿಲ್ಲಿ ಜೊತೆ ಸಿನಿಮಾ ಮಾಡ್ಬೇಕು ಎಂದಿದ್ದ ಶಿವರಾಜ್‌ಕುಮಾರ್; ಆ ವಿಡಿಯೋ ವೈರಲ್ ಆಗಿ ಈಗೇನಾಯ್ತು ನೋಡಿ!