
ಆ ಜರ್ನಿಯಲ್ಲಿ ಅವರೀಗ ಸೆಂಚುರಿ ಸ್ಟಾರ್. ಅಂದ್ರೆ, ನೂರು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ ಕನ್ನಡದ ಸಕ್ಸಸ್‌ಫುಲ್ ಸಂಗೀತ ನಿರ್ದೇಶಕ. ಇದೆಲ್ಲ ಹೇಗಾಯ್ತು ಅಂತ ಪ್ರಶ್ನಿಸಿದರೆ, ‘ಎಲ್ಲವೂ ಅದಾಗಿಯೇ ಆಗಿದ್ದು, ಯಾಕಂದ್ರೆ, ಇಷ್ಟುದೂರ ಬರುತ್ತೇನೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ’ ಎನ್ನುವುದೇ ಅವರ ಮೊದಲ ಪ್ರತಿಕ್ರಿಯೆ.
ಹಲವಾರು ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಹೆಗ್ಗಳಿಕೆ ಗುರುಕಿರಣ್ ಅವರದ್ದು. ‘ಮೈಲಾರಿ’ ಚಿತ್ರದೊಂದಿಗೆ ಅತ್ಯುತ್ತಮ ರಾಜ್ಯಪ್ರಶಸ್ತಿಗೂ ಪಾತ್ರರಾದವರು. ಹಾಗೆಯೇ ಗುರುಕಿರಣ್ ಅಂದಾಗ ಸಂಗೀತ ಪ್ರಿಯರಿಗೆ ‘ಜೋಗಿ’, ‘ಆಪ್ತಮಿತ್ರ’, ‘ಮೈಲಾರಿ’, ‘ಗೋವಿಂದಾಯ ನಮಃ’ ಚಿತ್ರಗಳಲ್ಲಿನ ಸೂಪರ್ ಹಿಟ್ ಹಾಡುಗಳು ತಕ್ಷಣಕ್ಕೆ ನೆನಪಾಗುವುದು ಕೂಡ ಅಷ್ಟೇ ಸಹಜ. ಅಂತಹ ಬಹು ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್, ಸಂಗೀತ ಜರ್ನಿಯಲ್ಲಿ ಶಿವರಾಜ್ ಕುಮಾರ್ ಅಭಿನಯದ ‘ಆಯುಷ್ಮಾನ್ ಭವ’ 100ನೇ ಚಿತ್ರ.
ಕನ್ನಡ ಚಿತ್ರರಂಗದ ಹೆಮ್ಮೆ ನಾಗೇಂದ್ರ ಪ್ರಸಾದ್; ಹಾಡಿಗೂ ಸೈ, ನಿರ್ದೇಶನಕ್ಕೂ ಜೈ!
ಕಾಕತಾಳೀಯ ಎನ್ನುವ ಹಾಗೆ ಶಿವರಾಜ್‌ಕುಮಾರ್ ಅಭಿನಯದ ‘ಸತ್ಯ ಇನ್ ಲವ್’ ಗುರುಕಿರಣ್ ಸಂಗೀತ ನಿರ್ದೇಶನದ 50 ನೇ ಚಿತ್ರವಾಗಿತ್ತು. ಹಾಗಾಗಿ ನೂರು ಸಿನಿಮಾಗಳ ಸಂಗೀತ ಸಂಯೋಜನೆಯ ಜರ್ನಿಯ ಕುರಿತು ಮಾತನಾಡುವಾಗ ‘ಶಿವಣ್ಣ ನನಗೆ ಲಕ್ಕಿ’ ಎನ್ನುತ್ತಾರೆ ಗುರುಕಿರಣ್.
ನಾವೆಲ್ಲ ಆರ್ಕೆಸ್ಟ್ರಾದಲ್ಲಿದ್ದವರು. ಸಿನಿಮಾಕ್ಕೆ ಸಂಗೀತ ನಿರ್ದೇಶಕರಾಗುತ್ತವೆಂದು ಕನಸಲ್ಲೂ ಎಣಿಸಿರಲಿಲ್ಲ. ಮನೋಹರ್ ನನ್ನ ಗುರು. ಅವರ ಬಳಿ ಸಂಗೀತ ಕಲಿತೆ. ಕಲಿತ ವಿದ್ಯೆಯನ್ನು ಉಪೇಂದ್ರ ಗುರುತಿಸಿದರು. ಅವರ ಬೆಂಬಲದ ಮೂಲಕ ನಾನು ಸಂಗೀತ ನಿರ್ದೇಶಕನಾದೆ. ಅಲ್ಲಿಂದ ಇಲ್ಲಿ ತನಕ ಎಲ್ಲವೂ ಅದಾಗಿಯೇ ಆಗುತ್ತಾ ಬರುತ್ತಿದೆ. ಏಳು ಬೀಳಿನ ನಡುವೆಯೂ ಹೆಚ್ಚು ಖುಷಿ ಸಿಕ್ಕಿದೆ.- ಗುರುಕಿರಣ್
‘ಶಿವಣ್ಣ ನನಗೆ ಲಕ್ಕಿ ಸ್ಟಾರ್. ಅವರೊಂದಿಗೆ ಕೆಲಸ ಮಾಡಿದ ಎಲ್ಲಾ ಸಿನಿಮಾದ ಹಾಡುಗಳು ಸೂಪರ್ ಹಿಟ್. ಅವರದೇ ಅಭಿನಯದ ‘ಸತ್ಯ ಇನ್ ಲವ್’ ಚಿತ್ರ ನನ್ನ ಸಂಗೀತ ನಿರ್ದೇಶನದ 50ನೇ ಚಿತ್ರ. ಈಗ ‘ಆಯುಷ್ಮಾನ್ ಭವ’ ನಾನು ಸಂಗೀತ ನೀಡಿದ ನೂರನೇ ಚಿತ್ರ. ಇದೆಲ್ಲ ಪ್ಲಾನ್ ಮಾಡಿಕೊಂಡಿದ್ದರಿಂದ ಆಗಿದ್ದಲ್ಲ. ಎಲ್ಲವೂ ಅದಾಗಿಯೇ ಆಗಿದ್ದು. ನಾವೇನೋ ಅಂದುಕೊಂಡರೂ ಅದು ಆಯಾ ಕಾಲಕ್ಕೆ ತಕ್ಕಂತೆ ಆಗುತ್ತಲೇ ಬರುತ್ತದೆ. ಸಂಗೀತ ನಿರ್ದೇಶಕನಾಗಿ ನಾನು ಇಷ್ಟುದೂರ ಬರುತ್ತೇನೆನ್ನುವ ಬಗ್ಗೆ ಕನಸು ಕೂಡ ಇರಲಿಲ್ಲ. ಆದರೆ ಇಲ್ಲಿಗೆ 100 ಚಿತ್ರಗಳಾಗಿವೆ. ನೆನಪಿಸಿಕೊಂಡರೆ ಥ್ರಿಲ್ ಆಗುತ್ತದೆ’ ಎನ್ನುತ್ತಾರೆ ಗುರುಕಿರಣ್.
12 ವರ್ಷಗಳಿಂದ ಉಚಿತ ಸಂಗೀತ ಪಾಠ ಹೇಳಿಕೊಡುವ ಕಲಾರಾಧಕ ಇವರು!
ಕನ್ನಡ ಚಿತ್ರರಂಗಕ್ಕೆ ಗುರುಕಿರಣ್ ಹೆಸರಿನ ಸ್ಪುರದ್ರೂಪಿ ಸಂಗೀತ ನಿರ್ದೇಶಕನೊಬ್ಬ ಪರಿಚಯವಾಗಿದ್ದು ‘ಎ’ ಚಿತ್ರದ ಮೂಲಕ. ಇದು ಉಪೇಂದ್ರ ನಿರ್ದೇಶಿಸಿ,ಅಭಿನಯಿಸಿದ ಚಿತ್ರ. ಅದೃಷ್ಟಇಬ್ಬರಿಗೂ ಖುಲಾಯಿಸಿತು. ಮೊದಲು ಹಾಡುಗಳು ಹಿಟ್ ಆದವು. ಆಮೇಲೆ ಸಿನಿಮಾ ಕೂಡ ಹಿಟ್ ಆಯಿತು.
ಅಲ್ಲಿಂದ ಇಬ್ಬರು ಮನೆ ಮಾತಾದರು. ಸಂಗೀತ ನಿರ್ದೇಶಕನಾಗಿ ಗುರುಕಿರಣ್ ಅವರಿಗೆ ಅಲ್ಲಿಂದ ಶುರುವಾದ ಜರ್ನಿ. ಅಲ್ಲಿ ತನಕ ಸಂಗೀತ ನಿರ್ದೇಶಕ ಮನೋಹರ್ ಹಾಗೂ ಉಪೇಂದ್ರ ಅವರ ಬಳಿಯೇ ಸಿನಿಮಾ ಬರಹ ಸೇರಿ ಇತ್ಯಾದಿ ಕೆಲಸದಲ್ಲಿ ತೊಡಗಿಸಿಕೊಂಡವರು. ಈಗ 100 ಚಿತ್ರಗಳಿಗೆ ಸಂಗೀತ ನೀಡಿದ ಯಶಸ್ಸಿ ಸಂಗೀತ ನಿರ್ದೇಶಕ. ಇದಕ್ಕೆಲ್ಲ ಕಾರಣ ಗೆಳೆಯರು, ಹಿರಿಯರು ಎನ್ನುವುದು ಗುರುಕಿರಣ್ ಮಾತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.