'ಕೋಟಿಗೊಬ್ಬ-3' ಬಿಟ್ಟು 'ಫ್ಯಾಂಟಮ್‌' ಹಿಂದೆ ಹೋದ್ರಾ ಸುದೀಪ್!

Published : Oct 01, 2019, 10:00 AM IST
'ಕೋಟಿಗೊಬ್ಬ-3' ಬಿಟ್ಟು 'ಫ್ಯಾಂಟಮ್‌' ಹಿಂದೆ ಹೋದ್ರಾ ಸುದೀಪ್!

ಸಾರಾಂಶ

ಕಿಚ್ಚ ಸುದೀಪ್‌ ಹಾಗೂ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ ಸೆಟ್ಟೇರಬೇಕಿದ್ದ ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೂ ಮೊದಲೇ ಮತ್ತೊಂದು ಸಿನಿಮಾ ಶುರುವಾಗಲಿದೆ ಎನ್ನುವುದು ಸುದ್ದಿ. ಇದನ್ನು ಸ್ವತಃ ನಿರ್ದೇಶಕ ಅನೂಪ್‌ ಭಂಡಾರಿ ಅವರೇ ಸ್ಪಷ್ಟಪಡಿಸಿದ್ದಾರೆ. 

ಚಿತ್ರದ ಹೆಸರು, ಯಾವಾಗ ಚಿತ್ರೀಕರಣ, ಯಾರು ನಾಯಕಿ ಎಂಬುದು ಸದ್ಯಕ್ಕೆ ಗುಟ್ಟಾಗಿಯೇ ಉಳಿದುಕೊಂಡಿದೆ. ಆದರೆ ಈಗ ಬಂದಿರುವ ಮಾಹಿತಿಯಂತೆ ಅನೂಪ್‌ ನಿರ್ದೇಶಿಸಿ, ಸುದೀಪ್‌ ನಾಯಕನಾಗಿ ನಟಿಸಲಿರುವ ಚಿತ್ರಕ್ಕೆ ‘ಫ್ಯಾಂಟಮ್‌’ ಎನ್ನುವ ಹೆಸರು ಇಡಲಾಗಿದೆ.

ಪೈರೆಸಿ ನಡುವೆಯೂ 100 ಕೋಟಿ ಕ್ಲಬ್ ಸೇರಿಸ ಪೈಲ್ವಾನ್!

ಕನ್ನಡದಲ್ಲಿ ಶುರು ಮಾಡಿರುವ ಈ ಚಿತ್ರ ವಲ್‌ರ್‍್ಡ ಕ್ಲಾಸಿಕ್‌ ಫ್ಲೇವರ್‌ನಲ್ಲಿ ಮೂಡಿ ಬರಲಿದೆ ಎನ್ನಲಾಗುತ್ತಿದೆ. ಡಿಸೆಂಬರ್‌ ತಿಂಗಳಿನಿಂದ ಇದರ ಚಿತ್ರೀಕರಣ ಶುರುವಾಗಲಿದೆ. ಸದ್ಯಕ್ಕೆ ಸುದೀಪ್‌ ‘ಕೋಟಿಗೊಬ್ಬ 3’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಅವರ ನಟನೆಯ ‘ದಬಾಂಗ್‌ 3’ ಕೂಡ ಇದೆ. ಇನ್ನೂ ತೆಲುಗಿನ ‘ಸೈರಾ’ ಸಿನಿಮಾ ತೆರೆಗೆ ಬರುತ್ತಿದೆ. ಇವೆಲ್ಲ ಮುಗಿಸಿಕೊಳ್ಳುವ ಹೊತ್ತಿಗೆ ಡಿಸೆಂಬರ್‌ ಆಗಲಿದೆ. ಅಲ್ಲಿಂದ ‘ಫ್ಯಾಂಟಮ್‌’ಗೆ ಚಿತ್ರೀಕರಣ ಆರಂಭವಾಗಲಿದೆ.

ಸುದೀಪ ಏನೋ ಮಾತಾಡ್ತಿದ್ದಾರೆ ಕೇಳಿಸಿಕೊಂಡ್ರಾ? ಬಳೆ, ಸರ, ಕಡಗದಾಚೆ ಓದಿಕೊಳ್ಳಿ

ಹೊಸ ಚಿತ್ರದ ಕುರಿತು ಸುದೀಪ್‌ ಅವರೇ ಎಲ್ಲವನ್ನೂ ಅಧಿಕೃತವಾಗಿ ಹೇಳಲಿದ್ದಾರೆ. ಯಾವ ರೀತಿಯ ಸಿನಿಮಾ, ಅದರ ಹೆಸರು, ನಾಯಕಿ ಹೀಗೆ ಎಲ್ಲವೂ ಅವರೇ ತೆರೆದಿಡಲಿದ್ದಾರೆ.- ಅನೂಪ್‌ ಭಂಡಾರಿ, ನಿರ್ದೇಶಕ

ಈ ಚಿತ್ರಕ್ಕಾಗಿ ಸುದೀಪ್‌ 40 ದಿನಗಳ ಕಾಲ ಕಾಲ್‌ಶೀಟ್‌ ನೀಡಿದ್ದು, ಶಾಲಿನಿ ಆರ್ಟ್‌್ಸ ಬ್ಯಾನರ್‌ನಲ್ಲಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುವ ಪ್ಲಾನ್‌ ಚಿತ್ರತಂಡದ್ದು. ಜಾಕ್‌ ಮಂಜುನಾಥ್‌ ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

ಸೌತ್ ಆಫ್ರಿಕಾ ತಂಡದ ಜೊತೆ ಕಿಚ್ಚನ ಪ್ರಯಾಣ; ಸರ್ಪ್ರೈಸ್ ನೀಡಿದ ಪೈಲ್ವಾನ!

ಈಗಾಗಲೇ ಏಳು ದಿನಗಳ ಕಾಲ ಚಿತ್ರದ ಕೆಲ ದೃಶ್ಯಗಳನ್ನು ಚಿತ್ರೀಕರಣ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ‘ಬಿಲ್ಲ ರಂಗ ಭಾಷಾ ಚಿತ್ರಕ್ಕೂ ಮೊದಲೇ ನನ್ನ ಮತ್ತು ಸುದೀಪ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಶುರುವಾಗುತ್ತಿರುವುದು ನಿಜ. ಚಿತ್ರದ ಹೆಸರು ಇನ್ನೂ ಅಂತಿಮ ಮಾಡಿಕೊಂಡಿಲ್ಲ. ಡಿಸೆಂಬರ್‌ ತಿಂಗಳಿಂದ ಈ ಸಿನಿಮಾ ಚಿತ್ರೀಕರಣ ಆಗಲಿದೆ’ ಎನ್ನುತ್ತಾರೆ ನಿರ್ದೇಶಕ ಅನೂಪ್‌ ಭಂಡಾರಿ.

ಅಲ್ಲು ಅರ್ಜುನ್‌ ಭೇಟಿ ಮಾಡಿದ ಅನೂಪ್‌ ಭಂಡಾರಿ

60 ಮಂದಿಯೊಂದಿಗೆ ಪೋಲೆಂಡ್‌ಗೆ ಹೊರಟ ಕಿಚ್ಚ ಸುದೀಪ್!

ಈ ನಡುವೆ ಅನೂಪ್‌ ಭಂಡಾರಿ ಅವರು ತೆಲುಗಿನ ಅಲ್ಲೂ ಅರ್ಜುನ್‌ ಅವರನ್ನು ಭೇಟಿ ಮಾಡಿ ಬಂದಿರುವುದು ಕೂಡ ಕುತೂಹಲ ಮೂಡಿಸಿದೆ. ಈ ಹಿಂದೆ ಅಲ್ಲೂ ಅರ್ಜುನ್‌ ‘ರಂಗಿತರಂಗ’ ಸಿನಿಮಾ ನೋಡಿ ಅನೂಪ್‌ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರಂತೆ. ಸಿಂಗಾಪುರದಲ್ಲಿ ಭೇಟಿಯಾದ ಮೇಲೆ ಇತ್ತೀಚೆಗೆ ಸ್ವತಃ ಅಲ್ಲೂ ಅರ್ಜುನ್‌ ಅವರೇ ಗೀತಾ ಆರ್ಟ್‌್ಸಗೆ ಅನೂಪ್‌ ಭಂಡಾರಿ ಅವರನ್ನು ಕರೆಸಿಕೊಂಡು ‘ಒಳ್ಳೆಯ ಕತೆ ಇದ್ದರೆ ಹೇಳಿ ಜತೆಗೆ ಸಿನಿಮಾ ಮಾಡೋಣ’ ಎನ್ನುವ ಮಾತು ಆಡಿದ್ದಾರೆ. ಇತ್ತ ಅನೂಪ್‌ ಕೂಡ ಟಾಲಿವುಡ್‌ನ ಈ ಸ್ಟೈಲೀಶ್‌ ಸ್ಟಾರ್‌ಗೆ ಕತೆ ಸಿಕ್ಕರೆ ಸಿನಿಮಾ ಮಾಡುವ ಯೋಚನೆಯಲ್ಲೂ ಇದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿವಣ್ಣನ ಭೇಟಿಯಾಗಿ ಆಶೀರ್ವಾದ ಪಡೆದ Bigg Boss Kannada Season 12 ವಿನ್ನರ್ ಗಿಲ್ಲಿ ನಟ
ಫಸ್ಟ್‌ ಟೈಮ್ ರಿಯಲ್ ಪತಿ, ಮುದ್ದಾದ ಮಗನ ಪರಿಚಯ ಮಾಡಿಕೊಟ್ಟ Bhagyalakshmi Serial ಸುಷ್ಮಾ ಕೆ ರಾವ್