ಶ್ರದ್ಧಾ ಶ್ರೀನಾಥ್ ತೆಲುಗು ಚಿತ್ರರಂಗಕ್ಕೆ ಯು ಟರ್ನ್ !

Published : Oct 15, 2018, 03:55 PM ISTUpdated : Oct 15, 2018, 04:38 PM IST
ಶ್ರದ್ಧಾ ಶ್ರೀನಾಥ್ ತೆಲುಗು ಚಿತ್ರರಂಗಕ್ಕೆ ಯು ಟರ್ನ್ !

ಸಾರಾಂಶ

ಶ್ರದ್ಧಾ ಶ್ರೀನಾಥ್ ಸ್ಯಾಂಡಲ್‌ವುಡ್‌ನ ಬಹು ಬೇಡಿಕೆ ನಟಿ | ಸ್ಯಾಂಡಲ್‌ವುಡ್ ಯಶಸ್ಸಿನ ನಂತರ ಟಾಲಿವುಡ್‌ಗೆ ಹಾರಲಿದ್ದಾರೆ ಈ ಪ್ರತಿಭಾನ್ವಿತ ನಟಿ | 

ಬೆಂಗಳೂರು (ಅ. 15): ಕನ್ನಡದ ಮತ್ತೊಬ್ಬ ನಟಿ ದೊಡ್ಡ ಮಟ್ಟದಲ್ಲಿ ತೆಲುಗು ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್ ಮೊದಲ ಹೆಜ್ಜೆಯಲ್ಲೇ ಯಶಸ್ವಿ ನಟ ನಾನಿ ಜತೆ ನಾಯಕಿ ಆಗುವ ಅವಕಾಶಕ್ಕೆ ಪಾತ್ರರಾಗಿದ್ದಾರೆ.

ನಾನಿ ಈಗ ಒಪ್ಪಿಕೊಂಡಿರುವ ‘ಜೆರ್ಸಿ’ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ನಾಯಕಿ. ‘ಮಳ್ಳಿ ರಾವಾ’ ಚಿತ್ರ ನಿರ್ದೇಶಿಸಿದ್ದ ಗೌತಮ್ ತಿನ್ನನೋರಿ ನಿರ್ದೇಶನದ ಚಿತ್ರವಿದು. ಒಂದು ಯಶಸ್ವಿ ಕಾಂಬಿನೇಷನ್ ಚಿತ್ರಕ್ಕೆ ನಾಯಕಿ ಆಗುವ ಮೂಲಕ ಟಾಲಿವುಡ್‌ಗೆ ಬಿಗ್ ಎಂಟ್ರಿ ಕೊಟ್ಟಿದ್ದಾರೆ ಶ್ರದ್ಧಾ.

ವಾಹ್ ಎನಿಸುವಂತಿದೆ ಶ್ರದ್ದಾ ಶ್ರೀನಾಥ್ ಈ ಲುಕ್’ಗಳು!

ಈಗಾಗಲೇ ಕನ್ನಡದ ಜತೆಗೆ ತಮಿಳು ಹಾಗೂ ಹಿಂದಿಯಲ್ಲೂ ಎಂಟ್ರಿ ಕೊಟ್ಟಿದ್ದಾರೆ. ಈಗ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ತೆಲುಗಿಗೂ ಹೋಗುವ ಮೂಲಕ ಮತ್ತೊಂದು ಭಾಷೆಯಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಶ್ರದ್ಧಾ ಶ್ರೀನಾಥ್ ನಟನೆಯ ‘ಯು ಟರ್ನ್’ ಸಿನಿಮಾ ತೆಲುಗಿನಲ್ಲಿ ರೀಮೇಕ್ ಆಗಿ ಶ್ರದ್ಧಾ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದು ಎಲ್ಲರಿಗೂ ಗೊತ್ತಿದೆ.

ಈಗ ನೇರವಾಗಿ ತೆಲುಗು ಚಿತ್ರಕ್ಕೆ ನಾಯಕಿ ಆಗುತ್ತಿದ್ದಾರೆ. ‘ದೇವದಾಸ್’ ಯಶಸ್ಸಿನ ಗುಂಗಿನಲ್ಲಿರುವ ನಾನಿ, ಕೂಡ ಶ್ರದ್ಧಾ ಶ್ರೀನಾಥ್ ನಾಯಕಿ ಆಗುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ನಾನಿ ಕ್ರಿಕೆಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ನಾಯಕಿ ಪಾತ್ರ ಹೇಗಿರುತ್ತದೆಂಬುದರ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ಈ ನಡುವೆ ಹಿಂದಿ ಸಿನಿಮಾ ಮುಗಿಸಿಕೊಂಡು ಬಂದಿರುವ ಶ್ರದ್ಧಾ, ಕನ್ನಡದಲ್ಲಿ ‘ರುಸ್ತುಂ’ ಮಾಡುತ್ತಿದ್ದಾರೆ. ಇದೆಲ್ಲ ಮುಗಿಯುವ ಹೊತ್ತಿಗೆ ‘ಜೆರ್ಸಿ’ ಸೆಟ್ಟೇರಲಿದೆ.

ಈ ಹಿಂದೆ ಸಾಯಿಕುಮಾರ್ ಪುತ್ರ ನಾಯಕನಾಗಿದ್ದ ‘ಈಡು ಜೋಡು’ ಚಿತ್ರಕ್ಕೆ ಶ್ರದ್ಧಾ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಈ ಸಿನಿಮಾ ಎಲ್ಲಿಯವರೆಗೂ ಬಂದಿದೆ ಎನ್ನುವ ಮಾಹಿತಿ ಲಭ್ಯವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್
ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನವೇ ದರ್ಶನ್‌ಗೆ ಗುಡ್ ನ್ಯೂಸ್; ಅಭಿಮಾನಿಗಳೂ ಫುಲ್ ಖುಷ್!