ಕನ್ನಡದ ಆರ್‌ಜೆಯೊಬ್ಬರು ಬಿಚ್ಚಿಟ್ರು #MeToo ಅನುಭವ

Published : Oct 15, 2018, 12:13 PM ISTUpdated : Oct 15, 2018, 12:32 PM IST
ಕನ್ನಡದ ಆರ್‌ಜೆಯೊಬ್ಬರು ಬಿಚ್ಚಿಟ್ರು  #MeToo ಅನುಭವ

ಸಾರಾಂಶ

ಸ್ಯಾಂಡಲ್‌ವುಡ್‌ಗೂ ಕಾಲಿಟ್ಟ #MeToo ಬಿಸಿ | ಆರ್ ಜೆಯೊಬ್ಬರು ಬಿಚ್ಚಿಟ್ರು ಕಹಿ ಅನುಭವ | 

ಬೆಂಗಳೂರು (ಅ. 15): #MeToo ಅಭಿಯಾನ ತೀವ್ರ ಸ್ವರೂಪ ಪಡೆಯುತ್ತಿದೆ. ಒಬ್ಬೊಬ್ಬರೇ ಅವರವರ ಅನುಭವವನ್ನು ಬಿಚ್ಚಿಡುತ್ತಿದ್ದಾರೆ. ತಮ್ಮ ಕಹಿ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಳ್ಳುತ್ತಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ, ಆರ್ ಜೆ ನೇತ್ರಾ ಕೂಡಾ #MeToo ಗೆ ದನಿಗೂಡಿಸಿದ್ದಾರೆ. ತಮ್ಮ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

 

‘ 2011 ರಲ್ಲಿ ನಡೆದ ಘಟನೆಯಿದು. ನಾವೊಂದಿಷ್ಟು ಜನ ಹುಡುಗಿಯರು ಕ್ರಿಸ್ ಮಸ್ ಪಾರ್ಟಿಯಲ್ಲಿ ಇದ್ವಿ. ಆಗ ಖ್ಯಾತ ನಟರೊಬ್ಬರು ಅಲ್ಲಿಗೆ ಬಂದ್ರು. ನಾವೆಲ್ಲಾ ವಿಶ್ ಮಾಡಿದ್ವಿ.  ಅಲ್ಲಿರುವ ಹುಡುಗಿಯರನ್ನೆಲ್ಲಾ ಡ್ಯಾನ್ಸ್ ಮಾಡಲು ಕರೆದರು. ಕ್ಲೋಸ್ ಆಗಿ ಮೂವ್ ಮಾಡಲು ಯತ್ನಿಸಿದರು. ಆಗ ಗುಂಪಿನಲ್ಲಿದ್ದ ಹುಡುಗಿಯೊಬ್ಬಳಿಗೆ ಇರುಸು ಮುರುಸಾಗಿ ಹೊರ ಹೋಗಲು ಮುಂದಾದಾಗ ಅಲ್ಲೇ ಇರುವಂತೆ ಆ ನಟ ಒತ್ತಾಯಿಸಿದರು. ನಿನಗೆ ಇಲ್ಲಿ ಸರಿ ಹೋಗದಿದ್ದರೆ ನನ್ನ ರೂಮಿಗೆ ಹೋಗಬಹುದು ಎಂದು ಹೇಳಿದರು. ಇದನ್ನು ಲೈಂಗಿಕ ದೌರ್ಜನ್ಯ ಎಂದು ಹೇಳುವುದಾದರೆ ಇದೂ ಕೂಡಾ ಮೀಟೂ ’ ಎಂದಿದ್ದಾರೆ. 

Me Too ಅಭಿಯಾನ : ಕ್ರೇಜಿಸ್ಟಾರ್ ನಿಜರೂಪ ಬಿಚ್ಚಿಟ್ರು ಈ ನಟಿ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!