ಗಂಡನಿಗೆ ಡಿವೋರ್ಸ್.. ಉಪೇಂದ್ರ ಜೊತೆ ಲವ್? ಕೊನೆಗೂ ಆ ಸೀಕ್ರೆಟ್ ಬಿಚ್ಚಿಟ್ಟ ನಟಿ ಪ್ರೇಮಾ

Published : Sep 08, 2026, 06:04 PM IST
Prema Upendra Love Rumours

ಸಾರಾಂಶ

ನಟಿ ಪ್ರೇಮಾ ತಮ್ಮ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಹಲವು ವಿಚಾರಗಳನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ. ಇದೇ ವೇಳೆ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಉಪೇಂದ್ರ ಜೊತೆ ಪ್ರೀತಿಯಲ್ಲಿದ್ದರು ಎಂಬ ಹಳೆಯ ರೂಮರ್ಸ್‌ಗೂ ಸ್ಪಷ್ಟನೆ ನೀಡಿದ್ದಾರೆ.

ಒಂದು ಕಾಲದಲ್ಲಿ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಕ್ರೇಜ್ ಹೊಂದಿದ್ದ ನಾಯಕಿ ಪ್ರೇಮಾ. ಸ್ಟಾರ್ ಹೀರೋಗಳ ಜೊತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದ ಅವರು, ನಾಯಕಿಯಾಗಿ ಮಾತ್ರವಲ್ಲದೆ ಪೋಷಕ ಪಾತ್ರಗಳು ಹಾಗೂ ವಿಶೇಷ ಹಾಡುಗಳಲ್ಲೂ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದಿದ್ದರು. ಆದರೆ ಕಳೆದ ಕೆಲ ವರ್ಷಗಳಿಂದ ಸಿನಿಮಾಗಳಿಂದ ಕೊಂಚ ದೂರ ಉಳಿದಿರುವ ನಟಿ ಪ್ರೇಮಾ, ಇದೀಗ ಸಂದರ್ಶನವೊಂದರಲ್ಲಿ ತಮ್ಮ ಸಿನಿ ಜರ್ನಿ ಹಾಗೂ ವೈಯಕ್ತಿಕ ಬದುಕಿನ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ವಿಶೇಷವಾಗಿ ತಮ್ಮ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಪ್ರೇಮಾ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಬದುಕನ್ನು ಯಾವತ್ತೂ ಬೆರೆಸಿಲ್ಲ ಎಂದು ಹೇಳಿರುವ ಅವರು, ವಿಚ್ಛೇದನದ ವಿಚಾರವನ್ನು ಈ ಹಿಂದೆ ಸಾರ್ವಜನಿಕವಾಗಿ ಮಾತನಾಡದೇ ಇರುವುದಕ್ಕೂ ಕಾರಣವಿದೆ ಎಂದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಯಾರೂ ಕೇಳಿರಲಿಲ್ಲ, ತಾವೂ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ನನ್ನ ಜೀವನ.. ನಿರ್ಧಾರ ನನ್ನದು!

ವಿಚ್ಛೇದನದ ನಿರ್ಧಾರದ ಬಗ್ಗೆ ಮಾತನಾಡಿರುವ ಪ್ರೇಮಾ, ನನಗೆ ಇಷ್ಟವಾಗದಿದ್ದರೆ ನಾನು ನೇರವಾಗಿ ನಿರ್ಧಾರ ತೆಗೆದುಕೊಳ್ಳುತ್ತೇನೆ. ಇದು ನನ್ನ ಜೀವನ, ನನ್ನ ಒಂದೇ ಒಂದು ಜೀವನ ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ. ಈ ನಿರ್ಧಾರ ಕೈಗೊಳ್ಳುವ ಮುನ್ನ ತಮ್ಮ ಪೋಷಕರೊಂದಿಗೆ ಚರ್ಚಿಸಿದ್ದಾಗಿ ತಿಳಿಸಿರುವ ಅವರು, ತಂದೆ-ತಾಯಿ ಕೂಡ ತಮ್ಮ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ವೈಯಕ್ತಿಕ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಬೇಕು ಎಂದು ಮಹಿಳೆಯರಿಗೆ ಸಂದೇಶವನ್ನೂ ನೀಡಿದ್ದಾರೆ.

ಪ್ರಪಂಚ ತುಂಬಾ ದೊಡ್ಡದು. ಯಾವುದಾದರೂ ಒಂದು ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಂಡರೆ ಜೀವನದಲ್ಲಿ ಹೊಸ ದಾರಿ ಸಿಗುತ್ತದೆ. ಇದೊಂದೇ ಜೀವನವಲ್ಲ ಎಂದು ಹೇಳಿರುವ ಪ್ರೇಮಾ, ಮದುವೆಯೇ ಮಹಿಳೆಯ ಜೀವನದ ಅಂತಿಮ ಗುರಿಯಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ. ಮಹಿಳೆಯರಿಗೆ ತಮ್ಮದೇ ಆದ ಬದುಕು, ಶಕ್ತಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವಿದೆ ಎಂಬ ಸಂದೇಶವನ್ನೂ ನೀಡಿದ್ದಾರೆ.

ತಮ್ಮ ವಿಚ್ಛೇದನದ ಪ್ರಕ್ರಿಯೆಯ ಬಗ್ಗೆಯೂ ಮಾತನಾಡಿರುವ ಅವರು, ತಾವು ವೈಯಕ್ತಿಕವಾಗಿ ಕೋರ್ಟ್‌ಗೆ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡಿದ್ದಾಗಿ ಹೇಳಿದ್ದಾರೆ. ಪೋಷಕರು ಬರುತ್ತೇವೆ ಎಂದಿದ್ದರೂ, ತಾನೊಬ್ಬರೇ ಕೋರ್ಟ್‌ಗೆ ಹೋಗಿ ಕೆಲಸ ಮುಗಿಸಿಕೊಂಡು ಬಂದೆ ಎಂದು ಪ್ರೇಮಾ ವಿವರಿಸಿದ್ದಾರೆ. ನಂತರ ತಮ್ಮ ವೃತ್ತಿಜೀವನದತ್ತ ಗಮನ ಹರಿಸಿದ್ದಾಗಿ ತಿಳಿಸಿದ್ದಾರೆ.

ಉಪೇಂದ್ರ ಜೊತೆ ಪ್ರೀತಿ? ವರ್ಷಗಳ ಬಳಿಕ ರೂಮರ್ಸ್‌ಗೆ ಉತ್ತರ!

ಇನ್ನು ಪ್ರೇಮಾ ಅವರ ವೈಯಕ್ತಿಕ ಬದುಕಿನ ಕುರಿತ ಮತ್ತೊಂದು ಹಳೆಯ ಚರ್ಚೆ ಈ ಸಂದರ್ಶನದಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ವೃತ್ತಿಜೀವನದ ಉತ್ತುಂಗದಲ್ಲಿದ್ದ ಸಮಯದಲ್ಲಿ ನಟ ಉಪೇಂದ್ರ ಜೊತೆ ಅವರು ಪ್ರೀತಿಯಲ್ಲಿದ್ದಾರೆ ಎಂಬ ರೂಮರ್ಸ್ ಹರಿದಾಡಿದ್ದವು. ಆದರೆ ಈ ಸುದ್ದಿಗಳನ್ನು ಪ್ರೇಮಾ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಉಪೇಂದ್ರ ಜೊತೆ ರಿಲೇಷನ್‌ಶಿಪ್ ಇದೆ ಎಂಬ ಸುದ್ದಿ ಹೇಗೆ ಹುಟ್ಟಿಕೊಂಡಿತೋ ಗೊತ್ತಿಲ್ಲ ಎಂದು ಹೇಳಿರುವ ಅವರು, ಈ ಬಗ್ಗೆ ತಮ್ಮನ್ನಾಗಲಿ ಅಥವಾ ಉಪೇಂದ್ರ ಅವರನ್ನಾಗಲಿ ಯಾರೂ ನೇರವಾಗಿ ಪ್ರಶ್ನಿಸಿರಲಿಲ್ಲ ಎಂದಿದ್ದಾರೆ. ಆ ಸಮಯದಲ್ಲಿ ನಿಜಾಂಶ ತಿಳಿಯದೇ ಕೆಲವರು ತಮಗೆ ಇಷ್ಟ ಬಂದಂತೆ ಸುದ್ದಿಗಳನ್ನು ಹರಡಿದ್ದರು ಎಂದು ಪ್ರೇಮಾ ಹೇಳಿದ್ದಾರೆ. ಮುಖ್ಯವಾಗಿ, ಈ ರೂಮರ್ಸ್ ಬಗ್ಗೆ ಉಪೇಂದ್ರ ಕೂಡ ಎಂದಿಗೂ ತಮ್ಮೊಂದಿಗೆ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿನಿಮಾ ವಿಚಾರದಲ್ಲೂ ಮುಕ್ತ ಮಾತು

ಇದೇ ವೇಳೆ ಕನ್ನಡ ಚಿತ್ರರಂಗದ ತಮ್ಮ ನೆಚ್ಚಿನ ನಟರ ಬಗ್ಗೆ ಮಾತನಾಡಿರುವ ಪ್ರೇಮಾ, ಶಿವರಾಜ್‌ಕುಮಾರ್ ಅವರಿಂದ ನಟನೆಯಲ್ಲಿನ ಒಂದು ವಿಶೇಷ ಅಂಶವನ್ನು ಕಲಿತಿದ್ದಾಗಿ ಹೇಳಿದ್ದಾರೆ. ವಿಷ್ಣುವರ್ಧನ್ ಅವರಿಂದ ಶಿಸ್ತು ಹಾಗೂ ನಟನೆಯ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ‘ಚಂದ್ರಮುಖಿ’ ಸಿನಿಮಾದ ಪ್ರಭಾವ ನಟರ ವೈಯಕ್ತಿಕ ಜೀವನದ ಮೇಲೂ ಬೀರಿದೆ ಎಂಬ ಮಾತುಗಳನ್ನೂ ಅವರು ಒಪ್ಪಿಲ್ಲ.

ತಾವು ಇಂತಹ ಮೂಢನಂಬಿಕೆಗಳನ್ನು ನಂಬುವುದಿಲ್ಲ ಎಂದು ಹೇಳಿರುವ ಪ್ರೇಮಾ, ಯಾವುದೇ ವಿಚಾರವನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎಂಬುದರ ಮೇಲೆಯೇ ಅದರ ಪರಿಣಾಮ ಅವಲಂಬಿತವಾಗಿರುತ್ತದೆ ಎಂದಿದ್ದಾರೆ. ಹೀಗೆ ಹಲವು ವರ್ಷಗಳಿಂದ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮೌನವಾಗಿದ್ದ ನಟಿ ಪ್ರೇಮಾ, ಇದೀಗ ವಿಚ್ಛೇದನದಿಂದ ಹಿಡಿದು ತಮ್ಮ ಕುರಿತ ಹಳೆಯ ರೂಮರ್ಸ್‌ವರೆಗೆ ಹಲವು ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಅದರಲ್ಲೂ ಉಪೇಂದ್ರ ಜೊತೆಗಿನ ಪ್ರೀತಿ ಸುದ್ದಿ ಸುಳ್ಳು ಎಂದು ಪ್ರೇಮಾ ನೀಡಿರುವ ಸ್ಪಷ್ಟನೆ ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಲಂಕಾಧಿಪತಿ ಯಶ್ ಘರ್ಜನೆಗೆ ಬ್ರೇಕ್?: 'ರಾಮಾಯಣ' ಪ್ರಮೋಷನ್‌ಗೆ ಯಾಕಿಷ್ಟು ಸೈಲೆನ್ಸ್?
ಭಾರತದ ಶೇ.80ರಷ್ಟು ಚಿನ್ನ ಅಮಿತಾಭ್​ ಮೊಮ್ಮಗಳ ಮೈಮೇಲೆ? ನವ್ಯಾ ನವೇಲಿ ನಂದಾ ಚಿನ್ನದ ಡ್ರೆಸ್​ ಮಹಿಮೆ