ರುಕ್ಮಿಣಿ, ಕಯಾದು ಸೇರಿದಂತೆ ಸೌತ್‌ನಲ್ಲಿ ಈ ನಟಿಯರದ್ದೇ ಸುದ್ದಿ: ಭಾಷೆಯ ಗಡಿ ದಾಟಿದ ಬ್ಯೂಟೀಸ್!

Published : Sep 08, 2026, 05:17 PM IST
Actresses

ಸಾರಾಂಶ

ಮಮಿತಾ ಬೈಜು, ಕಯಾದು ಲೋಹರ್, ಭಾಗ್ಯಶ್ರೀ ಬೋರ್ಸೆ, ರುಕ್ಮಿಣಿ ವಸಂತ್ ಹಾಗೂ ಪ್ರೀತಿ ಮುಕುಂದನ್ ಸದ್ಯ ಸೌತ್ ಇಂಡಿಯನ್ ಸಿನಿಮಾದಲ್ಲಿ ಸಖತ್ ಡಿಮ್ಯಾಂಡ್‌ನಲ್ಲಿರುವ ಯಂಗ್ ಹೀರೋಯಿನ್ಸ್. ಈ ಐವರು ನಟಿಯರ ಸಿನಿ ಜರ್ನಿ ಇದೀಗ ಭಾರೀ ಗಮನ ಸೆಳೆಯುತ್ತಿದೆ.

ಸೌತ್ ಇಂಡಿಯನ್ ಸಿನಿಮಾ ಇಂಡಸ್ಟ್ರಿ ಸದ್ಯ ಹೊಸ ತಲೆಮಾರಿನ ನಾಯಕಿಯರ ಎಂಟ್ರಿಯಿಂದ ಮತ್ತಷ್ಟು ರಂಗೇರಿದೆ. ಅದರಲ್ಲೂ ಮಮಿತಾ ಬೈಜು, ಕಯಾದು ಲೋಹರ್, ಭಾಗ್ಯಶ್ರೀ ಬೋರ್ಸೆ, ರುಕ್ಮಿಣಿ ವಸಂತ್ ಹಾಗೂ ಪ್ರೀತಿ ಮುಕುಂದನ್ ಇದೀಗ ಸೌತ್ ಸಿನಿರಂಗದಲ್ಲಿ ತಮ್ಮದೇ ಛಾಪು ಮೂಡಿಸುತ್ತಿದ್ದಾರೆ. ಭಾಷೆಯ ಗಡಿ ಮೀರಿ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಈ ಐವರು ಯುವ ನಟಿಯರು, ಸ್ಟಾರ್ ಹೀರೋಗಳ ಸಿನಿಮಾಗಳಲ್ಲೂ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ‘ಯಾರೋ’ ಸಿನಿಮಾದ ಮೂಲಕ ಯಶಸ್ಸು ಕಂಡಿರುವ ಭಾಗ್ಯಶ್ರೀ ಬೋರ್ಸೆ, ಇದೀಗ ತಮಿಳಿನತ್ತ ಮುಖ ಮಾಡಿದ್ದಾರೆ. ಶಿವಕಾರ್ತಿಕೇಯನ್ ಜೊತೆ ‘ಸೆಯಾನ್’ ಸಿನಿಮಾದಲ್ಲಿ ನಟಿಸುತ್ತಿರುವ ಅವರು, ಮೋಹನ್‌ಲಾಲ್ ಅಭಿನಯದ ‘ಆಪರೇಷನ್ ಗಂಗಾ’ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಎಂಟ್ರಿ ಕೊಡುತ್ತಿದ್ದಾರೆ.

ಬ್ಯಾಕ್ ಟು ಬ್ಯಾಕ್ ಸಿನಿಮಾ

ಇತ್ತ ರುಕ್ಮಿಣಿ ವಸಂತ್ ಕೂಡ ಸೌತ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೈಗೆತ್ತಿಕೊಂಡಿದ್ದಾರೆ. ತೆಲುಗಿನಲ್ಲಿ ಜೂ.ಎನ್‌ಟಿಆರ್ ಜೊತೆ ‘ಡ್ರ್ಯಾಗನ್’ ಸಿನಿಮಾದಲ್ಲಿ ನಟಿಸುತ್ತಿರುವ ಅವರು, ತಮಿಳಿನಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಧರ್ಮನ್’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಮಲಯಾಳಂ ನಟ ನಿವಿನ್ ಪೌಲಿ ಅವರ 51ನೇ ಸಿನಿಮಾಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕಯಾದು ಲೋಹರ್ ಅವರದ್ದಂತೂ ಇನ್ನೂ ಜೋರು. ಒಂದೇ ಭಾಷೆಗೆ ಸೀಮಿತವಾಗದೆ ಸೌತ್‌ನ ಮೂರು ಚಿತ್ರರಂಗಗಳಲ್ಲೂ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ಈ ನಟಿ, ‘ಇಮ್ಮಾರ್ಟಲ್’ ಹಾಗೂ ‘ಐ ಆಮ್ ಗೇಮ್’ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ತೆಲುಗಿನಲ್ಲಿ ನಾನಿ ಜೊತೆ ‘ದಿ ಪ್ಯಾರಡೈಸ್’ ಸಿನಿಮಾದಲ್ಲಿ ನಟಿಸುತ್ತಿರುವ ಕಯಾದು, ತಮಿಳಿನಲ್ಲಿ ಸೂರ್ಯ ಅಭಿನಯದ ‘ಸೂರ್ಯ 48’ ಚಿತ್ರದಲ್ಲೂ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಇದರ ಜೊತೆಗೆ ಮಲಯಾಳಂನ ‘ತಾರಂ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಸಖತ್ ಬ್ಯುಸಿ

ಇನ್ನು ಕ್ಯೂಟ್ ಬ್ಯೂಟಿ ಮಮಿತಾ ಬೈಜು ಕೂಡ ಸೌತ್‌ನಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತೆಲುಗಿನಲ್ಲಿ ಸ್ಟ್ರೈಟ್ ಸಿನಿಮಾ ಅವಕಾಶಕ್ಕಾಗಿ ಕಾಯುತ್ತಿರುವ ಅವರು, ಸದ್ಯ ತಮಿಳಿನಲ್ಲಿ ಎರಡು ಸಿನಿಮಾಗಳು ಹಾಗೂ ಮಲಯಾಳಂನಲ್ಲಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹೀಗೆ ಈ ಐವರು ಯಂಗ್ ಹೀರೋಯಿನ್ಸ್ ಸೌತ್‌ನ ಬೇರೆ ಬೇರೆ ಭಾಷೆಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ವಿಶೇಷ. ಒಂದು ಕಾಲದಲ್ಲಿ ನಾಯಕಿಯರು ಒಂದು ಭಾಷೆಯ ಚಿತ್ರರಂಗಕ್ಕೆ ಸೀಮಿತವಾಗುತ್ತಿದ್ದರೆ, ಈಗಿನ ಜನರೇಷನ್ ನಟಿಯರು ಭಾಷೆಯ ಗಡಿ ದಾಟಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈ ಪಟ್ಟಿಯಲ್ಲಿರುವ ಐವರ ಮುಂದಿನ ಸಿನಿಮಾಗಳ ಮೇಲೆ ಇದೀಗ ಸಿನಿಪ್ರಿಯರ ಕಣ್ಣು ನೆಟ್ಟಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss Kannada ಮನೆಯಲ್ಲಿ ನಾನವನಲ್ಲ, ನಾನವನಲ್ಲ ಆಟ ಶುರು; ಹಾಗಾದ್ರೆ ಯಾರವನು?
'ಮಾಲ್ಗುಡಿ ಡೇಸ್' ಅಭಿಮಾನಿಗಳೇ, ಈ ಸುದ್ದಿ ಮಿಸ್ ಮಾಡ್ಕೋಬೇಡಿ: ಬರ್ತಿದೆ ಮತ್ತೊಂದು ಸ್ವಾಮಿ ಕಥೆ!