ಮೊದಲು ನಾವು ಭಾರತೀಯರು, ಆಮೇಲೆ ಮಾತೃಭಾಷೆ: ಶಿವರಾಜ್‌ಕುಮಾರ್‌

By Web DeskFirst Published Oct 1, 2019, 9:10 AM IST
Highlights

ಮೊದಲು ನಾವು ಭಾರತೀಯರು, ಆ ಮೇಲೆ ಮಾತೃಭಾಷೆ.

- ಇದು ನಟ ಶಿವರಾಜ್‌ಕುಮಾರ್‌ ಅವರ ಮಾತು. ಅವರ ಈ ಮಾತು ಸೋಷಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅನೇಕರು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಅವರು ಹಾಗೆ ಹೇಳಿದ್ದು ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಪ್ರೀ ರಿಲೀಸ್‌ ಈವೆಂಟ್‌ ಸಂದರ್ಭ.

ಟಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ‘ಸೈರಾ ನರಸಿಂಹ ರೆಡ್ಡಿ’ ಅಕ್ಟೋಬರ್‌ 2 ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ ಸೇರಿ ಕನ್ನಡದಲ್ಲೂ ಇದು ರಿಲೀಸ್‌ ಆಗುತ್ತಿದೆ. ಆ ಉದ್ದೇಶದಿಂದಲೇ ಚಿತ್ರ ತಂಡ ಭಾನುವಾರ ಬೆಂಗಳೂರಿನಲ್ಲಿ ಗ್ರಾಂಡ್‌ ಪ್ರೀ ರಿಲೀಸ್‌ ಈವೆಂಟ್‌ ಆಯೋಜಿಸಿತ್ತು. ಚಿತ್ರದ ನಾಯಕ ನಟ ಚಿರಂಜೀವಿ, ನಿರ್ಮಾಪಕ ರಾಮ್‌ಚರಣ್‌ ತೇಜ್‌, ನಾಯಕಿ ತಮನ್ನಾ, ನಿರ್ದೇಶಕ ಸುರೇಂದರ್‌ ರೆಡ್ಡಿ ಹಾಜರಿದ್ದರು. ಈ ಕಾರ್ಯಕ್ರಮಕ್ಕೆ ಶಿವರಾಜ್‌ ಕುಮಾರ್‌ ಮುಖ್ಯಅತಿಥಿ ಆಗಿ ಬಂದಿದ್ದರು.

‘ಅಪ್ಪಾಜಿ ಜತೆ ಚಿರಂಜೀವಿ ಅವರು ಯಾವಾಗಲೂ ಇದ್ದರು. ನಮ್ಮ ಮನೆಯ ಎಲ್ಲ ಸಮಾರಂಭಕ್ಕೂ ಅವರು ಬರುತ್ತಾರೆ. ಚಿರಂಜೀವಿ ನನ್ನ ಮತ್ತೊಬ್ಬ ಪುತ್ರ ಅಂತ ಅಪ್ಪಾಜಿ ಹೇಳುತ್ತಿದ್ದರು. ಹಾಗಾಗಿ ಅವರು ನನ್ನ ದೊಡ್ಡಣ್ಣನಂತೆ ಇದ್ದಾರೆ. ಅವರು ಅಭಿನಯಿಸಿದ ಚಿತ್ರದ ಕಾರ್ಯಕ್ರಮ. ನಾನು ಮಿಸ್‌ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ.

ಕಿಚ್ಚ ಸುದೀಪ್ ಕೊಟ್ಟರು ಸರ್‌ಪ್ರೈಸಿಂಗ್ ಗುಡ್ ನ್ಯೂಸ್!

ವಜ್ರೇಶ್ವರಿ ಕುಮಾರ್‌ ನನಗೆ ರಾಮ್‌ಚರಣ್‌ ಕಾಲ್‌ ಮಾಡ್ತಾರಂತೆ, ಕಾರ್ಯಕ್ರಮಕ್ಕೆ ನಿಮ್ಮನ್ನು ಅವರು ಕರೆಯಬೇಕಂತೆ ಅಂತ ಹೇಳಿದಾಗ ಅವರು ಕಾಲ್‌ ಮಾಡೋದು ಬೇಡ, ನಾನೇ ಬರುತ್ತೇನೆ ಅಂತ ಹೇಳಿದ್ದೆ. ಅಷ್ಟುಒಡನಾಟ ಅವರೊಂದಿಗೆ ಇದೆ’ ಎಂಬುದಾಗಿ ಚಿರಂಜೀವಿ ಅವರ ಕುಟುಂಬದೊಂದಿಗೆ ತಮಗಿರುವ ಒಡನಾಟ ನೆನಪಿಸಿಕೊಂಡರು ಶಿವಣ್ಣ.

ಆನಂತರ ‘ಸೈರಾ ನರಸಿಂಹ ರೆಡ್ಡಿ ಚಿತ್ರದ ಮೇಲಿನ ನಿರೀಕ್ಷೆ ಕುರಿತು ಮಾತನಾಡಿದರು.

‘ಈ ಚಿತ್ರ ಕ್ರೇಜ್‌ ಹೇಗಿದೆ ಅನ್ನೋದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ನಾನು ಕೂಡ ಅಕ್ಟೋಬರ್‌ 2 ರಂದೇ ಮೊದಲ ದಿನದ ಮೊದಲ ಶೋ ನೋಡುತ್ತೇನೆ. ರಾಮ್‌ಚರಣ್‌ ಹ್ಯಾಂಡ್‌ ಸಮ್‌ ಹೀರೋ. ಇವತ್ತು ನಿರ್ಮಾಪಕರಾಗಿ ಇಷ್ಟುದೊಡ್ಡ ಸಿನಿಮಾ ಮಾಡಿದ್ದಾರೆ. ಚಿರಂಜೀವಿ ಅವರ ಅಭಿನಯ, ವ್ಯಕ್ತಿತ್ವದ ಕುರಿತು ಮಾತನಾಡುವಷ್ಟುನಾನು ದೊಡ್ಡವನಲ್ಲ, ಅವರು ಲೆಜೆಂಡ್‌.

ಸೈರಾ ಕನ್ನಡ ಟೀಸರ್‌ ಧ್ವನಿ ಯಾರದು?

ನಾನು ಪವನ್‌ ಕಲ್ಯಾಣ್‌ ಅಭಿಮಾನಿ. ಅವರ ಫ್ಯಾಮಿಲಿ ಸಿನಿಮಾ ಅಂದ್ರೆ ತಮಾಷೆಯೇ ಅಲ್ಲ. ಇದು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಜತೆಗೆ ಕನ್ನಡದಲ್ಲೂ ಬಿಡುಗಡೆ ಆಗುತ್ತಿರುವುದು ಖುಷಿ ತಂದಿದೆ. ಮೊದಲು ನಾವೆಲ್ಲ ಭಾರತೀಯರು, ಆಮೇಲೆ ಮಾತೃಭಾಷೆ’ ಎಂದರು ಶಿವರಾಜ್‌ಕುಮಾರ್‌.

click me!